ಬೆಳಗಾವಿ:
ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿಯಾಗಿ ಬೆಳಗಾವಿಯಲ್ಲಿ ಎರಡು ವರ್ಷ ಸೇವೆ ಸಲ್ಲಿಸಿದ ರೋಹನ್ ಜಗದೀಶ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಸಧ್ಯ ಅವರನ್ನು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು ರೋಹನ್ ಜಗದೀಶ ರಿಂದ ತೆರವಾದ ಡಿಸಿಪಿ ಸ್ಥಾನಕ್ಕೆ ಹೊಸಬರನ್ನು ರಾಜ್ಯ ಸರ್ಕಾರ ಇನ್ನೂ ಆದೇಶ ಹೊರಡಿಸಿಲ್ಲ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ರೋಹನ್ ಜಗದೀಶ ಅವರು ಹಲವಾರು ಜನಪರ ಕೆಲಸಗಳನ್ನು ಮಾಡಿದ್ದರು. ಮಟ್ಕಾ ದಂಧೆ,ಅಕ್ರಮ ಸಾರಾಯಿ ರೇಡ್, ಕಳ್ಳಬಟ್ಟಿ ದಂಧೆಗೆ ಕಡಿವಾಣ ಹಾಕಿ ಜನಪರ ಅಧಿಕಾರಿ ಎನ್ನಿಸಿಕೊಂಡಿದ್ದರು.
