
ಬೆಳಗಾವಿ: ಬಿಜೆಪಿಯಿಂದ ಶಾಸಕ ಬಸನಗೌಡ ಯತ್ನಾಳ ಉಚ್ಛಾಟನೆ ವಿಚಾರಕ್ಕೆ ಸಂಬಂಧಿಸಿದಂತೆ
ಬೆಳಗಾವಿಯಲ್ಲಿ ಲಿಂಗಾಯತ ಪಂಚಮಸಾಲಿ ಮುಖಂಡರ ಸಭೆ ನಡೆಯಿತು. ಸಭೆಯ ಬಳಿಕ ಮಾಧ್ಯಮಗಳಿಗೆ ಬಸವಜಯಮೃತ್ಯುಂಜಯ ಸ್ವಾಮೀಜಿ
ಯಡಿಯೂರಪ್ಪ ಮತ್ತು ವಿಜಯೇಂದ್ರ ಕುತಂತ್ರದಿಂದ ಯತ್ನಾಳ ಉಚ್ಛಾಟನೆ ಆಗಿದ್ದಾರೆ ಎಂದು
ನೇರವಾಗಿ ಯಡಿಯೂರಪ್ಪ ಹಾಗೂ ವಿಜಯೇಂದ್ರ ಮೇಲೆ ಆರೋಪ ಮಾಡಿದರು.
ಸಭೆಯಲ್ಲಿ ಎಲ್ಲರ ಸಲಹೆಗಳನ್ನು ತೆಗೆದುಕೊಂಡಿದ್ದೆವೆ.
ಕರ್ನಾಟಕದಲ್ಲಿ ಲಿಂಗಾಯತರನ್ನು ಕಡೆಗಣಿಸಿ ಯಾವುದೇ ಸರ್ಕಾರಗಳು ಉದ್ಧಾರ ಆಗಿಲ್ಲ
ಜೆ ಹೆಚ್ ಪಟೇಲರ ಕಾಲದಿಂದಲೂ ಸಹ ಪಂಚಮಸಾಲಿಗಳು ನಿರ್ಣಾಯಕರಾಗಿದ್ದಾರೆ.
ಯಡಿಯೂರಪ್ಪ ನಂತರ ಬಸನಗೌಡ ಯತ್ನಾಳ ಅವರು ನಾಯಕರಾಗಿದ್ದರು.
ಉತ್ತರ ಕರ್ನಾಟಕದ ನಾಯಕತ್ವವನ್ನು ಕುಗ್ಗಿಸಬೇಕು ಎಂದು ಮಿಸ್ ಗೈಡ್ ಮಾಡಿ ಉಚ್ಛಾಟನೆ ಮಾಡಿದ್ದಾರೆ.
ಯತ್ನಾಳ ಅವರ ಹಿಂದೆ ಲಿಂಗಾಯತ ಸಮುದಾಯ ಒಳಪಂಗಡಗಳು ಇವೆ.
ಎಲ್ಲಾ ಜಾತಿಯ ಜನಾಂಗದ ಅಭಿಮಾನಿಗಳು ಹಿಂದೂಪರ ಸಂಘಟನೆಗಳು ಯತ್ನಾಳ ಅವರಿಗೆ ಬೆಂಬಲ ಕೊಟ್ಟಿವೆ.
ಲಿಂಗಾಯತ ಪಂಚಮಸಾಲಿ ನಾಯಕರುನ್ನು ಕಡೆಗಣಿಸಿ ನೀವು ಅಧಿಕಾರಕ್ಕೆ ಬರ್ತಿರಿ ಎನ್ನುವುದು ಭ್ರಮೆ.
ಕಳೆದ ಬಾರಿ ಮೀಸಲಾತಿ ಹೋರಾಟ ಪ್ರಾರಂಭ ಮಾಡಿದ್ದರಿಂದ ಜನರಿಗೆ ಸತ್ಯ ಗೊತ್ತಾಯ್ತು.
ಅಲ್ಲಿಯವರೆಗೂ ಎಲ್ಲರೂ ಅಪ್ಪ ಹೇಳಿದ ಮಾತನ್ನೆ ಕೇಳುತ್ತಿದ್ದರು ಎಂದರು.
ಮೀಸಲಾತಿ ಕೊಡ್ತಿನಿ ಎಂದು ಅಧಿಕಾರಕ್ಕೆ ಬಂದ ಯಡಿಯೂರಪ್ಪ ಹೋರಾಟ ಹತ್ತಿಕ್ಕುವ ಕೆಲಸ ಮಾಡಿದ್ರು.
ಅದರ ಪರಿಣಾಮವಾಗಿಯೇ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂತು.
ಸಿದ್ದರಾಮಯ್ಯ ಪೊಲೀಸರಿಗೆ ಕುಮ್ಮಕ್ಕು ಕೊಟ್ಟು ನಮ್ಮ ಜನಾಂಗದ ಮೇಲೆ ಹಲ್ಲೆ ಮಾಡಿಸಿದರು.
ಬಸನಗೌಡ ಯತ್ನಾಳ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಲಿ ಎಂದು ಸಮಾಜ ನಿರೀಕ್ಷೆ ಮಾಡಿತ್ತು.
ಇಂತಹ ಸಂದರ್ಭದಲ್ಲಿ ಅವರನ್ನು ಏಕಾಎಕಿ ಉಚ್ಚಾಟನೆ ಮಾಡಿದ ಬಿಜೆಪಿ ತನ್ನ ಕಾಲ ಮೇಲೆ ತಾನೇ ಕಲ್ಲು ಬೀಳಿಸಿಕೊಂಡಿದೆ.
ಬಿಜೆಪಿಯ ವಿರುದ್ಧ ಪ್ರಧಾನಿಗಳ ವಿರುದ್ದ ನಡ್ಡಾ ಅಮೀತ್ ಷಾ ಮೇಲೆ ಅಸಮಾಧಾನ ನಮಗೆ ಇಲ್ಲ.
ಕರ್ನಾಟಕದ ಕೆಲ ನಾಯಕರು ಮಿಸ್ ಗೈಡ್ ಮಾಡಿ ಯತ್ನಾಳರನ್ನು ಉಚ್ಛಾಟನೆ ಮಾಡಿದ್ದಾರೆ.
ನಾವು ಯತ್ನಾಳ ಅವರಿಗೆ ನೈತಿಕ ಬೆಂಬಲ ಕೊಡುತ್ತೆವೆ.
ಕೇಂದ್ರದ ಬಿಜೆಪಿ ವರಿಷ್ಟರಿಗೆ ಗಡುವುದು ಕೊಡುತ್ತಿದ್ದೆವೆ
ಏಪ್ರೀಲ್ 10 ರವರೆಗೆ ಗಡುವು ಕೊಡುತ್ತಿದ್ದವೆ.
ಅಷ್ಟರೊಳಗೆ ಸರಿಯಾದ ನಿರ್ಧಾರ ಪಡೆದುಕೊಳ್ಳದಿದ್ದರೆ ಏಪ್ರಿಲ್ 13 ರಂದು ದೊಡ್ಡ ಹೋರಾಟ ಮಾಡುತ್ತೆವೆ.
ಕರ್ನಾಟಕದ ಪಂಚಮಸಾಲಿಗಳು ಬಸನಗೌಡ ಪಾಟೀಲ್ ಅವರ ಅಭಿಮಾನಿಗಳು ಬೆಳಗಾವಿಯಲ್ಲಿ ಶಕ್ತಿ ಪ್ರದರ್ಶನ ಮಾಡುತ್ತೆವೆ.
ನಮ್ಮ ಸಮಾಜದ ಎಲ್ಲಾ ಶಾಸಕರು ಎಂಪಿಗಳು ನೀವು ನಿಮ್ಮ ಪಕ್ಷದ ವರಿಷ್ಠರ ಮನಸು ಒಲಿಸುವ ಪ್ರಯತ್ನ ಮಾಡಿ ಎಂದು ಸಲಹೆ ನೀಡಿದರು ಅಲ್ಲದೇ ಅನೇಕರು ಕೂಡಿ ಇವತ್ತು ನೈತಿಕ ಬೆಂಬಲ ಕೊಟ್ಟಿದ್ದಾರೆ.
ನೀವೇ ನಿಮ್ಮ ನಾಯಕರಿಗೆ ಪತ್ರ ಬರೆದು ನಿಮ್ಮ ನಾಯಕರಿಗೆ ಮನವಿ ಮಾಡಿ.
ಬಸನಗೌಡರ ಕಷ್ಟ ಕಾಲದಲ್ಲಿ ಅವರ ಜೊತೆ ನಿಲ್ಲಿ ಇಲ್ಲವಾದರೆ ಜನ ನಿಮ್ಮ ಮೇಲೆ ಅಸಮಾಧಾನಗೊಳ್ಳುತ್ತಾರೆ.
ಬಸನಗೌಡರು ಅಧಿಕಾರವಿದ್ದಾಗಲೂ ಇಲ್ಲದಿದ್ದಾಗಲೂ ಕೆಲಸ ಮಾಡಿದ್ದಾರೆ.
ಕೆಲವರು ಅಧಿಕಾರ ಸಿಕ್ಕ ಮೇಲೆ ನಮ್ಮ ಹೋರಾಟಕ್ಕೆ ಬರಲಿಲ್ಲ.ಉಚ್ಚಾಟನೆ ಆದೇಶ ಹಿಂಪಡೆಯದಿದ್ದರೆ ಉಗ್ರವಾದ ಪ್ರತಿಭಟನೆ ಮಾಡುತ್ತೆವೆ ಎಂದ ಸ್ವಾಮೀಜಿ.
ಅಡ್ಜಸ್ಟಮೆಂಟ್ ರಾಜಕಾರಣ ಮಾಡೋರು ನಿಮ್ಮ ಪಕ್ಷದಲ್ಲಿದ್ದಾರೆ.ಅವರ ಬಗ್ಗೆ ಕ್ರಮ ಕೈಗೊಳ್ಳದೆ ಕುಟುಂಬ ರಾಜಕೀಯದ ವಿರುದ್ಧ ಕ್ರಮ ಕೈಗೊಂಡಿದ್ದಿರಿ.
ಕುತಂತ್ರದಿಂದ ಯತ್ನಾಳ ಅವರನ್ನು ಉಚ್ಛಾಟನೆ ಮಾಡಿದ್ದಿರಿ.ನಡ್ಡಾ,ಅಮೀತ್ ಷಾ ಹಾಗೂ ಮೋದಿಯವರು ಮಧ್ಯಸ್ಥಿಕೆ ವಹಿಸಿ ಇದನ್ನು ಸರಿ ಮಾಡಬೇಕು ಎಂದು ಸ್ವಾಮೀಜಿ ಮನವಿ ಮಾಡಿದರು.










