ಬೆಳಗಾವಿ:
ವ್ಯಕ್ತಿಯೋರ್ವನನ್ನು ಕೊಲೆ ಮಾಡಿ ಕಬ್ಬಿನ ಗದ್ದೆಗೆ ಎಸೆದು ದುಷ್ಕರ್ಮಿಗಳು ಪರಾರಿಯಾಗ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದಲ್ಲಿ ನಡೆದಿದೆ.ಕೊಲೆಯಾದ ವ್ಯಕ್ತಿಯನ್ನು ಶಶಿಕಾಂತ್ ಕೃಷ್ಣಾ ಹೊನ್ನಕಾಂಬಳೆ(55) ಎಂದು ಗುರುತಿಸಲಾಗಿದೆ.ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ಆದರೆ ಮನೆಯ ವ್ಯಾಜ್ಯಕ್ಕಾಗಿ ಸಮಾಜದ ನಡುವೆ ಜಗಳವಾಗಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಶಶಿಕಾಂತ ಹೊನ್ನಕಾಂಬಳೆ ಹಾಗೂ ಅವರ ಕುಟುಂಬಸ್ಥರನ್ನು ಸಮಾಜದಿಂದ ಬಹಿಷ್ಕರಿಸಲಾಗಿತ್ತು ಎನ್ನಲಾಗಿದೆ.ನಿನ್ನೆ ಸಂಜೆ ತಮ್ಮ ತಂದೆಯನ್ನು ಕರೆಸಿ ಈ ರೀತಿ ಮಾಡಿದ್ದಾರೆ ಎಂದು ಶಶಿಕಾಂತ ಮಗ ರಾಹುಲ್ ಹೊನ್ನಕಾಂಬಳೆ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದು ತಮ್ಮ ತಂದೆಯನ್ನು ಕೊಲೆ ಮಾಡಿದವರಿಗೆ ತಕ್ಕ ಶಿಕ್ಷೆ ಆಗಬೇಕು, ತಮಗೆ ನ್ಯಾಯ ಸಿಗದಿದ್ದರೆ ಕಾಗವಾಡ ಪೊಲೀಸ್ ಠಾಣೆಯ ಮುಂದೆ ನಾನು ಹಾಗೂ ನನ್ನ ತಾಯಿ ಜೀವ ಬಿಡುತ್ತೆವೆ ಎಂದು ಎಚ್ಚರಿಕೆ ನೀಡಿದ್ದಾರೆ.ಈ ಕುರಿತು ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

