ಬೆಳಗಾವಿ: ನಿರಂತರ ಮಳೆಗೆ ಬೆಳಗಾವಿಯ ನಗರದಲ್ಲಿ ಒಟ್ಟು ಏಳು ಮನೆಗಳು ನೆಲಸಮವಾಗವೆ. ಬೆಳಗಾವಿ ನಗರದ ಕಾಕತಿ ವೇಸ್ ಗಲ್ಲಿಯಲ್ಲಿ ಮನೆ ಬಿದ್ದು ಅವಾಂತರವೇ ಸೃಷ್ಟಿಯಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮನೆ ಕುಸಿದಿದ್ದರಿಂದ ಐವರು ಬಚಾವ್ ಆಗಿದ್ದಾರೆ. ಇನ್ನು ನಗರದ ಪಾಟೀಲ್ ಮಾಳ, ಚವಾಟ್ ಗಲ್ಲಿ, ವಡ್ಡರವಾಡಿಯಲ್ಲಿ ಮನೆಗಳು ಬಿದ್ದು ಜನ ಬೀದಿಗೆ ಬಿದ್ದಿದ್ದಾರೆ. ಸ್ಥಳಕ್ಕೆ ಮಹಾನಗರ ಪಾಲಿಕೆ ಸಿಬ್ಬಂಧಿ ಮಹಾನಗರ ಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಸೂಕ್ತ ಪರಿಹಾರನ್ನು ಸರ್ಕಾರದಿಂದ ಕೊಡಿಸುವಂತೆ ಅಧಿಕಾರಿಗಳಿಗೆ ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ.

