ಬೆಳಗಾವಿ

ಕನ್ನಡ ಕಡ್ಡಾಯ ಮಾಡದಂತೆ ಎಂಇಎಸ್ ಕ್ಯಾತೆ!

ಬೆಳಗಾವಿ:

ಬೆಳಗಾವಿಯಲ್ಲಿ ಮತ್ತೆ ಎಂಇಎಸ್ ಪುಂಡರು ತಮ್ಮ ಕ್ಯಾತೆ ಮುಂದುವರೆಸಿದ್ದಾರೆ. ರಾಜ್ಯದಲ್ಲಿ ಕನ್ನಡ ಕಡ್ಡಾಯವಾಗಿದ್ದರೂ ಸಹ ಅದನ್ನು ಹಿಂಪಡೆಯುವಂತೆ ಎಂಇಎಸ್ ಪುಂಡರ ಹೊಸ ವರಸೆ ತೆಗೆದಿದ್ದಾರೆ.ಈ ಕುರಿತು ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಮಂಗೇಶ ಪವಾರ್ ಗೆ ಮನವಿ ಸಲ್ಲಿಸಿದ್ದಾರೆ.ಮರಾಠಿ ಭಾಷೆಯಲ್ಲಿಯೇ ದಾಖಲೆಗಳನ್ನು ಕೊಡಬೇಕು ಎಂದು ಕ್ಯಾತೆ ತೆಗೆದಿದ್ದಾರೆ.ಮೇಯರ್ ಮಂಗೇಶ ಪವಾರ್ ವಾಹನಕ್ಕೆ ಕನ್ನಡದ ಭಾಷೆ ನಂಬರ್ ಪ್ಲೆಟ್ ಅಳವಡಿಕೆಗೂ ಎಂಇಎಸ್ ಪುಂಡರ ವಿರೋಧ ವ್ಯಕ್ತಪಡಿಸಿದ್ದಾರೆ.ಬೆಳಗಾವಿ ಸೇರಿದಂತೆ 865 ಹಳ್ಳಿಗಳು ಮರಾಠಿ ಬಹುಭಾಷಾ ಭಾಷೆಯಾಗಿವೆ ಈ ಪ್ರದೇಶದಲ್ಲಿ ಕನ್ನಡ ಕಡ್ಡಾಯ ಮಾಡೋದು ಭಾಷಾ ಅಲ್ಪಸಂಖ್ಯಾತ ಆಯೋಗದ ಹಕ್ಕುಗಳ ಉಲ್ಲಂಘನೆಯಾಗುತ್ತದೆ‌ ಹೀಗಾಗಿ ಕಡ್ಡಾಯ ಕನ್ನಡವನ್ನು ಕೈಬಿಡಬೇಕೆಂದು ಮನವಿ ಸಲ್ಲಿಸಿದ್ದಾರೆ.ಈ ಜಾಗಗಳಲ್ಲಿ ಕನ್ನಡ ಕಡ್ಡಾಯಗೊಳಿಸಿದರೆ ಬೀದಿಗಿಳಿದು ಪ್ರತಿಭಟಿಸುತ್ತೇವೆ ಎಂದು ಎಂಇಎಸ್ ನಾಯಕರು ಕ್ಯಾತೆ ತೆಗೆದಿದ್ದಾರೆ.

TV24 News Desk
the authorTV24 News Desk

Leave a Reply