ಕ್ರೈಂಬೆಳಗಾವಿ

ಐದು ಸಾವಿರಕ್ಕಾಗಿ ಬಿತ್ತು ಯುವ ಗಾಯಕನ ಹೆಣ!

ಬೆಳಗಾವಿ:

ಬೆಳಗಾವಿಯಲ್ಲಿ ಕೇವಲ ಐದು ಸಾವಿರ ರೂಪಾಯಿಗಾಗಿ ಸಿಂಗರ್ ಮರ್ಡರ್ ಆಗಿದೆ.ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೂದಿಹಾಳ ಗ್ರಾಮದ ಬಳಿ ಘಟನೆ ನಡೆದಿದ್ದು ಕೊಲೆಯಾದವನನ್ನು
ಮಾರುತಿ ಅಡಿವೆಪ್ಪ ಲಠ್ಠೆ(22) ಎಂದು ಗುರುತಿಸಲಾಗಿದೆ. ಮಾರಕಾಸ್ತ್ರಗಳಿಂದ ಮಾರುತಿಯನ್ನು ಕೊಚ್ಚಿ ಬಳಿಕ ಕಾರು ಹಾಯಿಸಿ ಬರ್ಬರ ಹತ್ಯೆಗೈದು ಆರೋಪಿಗಳು ಪರಾರಿಯಾಗಿದ್ದಾರೆ.ಮಾರುತಿ ಉತ್ತರ ಕರ್ನಾಟಕದ ಶೈಲಿಯಲ್ಲಿ ಹಾಡುಗಳನ್ನು ರಚಿಸಿ ಹಾಡುಗಳನ್ನಹ ಹಾಡಿ ರಂಜಿಸುತ್ತಿದ್ದ ಕಲಾವಿದ. ತನ್ನದೇ ಯೂಟ್ಯೂಬ್ ಚಾನೆಲ್ ನಲ್ಲಿ ಹಾಡುಗಳನ್ನ ಕಂಪೋಸ್ ಮಾಡಿ ಹಾಡಿ ಹೆಸರು ಮಾಡಲು ಮಾರುತಿ ಹವಣಿಸುತ್ತಿದ್ದ. ಸಧ್ಯ ಕೇವಲ ಐದು ಸಾವಿರ ರೂಪಾಯಿಗಾಗಿ ದುಷ್ಕರ್ಮಿಗಳು ಮಾರುತಿಯನ್ನು ಹತ್ಯೆಗೈದಿದ್ದಾರೆ.ಈರಪ್ಪ ಅಕ್ಕಿವಾಟೆ ಸೇರಿ ಹತ್ತು ಜನರಿಂದ‌ ಬರ್ಬರವಾಗಿ ಮಾರುತಿ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಬೈಕ್ ಮೇಲೆ‌ ತನ್ನ ಸ್ನೇಹಿತನ ಜೊತೆಗೆ ಬರ್ತಿದ್ದ ಮಾರುತಿಯನ್ನು ಬೈಕ್ ಅಡ್ಡಗಟ್ಟಿ ಕೊಲೆ ಮಾಡಿದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಆರೋಪಿ ಈರಪ್ಪ ಎಂಬಾತನ ಬಳಿ ಐದು ಸಾವಿರ ಸಾಲ ಪಡೆದಿದ್ದ ಎನ್ನಲಾಗಿದೆ.ಕಬ್ಬಿನ ಗ್ಯಾಂಗ್ ನಲ್ಲಿ ಕೆಲಸ ಮಾಡಲು ಬರುವುದಾಗಿ ಈರಪ್ಪ ಬಳಿ ಹಣವನ್ನು ಮಾರುತಿ ಪಡೆದಿದ್ದ ಎನ್ನಲಾಗಿದೆ.ಆದರೆ ಇತ್ತಿಚೆಗೆ ಮಾರುತಿಗೆ ಹಾಡಿನಲ್ಲಿ ಡಿಮ್ಯಾಂಡ್ ಬಂದ ಹಿನ್ನೆಲೆ ಕಬ್ಬಿನ ಗ್ಯಾಂಗ್ ಕೆಲಸ ಬಿಟ್ಟು ಹಾಡು ಬರೆಯುವುದು ಹಾಡುವುದರಲ್ಲಿ ಬಿಜಿಯಾಗಿದ್ದ ಎನ್ನಲಾಗಿದೆ.ಇತ್ತ
ಕೆಲಸಕ್ಕೂ ಹೋಗದೇ ಹಣ ವಾಪಾಸ್ ನೀಡದ ಹಿನ್ನೆಲೆ ಹತ್ಯೆ‌ಯಾಗಿದೆ ಎನ್ನಲಾಗಿದೆ.
ಹತ್ಯೆ ಬಳಿಕ ಮಾರುತಿ ಮೇಲೆ ಕಾರು ಹತ್ತಿಸಿ ಆರೋಪಿಗಳ ಗ್ಯಾಂಗ್ ಪರಾರಿಯಾಗಿದೆ.
ಈ ವೇಳೆ ಕಾರು ಕೂಡ ಪಲ್ಟಿಯಾಗಿ ಆರೋಪಿಗಳು ಸಹ ಗಾಯಗೊಂಡಿದ್ದಾರೆ.
ಆರೋಪಿಗಳಿಗೆ ಸಧ್ಯ ಗೋಕಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಡಾಗುತ್ತಿದೆ.ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಯಬಾಗ ಪೊಲೀಸ್ ಠಾಣೆಯಲ್ಲಿ 11ಜನರ ವಿರುದ್ಧ ಕೇಸ್ ದಾಖಲಾಗಿದ್ದು‌
ಸಿದ್ದರಾಮ ವಡೆಯರ್ ಮತ್ತು ಆಕಾಶ್ ಪೂಜಾರಿ ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. .

TV24 News Desk
the authorTV24 News Desk

Leave a Reply