Uncategorized

ಕಿತ್ತೂರು ಉರ್ದು ಶಾಲೆಗೆ ಮಳೆ‌ ನೀರು ಹೊಕ್ಕು ಅವಾಂತರ ಮಕ್ಕಳಿಂದಲೇ ನೀರು ಹೊರಹಾಕುವ ಕಾರ್ಯ!!

ಬೆಳಗಾವಿ:

ಬೆಳಗಾವಿಯಲ್ಲಿ ಸುರಿದ ಮಳೆಗೆ ಶಾಲೆಯೊಳಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
ಶಾಲೆಯೊಳಗೆ ಹೊಕ್ಕ ನೀರು ಹೊರಹಾಕಲು ವಿದ್ಯಾರ್ಥಿಗಳು ಪರದಾಟ ನಡೆಸಿದ್ದಾರೆ.ಹೀಗಾಗಿ
ಶಾಲಾ ಶಿಕ್ಷಕರ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದ ಸೋಮವಾರ ಪೇಟೆಯಲ್ಲಿರುವ ಉರ್ದು ಶಾಲೆಯಲ್ಲಿ ಘಟನೆ ನಡೆದಿದ್ದು
ಪಟ್ಟಣದ ಉರ್ದು ಶಾಲೆಯಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.ಬೆಳಗ್ಗೆ ಮಕ್ಕಳು ಶಾಲೆಗೆ ಆಗಮಿಸಿದಾಗ ಶಾಲೆಯ ತುಂಬೆಲ್ಲಾ ಮಳೆ ನೀರು ತುಂಬಿಕೊಂಡು ಕೆಸರು ಮಯವಾದ ನೀರನ್ನ ಹೊರಹಾಕಲು ವಿದ್ಯಾರ್ಥಿಗಳ ಹರಸಾಹಸ ಪಟ್ಟಿದ್ದಾರೆ.
ಮಳೆಯಾದರೆ ಸಾಕು ಶಾಲಾ ಆವರಣಕ್ಕೆ ಮಳೆ ನೀರು ನುಗ್ಗಿ ಮಕ್ಕಳು ಶಾಲೆಯೊಳಗೆ ಹೆಜ್ಜೆ ಇಡಲು ಅನುಕೂಲವಾದ ಪರಿಸ್ಥಿತಿ ನಿರ್ಮಾಣವಾಗುತ್ತೆ.ಕೆಲ ತಿಂಗಳ ಹಿಂದಷ್ಟೇ ಶಾಲಾ ಮೈದಾನ ಸುಧಾರಣೆಯ ಕಾಮಗಾರಿಯನ್ನು ಅಧಿಕಾರಿಗಳು ಕೈಗೊಂಡಿದ್ದರು ಅಷ್ಟಾದರೂ ಸಹ ಮಳೆ ನೀರಿನಿಂದ ಮಕ್ಕಳು ತೊಂದರೆ ಅನುಭವಿಸುತ್ತಿರುವುದಕ್ಕೆ
ಕಾಮಗಾರಿ ಮಾಡಿದ ಅಧಿಕಾರಿ, ಗುತ್ತಿಗೆದಾರನ ವಿರುದ್ದ ಸ್ಥಳೀಯರ ಆಕ್ರೋಶ ಹೊರಹಾಕಿದ್ದಾರೆ.

TV24 News Desk
the authorTV24 News Desk

Leave a Reply

error: Content is protected !!