




ಬೆಳಗಾವಿ
ಬೆಳಗಾವಿಯಲ್ಲಿ ಸಿನಿಮೀಯ ರಿತೀಯಲ್ಲಿ ವೈದ್ಯನ ಕಿಡ್ನಾಪ್ ಮಾಡಿ ಮಾರಣಾಂತಿಕ ಹಲ್ಲೆ ಆರೋಪ ಕೇಳಿಬಂದಿದೆ.ಕಿಡ್ನಾಪ್ ಮಾಡಿ 2ಗಂಟೆ ಚಿತ್ರಹಿಂಸೆ ಕೊಟ್ಟು ಮಾರಣಾಂತಿಕ ಹಲ್ಲೆ ನಡೆದಲಾಗಿದೆ.ಈ ಕುರಿತು ಕೇಸ್ ದಾಖಲಾದ್ರು ಈವರೆಗೂ ಆರೋಪಿಗಳನ್ನು ಪೊಲೀಸರು ಬಂಧಿಸದ ಆರೋಪವೂ ಸಹ ಕೇಳಿಬಂದಿದೆ.ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸವದಿ ಗ್ರಾಮದಲ್ಲಿ ಘಟನೆ ನಡೆದಿದ್ದು
ಅಥಣಿ ತಾಲೂಕಿನ ಮಹೀಷವಾಡಗಿ ಗ್ರಾಮದ ನಿವಾಸಿ ವೈದ್ಯ ಡಾ.ಆನಂದ ಉಪಾಧ್ಯಾಯ ಎಂಬುವವರ ಮೇಲೆ ಜುಲೈ 10ರಂದು ಶಾಲಾ ಕ್ಯಾಂಪ್ ನಿಂದ ಕಿಡ್ನಾಪ್ ಮಾಡಿ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ. ಸಧ್ಯ ಗಂಭೀರವಾಗಿ ಗಾಯಗೊಂಡ ಡಾ. ಆನಂದ ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಶ್ರೀಪದ್ಮಾವತಿ ಇಂಟರ್ ನ್ಯಾಷನಲ್ ಸ್ಕೂಲ್ ಮಾಲೀಕರೂ ಸಹ ಆನಂದ ಆಗಿದ್ದು ಆನಂದ ತೇಲಿ ಕುಟುಂಬದ ಜೊತೆಗೆ ಸೇರಿ 2018 ರಲ್ಲಿ ಸ್ಕೂಲ್ ಆರಂಭಿಸಿದ್ದರು ಎನ್ನಲಾಗಿದೆ.ಆನಂತರ ಹಣಕಾಸಿನ ವಿಚಾರದಲ್ಲಿ ಗಲಾಟೆ ನಡೆದ ಆರೋಪವಿದೆ.ತೇಲಿ ಎಂಬುವವರ ಕುಟುಂಬಕ್ಕೆ 1ಕೋಟಿ 80ಲಕ್ಷ ಹಣ ನೀಡಿ ಶಿಕ್ಷಣ ಸಂಸ್ಥೆಯಿಂದ ಹೊರಹಾಕಿದ್ದ ಆರೋಪ ಡಾ.ಆನಂದ ಮೇಲಿದೆ.ಆ ಬಳಿಕ ಸ್ಕೂಲ್ ವಿಚಾರವಾಗಿ ಹೈಕೋರ್ಟ್ ನಲ್ಲಿ ಕೇಸ್ ಕೂಡ ದಾಖಲಾಗಿದೆ.
ಕಾಡಪ್ಪ ತೇಲಿ, ಸಿದ್ದಪ್ಪ ತೇಲಿ, ಸಿದ್ದರಾಯ ತೇಲಿ, ಶೀಶೈಲ ತೇಲಿ, ಧರೆಪ್ಪಾ ತೇಲಿ, ಮಲ್ಲಪ್ಪಾ ತೇಲಿ, ನಾಗಪ್ಪ ಬಿರಡಿ ಸೇರಿ 25ಜನರಿಂದ ಹಲ್ಲೆ ಆರೋಪ ಕೇಳಿ ಬಂದಿದೆ.
ಹಲ್ಲೆ ಮಾಡಿದ ಆರೋಪಿ ವಿರುದ್ಧ ಅಥಣಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ ಕಿಡ್ನಾಪ್ ಆದ ತಕ್ಷಣವೇ ಅಥಣಿ ಪೊಲೀಸರ ಗಮನಕ್ಕೆ ಡಾಕ್ಟರ್ ಆನಂದ ಕುಟುಂಬ ತಂದಿತ್ತು.ಆದರೆ ತಕ್ಷಣವೇ ರಕ್ಷಣೆ ಮಾಡದೇ ನಿರ್ಲಕ್ಷ್ಯ ತೋರಿಸಿದ ಆರೋಪ ಅಥಣಿ ಸಿಪಿಐ, ಪಿಎಸ್ಐ ಮೇಲೆ ಕುಟುಂಬಸ್ಥರು ಮಾಡುತ್ತಿದ್ದಾರೆ.
ನಿರ್ಲಕ್ಷ್ಯ ತೋರಿಸಿದ ಪೊಲೀಸ್ ಅಧಿಕಾರಿ, ಸಿಬ್ಬಂದಿ ಅಮಾನತು ಮಾಡಲು ಬೆಳಗಾವಿ ಎಸ್ಪಿಗೆ ಮನವಿ ಮಾಡಿದ್ದಾರೆ.
ಬೆಳಗಾವಿ ಎಸ್ಪಿ ಗಮನಕ್ಕೆ ಬಂದ ಬಳಿಕವೇ ಅಥಣಿ ಪೊಲೀಸರು ಕೇಸ್ ದಾಖಲಿಸಿಕೊಳ್ಳಲಾಗಿದೆ ಎನ್ನಲಾಗಿದೆ ಎನ್ನಲಾಗಿದೆ.ಇನ್ನು ಘಟನೆಯ ಕುರಿತು ಮಾತನಾರುವ ಹಲ್ಲೆಗೊಳಗಾದ ಆನಂದ ಶಾಲೆಗೆ
9ನೇ ತರಗತಿಯ ವಿದ್ಯಾರ್ಥಿ ಕೈಗೆ ಕೈಕಡ ಹಾಕಿಕೊಂಡು ಬಂದಿದ್ದನು
ಶಾಲೆಗೆ ಹೀಗೆ ಬರದಂತೆ ಎರಡು ಹೊಡೆದು ಬುದ್ಧಿವಾದ ಹೇಳಿರುವೆ ಎಂದ ಹಲ್ಲೆಗೊಳಗಾದ ಆನಂದ ಹೇಳಿದ್ದಾರೆ.ಆ ಘಟನೆಗೂ ನನ್ನ ಮೇಲೆ ಹಲ್ಲೆಗೂ ಯಾವುದೇ ಸಂಬಂಧವಿಲ್ಲ ಎಂದ ಡಾ. ಆನಂದ ಹೇಳಿಕೆ ನೀಡಿದ್ದಾರೆ.ಸಧ್ಯ ಅಥಣಿ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರ ತನಿಖೆಯ ನಂತರ ನಿಜಾಂಶ ಹೊರಬರಲಿದೆ.