ಬೆಳಗಾವಿ:
ಬೆಳಗಾವಿಯಲ್ಲಿ ರಮೇಶ ಜಾರಕಿಹೊಳಿ ಪುತ್ರ ಸಂತೋಷ್ ಜಾರಕಿಹೊಳಿ ಪೈರಿಂಗ್ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ
ಗೋಕಾಕ ಪಟ್ಟಣದಲ್ಲಿನ ಮಹಾಲಕ್ಷ್ಮಿ ಜಾತ್ರೆಯಲ್ಲಿ ಸಂತೋಷ್ ಫೈರಿಂಗ್ ಮಾಡಿದ್ದಾರೆ
ಗಾಳಿಯಲ್ಲಿ ಒಂದು ಸುತ್ತಿನ ಗುಂಡು ಸಂತೋಷ ಜಾರಕಿಹೊಳಿ ಹಾರಿಸಿದ್ದು ಸಧ್ಯ ಮಾದ್ಯಮಗಳಲ್ಲೂ ಈ ಸುದ್ದಿ ಬಿತ್ತರವಾಗಿದೆ.ಅಲ್ಲದೆ ಸೋಷಿಯಲ್ ಮೀಡಿಯಾದಲ್ಲೂ ಸಹ ವಿಡಿಯೋ ಹರಿದಾಡುತ್ತಿದೆ. ಸಮಾನ್ಯವಾಗಿ ಜಾತ್ರೆಗಳಲ್ಲಿ ಮತ್ತು ಹೋಳಿ ಹುಣ್ಣಿಮೆಯಂತಹ ಹಬ್ಬಗಳಲ್ಲಿ ಗಾಳಿಯಲ್ಲಿ ಒಂದು ರೌಂಡು ಗುಂಡು ಹಾರಿಸಲಾಗುತ್ತದೆ. ಗಾಳಿಯಲ್ಲಿ ಗುಂಡು ಹಾರಿಸಿದ ನಂತರವೇ ಪದ್ಧತಿಯ ಪ್ರಕಾರ ಕೈಂಕರ್ಯಗಳು ಪ್ರಾರಂಭವಾಗುವುದನ್ನು ಕಾಣಬಹುದು. ಸಧ್ಯ ರಮೇಶ ಜಾರಕಿಹೊಳಿ ಪುತ್ರ ಸಂತೋಷ್ ಜಾರಕಿಹೊಳಿ ಫೈರಿಂಗ್ ಯಾಕಾಗಿ ಮಾಡಿದ್ರು ಅವರ ಕೈಗೆ ಬಂದೂಕು ತಂದು ಕೊಟ್ಟವರು ಯಾರು,ಪದ್ಧತಿಯ ಪ್ರಕಾರವಾ ಎಂದು ಸಂತೋಷ್ ಜಾರಕಿಹೊಳಿಯವರೇ ಉತ್ತರ ನೀಡಬೇಕಿದೆ. ಅದ್ಯಾಗೂ ಬೆಳಗಾವಿ ಪೊಲೀಸರು ಶಾಸಕ ರಮೇಶ ಪುತ್ರ ಸಂತೋಷ್ ಮೇಲೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು ತನಿಖೆ ನಡೆದ ಸಂತರವೇ ಸತ್ಯಾಂಶ ಹೊರಬರಲಿದೆ.


