ಜಿಲ್ಲೆಬೆಳಗಾವಿ

ಸಂಜೀವಿನಿ ನೀಡಿದ ಸಿಎಂಗೆ ಋಣಿ ಎಂದ ಬೆಳಗಾವಿ ಪತ್ರಕರ್ತರು!

ಬೆಳಗಾವಿ

ಪತ್ರಿಕಾ ದಿನದಂದು ರಾಜ್ಯದ ಪತ್ರಕರ್ತರಿಗೆ ಮುಖ್ಯಮಂತ್ರಿಗಳ ಮಾಧ್ಯಮ ಸಂಜೀವಿನಿ ಯೋಜನೆ ಘೋಷಣೆ ಮಾಡಿದ ಸನ್ಮಾನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಭಿನಂದನೆಗಳು. ಮಾನ್ಯತೆ ಪಡೆದ ಪತ್ರಕರ್ತರಿಗೆ ಈ ಯೋಜನೆ ಅಡಿ ಐದು ಲಕ್ಷ ರೂಪಾಯಿ ನಗದು ರಹಿತ ಉಚಿತ ಆರೋಗ್ಯ ಸೇವೆ ಸಿಗಲಿದೆ. ಈ ಹಿಂದೆ ಅನೇಕ ಪತ್ರಕರ್ತಕರು ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ವೆಚ್ಚ ಭರಿಸಲಾಗದೆ ಬಹಳಷ್ಟು ಸಂಕಷ್ಟ ಅನುಭವಿಸಿದ್ರು. ಜೊತೆಗೆ ಅನೇಕ ಪತ್ರಕರ್ತರು ಚಿಕಿತ್ಸೆ ವೆಚ್ಚ ಭರಿಸಲಾಗದೆ ಮೃತಪಟ್ಟಿರೋ ಘಟನೆಗಳು ಸಹ ನಡೆದಿದ್ದವು. ಆರೋಗ್ಯಕ್ಕಾಗಿ ಸಾಲ ಶೂಲ ಮಾಡಿ ತೊಂದರೆಗೆ ಒಳಗಾಗುತ್ತಿದ್ದರು. ಆದರೇ ರಾಜ್ಯ ಸರ್ಕಾರದ ಈ ನಿರ್ಧಾರ ಪತ್ರಕರ್ತರಿಗೆ ಸಾಕಷ್ಟು ಅನಕೂಲ ಆಗಲಿದೆ.

ಜೊತೆಗೆ ಗ್ರಾಮೀಣ ಭಾಗದ ಪತ್ರಕರ್ತರಿಗೆ ಅನೇಕ ವರ್ಷಗಳ ಬೇಡಿಕೆಯಾಗಿದ್ದ ಬಸ್ ಪಾಸ್ ಅನ್ನು ಸಹ ಸರ್ಕಾರ ಈಡೇರಿಸಿದೆ. ಇದಕ್ಕಾಗಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಪುಟದ ಎಲ್ಲಾ ಸಹದ್ಯೋಗಿಗಳಿಗೆ ಹಾಗೂ ವಾರ್ತಾ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ಅಭಿನಂದನೆಗಳು. ಪತ್ರಕರ್ತರ ಬೇಡಿಕೆಯನ್ನು ಸರ್ಕಾರ ಮಟ್ಟದಲ್ಲಿ ಗಮನ ಸೆಳೆದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್ ಅವರಿಗೆ ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಅಸೋಸಿಯೇಷನ್ ಪತ್ರಿಕಾ ಪ್ರಕಟನೆ ಹೊರಡಿಸುವುದರ ಮೂಲಕ ಧನ್ಯವಾದ ತಿಳಸಿದೆ.

TV24 News Desk
the authorTV24 News Desk

Leave a Reply