Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿ

ಹೆಚ್ಚಿನ ಅಂತರದಲ್ಲಿ ಈ ಬಾರಿ ಗೆಲುವಾಗಲಿದೆ: ಹೆಬ್ಬಾಳಕರ್

ಬೆಳಗಾವಿ: ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ನಿನ್ನೆ ಸಂಜೆ ಮುತಗಾದಲ್ಲಿ ಭಾರೀ ಜನಸ್ತೋಮದ ಮಧ್ಯೆ ಪ್ರಚಾರ ನಡೆಸಿದರು. ಈ ವೇಳೆ ಮಾತನಾಡಿ, ನಾನು ಅಭಿವೃದ್ಧಿಯನ್ನು ಮುಂದಿಟ್ಟು ನಿಮ್ಮಲ್ಲಿ ಮತ ಕೇಳುತ್ತೇನೆ. ನಿಮ್ಮ ಮನೆಯ ಮಗಳಾಗಿ, ಅಕ್ಕನಾಗಿ, ತಂಗಿಯಾಗಿ, ತಾಯಿಯಾಗಿ ನಿಮ್ಮ ಆಶಿರ್ವಾದ ಕೇಳುತ್ತಿದ್ದೇನೆ. ವಾಸ್ತವದ ಆಧಾರದ ಮೇಲೆ ನೀವು ನನ್ನನ್ನು ಬೆಂಬಲಿಸಿ. ಯಾವುದೇ ಬಣ್ಣದ ಮಾತುಗಳಿಗೆ ಮರುಳಾಗಬೇಡಿ. ಈ ಬಾರಿ ಕಳೆದ ಬಾರಿಗಿಂತ ಹೆಚ್ಚಿನ ಅಂತರದಿಂದ ಗೆಲುವು ಸಾಧಿಸುವಂತೆ ಮಾಡಿ ಎಂದು ಕೋರಿದರು.
ಕಳೆದ 5 ವರ್ಷದಲ್ಲಿ ನಾನು ಮಾಡಿರುವ ಅಭಿವೃದ್ಧಿ ಕೆಲಸಗಳ ಕಾರಣದಿಂದಾಗಿ 2018ರ ವಿಧಾನ ಸಭೆ ಚುನಾವಣೆಗಿಂತ ದೊಡ್ಡ ಪ್ರಮಾಣದ ಅಂತರದಲ್ಲಿ ಈ ಬಾರಿ ಗೆಲುವಾಗಲಿದೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾನು ಯಾವುದೇ ಊರಿಗೆ ಹೋದರೂ ನೀವು ತೋರಿಸುತ್ತಿರುವ ಪ್ರೀತಿಗೆ ಮಿತಿಯೇ ಇಲ್ಲ. ನಿಮ್ಮಂತಹ ಜನರನ್ನು ಪಡೆದ ನಾನೇ ಧನ್ಯ. ಮುಂದಿನ 5 ವರ್ಷ ಅಷ್ಟೇ ಅಲ್ಲ, ಕೊನೆಯ ಉಸಿರಿರುವವರೆಗೂ ನಿಮ್ಮ ಸೇವೆ ಮಾಡುವ ಶಕ್ತಿಯನ್ನು ದೇವರು ಕೊಡಲೆಂದು ಪ್ರಾರ್ಥಿಸುತ್ತೇನೆ. ಪ್ರತಿಯೊಬ್ಬರೂ ನಿಮ್ಮ ಸಂಬಂಧಿಕರು, ಪರಿಚಯಸ್ತರ ಬಳಿ ನನ್ನ ಪರವಾಗಿ ಮತ ಯಾಚನೆ ಮಾಡಿ ಎಂದು ಹೆಬ್ಬಾಳಕರ್ ವಿನಂತಿಸಿದರು.
TV24 News Desk
the authorTV24 News Desk

Leave a Reply

error: Content is protected !!