ಕ್ರೈಂಜಿಲ್ಲೆಬೆಳಗಾವಿ

ಪಿಎಸ್ಐ ಅಮಾನತು! ಯಾಕೆ? ಎಲ್ಲಿ? ಎನು? ಹೇಗೆ ಈ ಸುದ್ದಿ ಓದಿ

ಬೆಳಗಾವಿ:

*

*

*

*

*

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹತ್ವದ ಬೆಳವಣಿಗೆಯಾಗಿದೆ.
ಗೋವು ಹಿಡಿದ ನಂತರ ಗೋವುಗಳ ಸಮೇತ ಠಾಣೆಗೆ ಶ್ರೀರಾಮ ಸೇನೆ ಕಾರ್ಯಕರ್ತರು ಹೋಗಿದ್ದರು ಎನ್ನಲಾಗಿದೆ.
ಈ ವೇಳೆ ಎಫ್‌ಐಆರ್ ಮಾಡದೇ ಬಿಟ್ಟು ಕಳ್ಸಿ ನಿರ್ಲಕ್ಷ್ಯ ತೋರಿದ್ದಕ್ಕೆ ಪಿಎಸ್ಐ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ
ಹುಕ್ಕೇರಿ ಪೊಲೀಸ್ ಠಾಣೆ ಪಿಎಸ್‌ಐ ನಿಖಿಲ್ ಕಾಂಬ್ಳೆಯನ್ನ ಅಮಾನತು‌ಮಾಡಿ
ಎಸ್‌ಪಿ ಭೀಮಾಶಂಕರ್ ಗುಳೇದ್ ಆದೇಶ ಹೊರಡಿಸಿದ್ದಾರೆ.
ಜೂನ್ 26ರಂದು ಗೋವು ಸಾಗಿಸುತ್ತಿದ್ದ ವಾಹನ ಹಿಡಿದು ಶ್ರೀರಾಮ ಸೇನೆ ಕಾರ್ಯಕರ್ತರು ಠಾಣೆಗೆ ತಂದಿದ್ದರು.ಈ ವೇಳೆ ಕೇಸ್ ದಾಖಲಿಸದೇ ಬಿಟ್ಟು ಕಳ್ಸಿದ್ದ ಆರೋಪ ಪಿಎಸ್‌ಐ ಮೇಲೆ ಬಂದಿತ್ತು.ಪಿಎಸ್ಐ ಘಟನೆ ಕುರಿತು ಮೇಲಾಧಿಕಾರಿಗಳ‌ ಗಮನಕ್ಕೆ ತರದೇ ಬೇಜವಾಬ್ದಾರಿ ತೋರಿದ್ದರು ಎನ್ನಲಾಗಿದೆ.ಗಡಿಪಾರಾದ ರೌಡಿ ಶೀಟರ್ ಶ್ರೀರಾಮ ಸೇನೆ ಕಾರ್ಯಕರ್ತ ಮಹಾವೀರ್ ಸೊಲ್ಲಾಪುರೆಯನ್ನ ಕೂಡ ಪಿಎಸ್ ಐ ಬಿಟ್ಟು ಕಳಿಸಿದ್ದರು.ಎಲ್ಲ ಅಂಶಗಳನ್ನ ಪರಿಗಣಿಸಿ ಎಸ್ಪಿ ಭೀಮಾಶಂಕರ್ ಗುಳೇದ ಪಿಎಸ್ಐ ನಿಖಿಲ್ ರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.ಈ ಬೆಳವಣಿಗೆಯ ಬೆನ್ನಲ್ಲೆ ಜುಲೈ 3ರಂದು ಇಂಗಳಿ ಚಲೋಗೆ ಶ್ರೀರಾಮಸೇನೆ ಸಂಘಟನೆ ಕರೆ ನೀಡಿದೆ. ಸಧ್ಯ ಶ್ರೀರಾಮ ಸೇನೆ ಸಂಘಟನೆ
ಪ್ರತಿಭಟನೆಗೂ ಮುನ್ನ ಪಿಎಸ್‌ಐ ಅಮಾನತು ಮಾಡಿ ಎಸ್ಪಿ ಭೀಮಾಶಂಕರ್ ಗುಳೇದ ಆದೇಶ. ಹೊರಡಿಸಿದ್ದಾರೆ.

TV24 News Desk
the authorTV24 News Desk

Leave a Reply