Uncategorized

ಅಬೋಲಿ ಗೋವಾಕಡೆ ಹೋಗಾವ್ರ ಒಂದ ಸ್ವಲ್ಪ ಈ ಸುದ್ದಿ ಓದ್ರಿಪಾ!

ಮಹಾರಾಷ್ಟ್ರ:

ಬೆಳಗಾವಿ: ಕರ್ನಾಟಕಕ್ಕೆ ಹೊಂದಿಕೊಂಡಿರುವ ಅಂಬೋಲಿ ಫಾಲ್ಸ್ ಬಳಿ ಬೃಹತ್ ಗುಡ್ಡ ಕುಸಿತವಾಗಿ ಭಾರಿ ಅನಾಹುತ ಸಂಭವಿಸಿದೆ.ಗುಡ್ಡದಿಂದ ಬೃಹತ್ ಗಾತ್ರದ ಬಂಡೆಗಳು ಉರುಳಿ ರಸ್ತೆಯ ಮೇಲೆ ಬಂದು ಬಿದ್ದಿದ್ದು ಮಧ್ಯರಾತ್ರಿ ಸಂಚಾರಕ್ಕೆ ಪ್ರಯಾಣಿಕರು ಪರದಾಡಿದ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳಗಾವಿ ಮಾರ್ಗವಾಗಿ ಗೋವಾಗೆ ಸಂಪರ್ಕ ಕಲ್ಪಿಸುವ ರಸ್ತೆಯ ಮೇಲೆ ಬೃಹತ್ ಗಾತ್ರದ ನಾಲ್ಕು ಬಂಡೆಗಳು ಉರುಳಿ ಬಿದ್ದಿದ್ದು ಎಂಥವರ ಎದೆಯನ್ನೂ ಕೂಡ ಝಲ್ ಎನಿಸುವಂತಿದೆ.

ಮಹಾರಾಷ್ಟ್ರದ ಸಾವಂತವಾಡಿ ತಾಲೂಕಿನಲ್ಲಿರುವ ಅಂಬೋಲಿ ಫಾಲ್ಸ್ ಬಳಿ ತಡರಾತ್ರಿ ಗುಡ್ಡದ ಮೇಲಿಂದ ರಸ್ತೆಗೆ ನಾಲ್ಕು ಬೃಹತ್ ಬಂಡೆಗಳು ಉರಳಿ ಬಿದ್ದಿದ್ದು, ಭಾರಿ ಅನಾಹುತ ತಪ್ಪಿದೆ.

ಇದರಿಂದ ಮಧ್ಯರಾತ್ರಿ ಕೆಲಹೊತ್ತು ಬೆಳಗಾವಿ-ಸಿಂಧದುರ್ಗ ಸಂಚಾರ ತಾತ್ಕಾಲಿಕ ಸ್ಥಗಿತವಾಗಿತ್ತು.‌ ಮಧ್ಯರಾತ್ರಿಯಿಂದಲೇ ಚಂದಗಡ ಅಗ್ನಿಶಾಮಕ ಸಿಬ್ಬಂದಿಯಿಂದ ಹಾಗೂ ಸಿಂಧದುರ್ಗ ಉಸ್ತುವಾರಿ ಸಚಿವ ನಿತೇಶ ರಾಣೆ ಸೂಚನೆ ಮೇರೆಗೆ ಬಂಡೆಗಳ ತೆರವು ಮಾಡಿಸಲಾಗಿದೆ.‌ ಒಂದು ಮಾರ್ಗದಲ್ಲಿ ಸಂಚಾರಕ್ಕೆ ಮಹಾರಾಷ್ಟ್ರ ಪೊಲೀಸರು ಅವಕಾಶ ಮಾಡಿಕೊಟ್ಟಿದ್ದಾರೆ.ಮಹಾರಾಷ್ಟ್ರದಿಂದ ಹಾಗೂ ಕರ್ನಾಟಕದಿಂದ ಗೋವಾಕ್ಕೆ ತೆರಳುವ ಪ್ರಯಾಣಿಕರು ಎಚ್ಚರಿಕೆಯಿಂದ ಸಾಗಲು ಮಹಾರಾಷ್ಟ್ರ ಹಾಗೂ ಗೋವಾ ಸರ್ಕಾರಗಳು ಕೋರಿವೆ.ಅನಿವಾರ್ಯವಾದರೆ ಮಾತ್ರ ಪ್ರಯಾಣ ಬೆಳೆಸುವಂತೆ ಸರ್ಕಾರಗಳು ಮನವಿ ಮಾಡಿವೆ.

TV24 News Desk
the authorTV24 News Desk

Leave a Reply