ಬೆಳಗಾವಿ

ಮಾಜಿ ಡಿಸಿಎಂ ಸವದಿ ಬಿಜೆಪಿಗೆ ರಾಜಿನಾಮೆ..? 

ಸಿಎಂ ಜ ಬೊಮ್ಮಾಯಿಗೆ ಸಿಎಂ ಆಗುವ ಭಾಗ್ಯ ಇಲ್ಲ. ಪ್ರಧಾನಿ ಆಗುವ ಯೋಗ ಇದೆ:ಲಕ್ಷ್ಮಣ ಸವದಿ 
ಅಥಣಿ: ಟಿಕೆಟ್ ತಪ್ಪಿಸಿಕೊಂಡಿರುವ ಮಾಜಿ ಡಿಸಿಎಂ ಈಗ ಬಿಜೆಪಿ ಪಕ್ಷದ ಸದಸ್ಯತ್ವಕ್ಕೆ ರಾಜಿನಾಮೆ ನೀಡುವ ನಿರ್ಧಾರ ತೆಗೆದುಕೊಂಡಿದ್ದಾರೆ.ಇಂದು ಅಥಣಿ ಪಟ್ಟಣದಲ್ಲಿ ಸುದ್ದಿಗೋಷ್ಟಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ನಿಷ್ಠಾವಂತನಿಗೆ ಗೌರವ ಇರದ ಪಕ್ಷದಲ್ಲಿ ಇರುವ ಅಗತ್ಯತೆ ಇಲ್ಲ. ವಿಧಾನಪರಿಷತ್ ಸ್ಥಾನಕ್ಕೂ ರಾಜಿನಾಮೆ ನೀಡುವಂತೆ ಎಂದು ಕ್ಷೇತ್ರದ ಜನತೆ ಸಲಹೆ ನೀಡಿದ್ದಾರೆ. ನಾನೂ ಕೂಡ ಸ್ವಾಭಿಮಾನಿ ರಾಜಕಾರಣಿ. ಲಜ್ಜೆಗೆಟ್ಟ ರಾಜಕಾರಣಿ ಅಲ್ಲ. ಅಧಿಕಾರದ ಅಮಲಿನಲ್ಲೂ ನಾನಿಲ್ಲ. ನಾನು ಯಾರ ಬೆನ್ನಿಗೂ ಚೂರಿ ಹಾಕಿಲ್ಲ. ಆದರೆ, ನನ್ನ ಹೈ ಕಮಾಂಡ್ ನನ್ನ ಜನತೆ. ಜನತೆ ತೀರ್ಮಾಣಕ್ಕೆ ಬದ್ಧನಾಗಿದ್ದು ತಕ್ಷಣ ವಿಧಾನಪರಿಷತ್ ಸದಸ್ಯತ್ವ ಸೇರಿದಂತೆ ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜಿನಾಮೆ ನೀಡುವ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದರು.ರಮೇಶ್ ಜಾರಕಿಹೊಳಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಲಕ್ಷ್ಮಣ ಸವದಿ, ‘ನನ್ನೊಂದಿಗೆ ಸ್ನೇಹದಿಂದ ಇದ್ದ, ಪ್ರೀತಿಯಿಂದ ನೋಡುತ್ತಿದ್ದ ಸಿಎಂ ಬಸವರಾಜ ಬೊಮ್ಮಾಯಿಗೆ ಈಗ ಎರಡನೇ ಬಾರಿಗೆ ಸಿಎಂ ಆಗುವ ಭಾಗ್ಯ ಇಲ್ಲ. ಪ್ರಧಾನಿ ಆಗುವ ಯೋಗ ಇದೆ. ಇದೆಲ್ಲದರ ನಡುವೆ ನನಗೂ ಒಬ್ಬರು ಗುರು ಇದ್ದಾರೆ. ಅವರ ಮಾತು ಮೀರುವ ಪರಿಸ್ಥಿತಿ ಬಂದಿದೆ. ಕ್ಷಮಿಸಿ ಗುರುವೇ’ ಎಂದು ಸಿಎಂ ವಿರುದ್ಧವೂ ಪರೋಕ್ಷವಾಗಿ ಮಾತಿನ ತಿರುಗೇಟು ಕೊಟ್ಟರು.ಪಕ್ಷಾಂತರ ವಿಷಯವಾಗಿ ಪ್ರತಿಕ್ರಯಿಸಿದ ಸವದಿ, ‘ಇಷ್ಟೆಲ್ಲ ಆದರೂ ಬಿಜೆಪಿ ವರಿಷ್ಟರಾರೂ ನನ್ನನ್ನು ಸಂಪರ್ಕಿಸಿಲ್ಲ. ಆದರೆ, ಇತರ ಪಕ್ಷಗಳ ಅನೇಕ ಮುಖಂಡರು ಸಂಪರ್ಕದಲ್ಲಿದ್ದಾರೆ. ನಾಳೆಯೇ ಗಟ್ಟಿ, ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇನೆ’ ಎಂದು ಪಕ್ಷ ಬದಲಾವಣೆಯ ಮುನ್ಸೂಚನೆ ನೀಡಿದರು.ಕಾಗೆ ಭೇಟಿ ಇದೇ ಸಂದರ್ಭದಲ್ಲಿ ಲಕ್ಷ್ಮಣ ಸವದಿ ಮನೆಗೆ ಮಾಜಿ ಶಾಸಕ ಹಾಗೂ ಸವದಿ ಸ್ನೇಹಿತ ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಭೇಟಿ ನೀಡಿ ಚರ್ಚಿಸಿದ್ದಾರೆ. ಅರ್ಧ ಗಂಟೆಗಯೂ ಹೆಚ್ಚು ಹೊತ್ತು ಮಾತುಕತೆ ನಡೆಸಿದ ಹಳೇ ಸ್ನೇಹಿತರು ಹೊಸ ಲೆಕ್ಕಾಚಾರ ಹಾಕಿದ್ದು, ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆ ಪಕ್ಕಾ ಎನ್ನುವಂತೆ ಮಾಡಿದೆ.
TV24 News Desk
the authorTV24 News Desk

Leave a Reply