



ಬೆಳಗಾವಿ;
ರಾಜಕೀಯದಲ್ಲಿ ಸಕ್ರೀಯವಾಗಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಧ್ಯ ಸಿನಿಮಾರಂಗಕ್ಕೂ ಕಾಲಿಟ್ಟಿದ್ದಾರೆ. ರಾಜಕಾರಣ ಜೊತೆಗೆ ಸಿನಿಮಾ ರಂಗದಲ್ಲೂ ಸಹ ಛಾಪು ಮೂಡಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಜ್ಜಾಗಿದ್ದಾರೆ. ತಮ್ಮ ಮೊಮ್ಮಗಳು ಐರಾ ಹೆಸರಿನ ಐರಾ ಪ್ರೋಡಕ್ಷನ್ ಹೌಸ್ ಪ್ರಾರಂಭಿಸಿದ್ದಾರೆ. ಐರಾ ಪ್ರೊಡಕ್ಷನ್ ಹೌಸ್ ಪ್ರಾರಂಭಿಸಿರುವ ಕುರಿತು ಲಕ್ಷ್ಮೀ ಹೆಬ್ಬಾಳಕರ್ ಈವರೆಗೆ ಎಲ್ಲೂ ಹೇಳಿಕೊಂಡಿಲ್ಲ. ಸಧ್ಯ ಐರಾ ಪ್ರೊಡಕ್ಷನ್ ಹೌಸ್ ನಿಂದ ಎರಡು ಚಿತ್ರಗಳನ್ನು ನಿರ್ಮಾಣ ಮಾಡಲಿದ್ದಾರೆ. ಚಂದನವನದ ಖ್ಯಾತನಾಮ ನಟರಾದ ರಮೇಶ ಅರವಿಂದ್ಣ ಗೋಲ್ಡನ್ ಸ್ಟಾರ್ ಗಣೇಶ ಹಾಗೂ ಡಾಲಿ ಧನಂಜಯ್ ಚಿತ್ರದಲ್ಲಿ ನಾಯಕರಾಗಿ ಬಣ್ಣ ಹಚ್ಚಲಿದ್ದಾರೆ ಎನ್ನಲಾಗಿದೆ.ಪ್ರೊಡಕ್ಷನ್ ಹೌಸ್ ತೆರೆದಿರುವ ಕುರಿತು ಅವರ ಕುಟುಂಬದ ಆಪ್ತ ಮೂಲಗಳಿಂದ ಅಧಿಕೃತ ಮಾಹಿತಿ ತಿಳಿದು ಬಂದಿದ್ದು