Uncategorized

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಗೊತ್ತುವಳಿ ಪಾಸ್ ಮಾಡಿ! ಇಲ್ಲವೇ ಪಾಲಿಕೆ ಸೂಪರ್ ಸೀಡ್ ಮಾಡಿ!

ಬೆಳಗಾವಿ:

ಮಹಾನಗರ ಪಾಲಿಕೆಯಲ್ಲಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂತ ಗೊತ್ತುವಳಿ ಮಂಡಿಸುವಂತೆ ಬೆಳಗಾವಿಯಲ್ಲಿ ನಗರಾಭಿವೃದ್ದಿ ಸಚಿವ ಯತೀಂದ್ರ ಸಿದ್ದರಾಮಯ್ಯಗೆ ಕನ್ನಡಪರ ಹೋರಾಟಗಾರರು ಮನವಿ ಮಾಡಿದ್ದಾರೆ.ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಗೊತ್ತುವಳಿ ಮಂಡಿಸುವಂತೆ ಆಗ್ರಹಿಸಿದ್ದು ಪಾಲಿಕೆಯಲ್ಲಿ ಗೊತ್ತುವಳಿ ನಿರ್ಣಯ ಪಾಸ್ ಮಾಡದೇ ಹೋದರೆ ಸೂಪರ್ ಸೀಡ್ ಮಾಡುವಂತೆ ಕನ್ನಡ ಪರ ಹೋರಾಟಗಾರರು ಮನವಿ ಮಾಡಿದ್ದಾರೆ.ಈಗಾಗಲೇ ಸಿಎಂ ಹಾಗೂ ಸಚಿವರಿಗೆ, ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ.ತಕ್ಷಣ ಗೊತ್ತುವಳಿ ಮಂಡಿಸಲಿಕೆ ಕ್ರಮ ಕೈಗೊಳ್ಳುವಂತೆ ಸಚಿವರಿಗೆ ಮನವಿ ಮೂಲಕ ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ.
ಇದೇ ವೇಳೆ ಬೆಳಗಾವಿ ಯಾವತ್ತು ಕರ್ನಾಟಕದ ಅವಿಭಾಜ್ಯ ಅಂಗ ಎಂದು ಸಚಿವ ಯತೀಂದ್ರ ಹೇಳಿದರು.
ಕಾರ್ಯದರ್ಶಿ ಅವರಿಗೆ ಪತ್ರ ಬಂದಿದೆ ನಮ್ಮ ಗಮನಕ್ಕೆ ತಂದಿಲ್ಲಾ ನಾನು ಮಾಹಿತಿ ಪಡೆದುಕೊಂಡು ಕ್ರಮ ತೆಗದುಕ್ಕೊಳ್ಳುತ್ತೇನೆ.ಕಾನೂನು ರೀತಿಯಲ್ಲಿ ಏನು ಕ್ರಮ ಕೈಗೊಳ್ಳಬೇಕು ಅದನ್ನ ಮಾಡುತ್ತೇವೆ ಗೋತ್ತುವಳಿ ಪಾಸ್ ಮಾಡುವ ವಿಚಾರದಲ್ಲಿ ಯಾವುದೇ ರಾಜಕೀಯ ಒತ್ತಡ ಇಲ್ಲ ಎಂದರು ಈ ವೇಳೆ ಕನ್ನಡ ಪರ ಹೋರಾಟಗಾರರು ಮಹಾನಗರ ಪಾಲಿಕೆಯಲ್ಲಿ ಗೊತ್ತುವಳಿ ಮಂಡನೆ ಆಗದೆ ಹೋದರೆ ಪಾಲಿಕೆಯನ್ನ ಸೂಪರ್ ಸೀಡ್ ಮಾಡಿ ಎಂದು ಆಗ್ರಹಿಸಿದರು.

TV24 News Desk
the authorTV24 News Desk

Leave a Reply

error: Content is protected !!