


ಬೆಳಗಾವಿ:
ಬೆಳಗಾವಿಯಲ್ಲಿ ನಗರಾಭಿವೃದ್ದಿ ಸಚಿವ ಯತೀಂದ್ರ ಸಿದ್ದರಾಮಯ್ಯ ಮಾಧ್ಯಮಗಳೊಂದಿಗೆ ಮಾತನಾಡಿ ಇಂದು ನಮ್ಮ ನಗರಾಭಿವೃದ್ಧಿ ವ್ಯಾಪ್ತಿಯಲ್ಲಿ ಬರುವ ಮಹಾನಗರ ಪಾಲಿಕೆ ಹಾಗೂ ಬೆಳಗಾವಿ ನಗರಾಭಿವೃದ್ಧಿ ಕುರಿತು ಪ್ರಗತಿ ಪರಿಶೀಲನೆ ನಡೆಸಲಿದ್ದೇನೆ ಎಂದರು.ಬೆಳಗಾವಿ ಮಹಾನಗರ ಪಾಲಿಕೆಗೆ ಮುಖ್ಯಮಂತ್ರಿ ವಿಶೇಷ ಅನುದಾನ ಬರುತ್ತಿದ್ದು ಈಗ ನಿಲುಗಡೆ ಆಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು ಇದರ ಬಗ್ಗೆ ನನಗೆ ಎನು ಅಂತಾ ಮಹಿತಿ ಇಲ್ಲಾ ಮಾಹಿತಿ ಕೇಳುತ್ತೆನೆ ಎಂದರು.
ಚುನಾಯಿತಿ ಪ್ರತಿನಿಧಿಗಳ ಬಾಡಿ ಎಲ್ಲಿ ಇರಲ್ಲಾ ಅಲ್ಲಿ ಹಣ ಬರಲ್ಲಾ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ಹಣ ಬರುತ್ತೆ ಎಂದರು ಇನ್ನು ಚುನಾವಣಾ ರಾಜಕಾರಣದಿಂದ ಸಿದ್ದರಾಮಯ್ಯ ಹಿಂದೆ ಸರಿದ್ರಾ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಸಿಎಂ ಸಿದ್ದರಾಮಯ್ಯ ಅವರು ರಾಜಿನಾಮೇ ಕೊಡಬೇಕಾದ್ರೆ ಹೇಳಿದ್ರು ನಾನು ಮುಂದಿನ ಚುನಾವಣೆಗೆ ರಾಜಕೀಯ ನಿವೃತ್ತಿ ತೆಗೆದುಕ್ಕೊಳ್ಳುತ್ತೇನೆ ಅಂತ ಹೇಳಿದ್ರು ಆದರೆ ಸಕ್ರೀಯ ರಾಜಕಾರಣದಲ್ಲಿ ಇರ್ತಿನಿ, ಯಾರು ದುರ್ಬಲರು, ಶೋಷಿತರು ಇರ್ತಾರೆ ಅವರ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡುತ್ತೇನೆ ಎಂದು ಹೇಳಿದ್ರು.
ಅದನ್ನೆ ಮತ್ತೊಂದು ಭಾರಿ ಹೇಳಿದ್ದಾರಷ್ಟೇ ಚುನಾವಣೆ ವೇಳೆ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡೇ ಮಾಡುತ್ತಾರೆ ಚುನಾವಣೆಗೆ ನಿಂತಕ್ಕೊಳ್ಳಬೇಕು ಅಂತ ಏನಿಲ್ಲಾ ಖಂಡಿತ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡೆ ಮಾಡುತ್ತಾರೆ ಎಂದು ಯತೀಂದ್ರ ಹೇಳಿದರು.
ಇನ್ನು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿನ ಸ್ಮಾರ್ಟ್ ಸಿಟಿ ರಸ್ತೆಗಳನ್ನ ಎಲ್ ಆಂಡ್ ಟಿ ಅವರು ಅಗೆದಿರುವ ವಿಚಾರಕ್ಕೆ
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ 24×7 ನೀರು ಪೊರೈಕೆ ಮಾಡುವ ಕಾಮಗಾರಿ ಕೈಗೆತ್ತಿಕ್ಕೊಂಡಿದ್ದಾರೆ.ರಸ್ತೆಯನ್ನು ಎಲ್ಲಿ ಅಗೆದಿದ್ದಾರೆ ಅದೇ ಕಾಮಾಗಾರಿಯಲ್ಲಿ ಅವರು ಸರಿ ಮಾಡಿ ಕೊಡಲೇಬೇಕು.ಎಲ್ಲೆಲ್ಲಿ ಅಗೆದಿದ್ದಾರೆ ಅದನ್ನ ಆದಷ್ಟು ಸರಿಪಡಿಸಬೇಕು ಎಂದು ನಾನು ಸೂಚನೆ ಕೊಡುತ್ತೇನೆ ಎಂದರು ಇನ್ನು ಬೆಳಗಾವಿ ಜಿಲ್ಲೆಗೆ ಏನಾದರೂ ವಿಶೇಷ ಯೋಜನೆಗಳನ್ನ ನೀಡುವ ವಿಚಾರಕ್ಕೆ ಮಾತನಾಡಿ ಅವರು
ಇವತ್ತೆನೆ ನಾನು ಮೀಟಿಂಗ್ ತೆಗೆದುಕ್ಕೊಳ್ಳುತ್ತಿದ್ದೇನೆ ಏನೇನು ಬೇಕೆಂದು ಮಾಹಿತಿ ಪಡೆಯುತ್ತೇನೆ ಬೆಳಗಾವಿಗೆ ಬೇಕಾಗಿರುವ ಕಾಮಗಾರಿಗಳನ್ನ ನೋಡಿ ರಾಜ್ಯ ಸರ್ಕಾರದಿಂದ ಕೊಡಿಸುವಂತಹ ಕೆಲಸ ಮಾಡುತ್ತೇನೆ ಎಂದರು.
ಇನ್ನು ಸಚಿವ ಸಂಪುಟ ರಚನೆ ವಿಚಾರಕ್ಕೆ ಮಾತನಾಡಿದ ಅವರು ಹೈಕಮಾಂಡ ಅವರು ಸಿಎಂ ಅವರನ್ನ ತಂದೆ ಅವರನ್ನ ಕರೆದಿದ್ದಾರೆ.ಚರ್ಚೆ ಆದ ಮೇಲೆ ತೀರ್ಮಾನ ಮಾಡಿ ಸಂಪುಟ ವಿಸ್ತರಣೆ ಮಾಡುತ್ತಾರೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು.








