ಕಲಬುರ್ಗಿ

ಪತ್ನಿಯನ್ನು ಕೊಲೆ ಮಾಡಿದ ಪತಿಗೆ ಜೀವಾವಧಿ ಶಿಕ್ಷೆ

ಕಲಬುರಗಿ : ಚಿತ್ತಾಪುರ ತಾಲ್ಲೂಕಿನ ವಾಡಿ ಪಟ್ಟಣದ ನಿವಾಸಿ ಮಹಾದೇವಸಿಂಗ್ ಎಂಬ ವ್ಯಕ್ತಿ 2014 ರ ಜುಲೈ 3 ರಂದು ಪತ್ನಿ ಶಾರುಬಾಯಿಯನ್ನು ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದ, ಆರೋಪ ಸಾಬೀತಾದ್ದರಿಂದ 4 ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಕಲಬುರಗಿ( ಚಿತ್ತಾಪುರ ಪೀಠ) ಅಪರಾಧಿಗೆ ಜೀವಾವಧಿ ಜೈಲು ಶಿಕ್ಷೆ ವಿಧಿಸಿದೆ. ಚಿತ್ತಾಪುರ ತಾಲ್ಲೂಕಿನ ವಾಡಿ ಪಟ್ಟಣದ ನಿವಾಸಿ ಮಹಾದೇವಸಿಂಗ್ ಎಂಬ ವ್ಯಕ್ತಿ 2014 ರ ಜುಲೈ 3 ರಂದು ಪತ್ನಿ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದ, ಕೊಲೆಯಾದ ಶಾರುಬಾಯಿ ಪಾಲಕರು ವಾಡಿ ಠಾಣೆಗೆ ದೂರು ಸಲ್ಲಿಸಿದ್ದರು.ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಾದ ಪ್ರತಿವಾದ ಆಲಿಸಿದ 4 ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕರಣ್ ಗುಜ್ಜರ್ ಅವರು ಮಹಾದೇವಸಿಂಗ್ ಗೆ ಜೀವಾವಧಿ ಶಿಕ್ಷೆ ಮತ್ತು 5 ಸಾವಿರ ರೂ ದಂಡ ವಿಧಿಸಿದ್ದಾರೆ.ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ನಾಗರಾಜ ಕಳ್ಳಿಮನೆ ವಾದ ಮಂಡಿಸಿದರು.

TV24 News Desk
the authorTV24 News Desk

Leave a Reply