Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿ

ಕ್ರಿಕೆಟ್‌ ಬೆಟ್ಟಿಂಗ್‌ ಹುಚ್ಚು ಇಬ್ಬರ ಮೇಲೆ ಬ್ಲೇಡ್ ಹಲ್ಲೆ 

ಖಾನಾಪುರ: ಸುಲಭವಾಗಿ ಹಣ ಗಳಿಸುವ ಸಲುವಾಗಿ ವಿಪರೀತ ಎನಿಸುವಷ್ಟು ಕ್ರಿಕೆಟ್‌ ಬೆಟ್ಟಿಂಗ್‌ ಹುಚ್ಚು ಹತ್ತಿಸಿಕೊಂಡಿದೆ ಹೀಗೊಂದು  ಘಟನೆಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ಲೋಂಡಾ ಗ್ರಾಮದಲ್ಲಿ  ಕ್ರಿಕೆಟ್‌ ಬೆಟ್ಟಿಂಗಗಾಗಿ ಇಬ್ಬರ ಮೇಲೆ ಬ್ಲೇಡ್ ನಿಂದ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೋಳಿಸಿರುವ ಘಟನೆ ಖಾನಾಪುರ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ  ನಡೆದಿದೆ.
 ನಿನ್ನೆ ಸಂಜೆ ಹೊತ್ತಿಗೆ ನಡೆದಿದೆಈ ದಾಳಿಯಲ್ಲಿ ಲೋಂಡಾ ಗ್ರಾಮದ ನಿವಾಸಿ  ಅಲ್ತಮಶ್ ನಾಯಕ ಮತ್ತು ಇರ್ಫಾನ್ ಸುಭಾನಿ ಎಂಬವರು ಗಂಭೀರವಾಗಿ ಗಾಯಗೊಂಡ ವ್ಯಕ್ತಿಗಳು ಈ ದಾಳಿ ಮಾಡಿದ ಆರೋಪದ ಅಡಿಯಲ್ಲಿ ಬೆಳಗಾವಿ ನಿವಾಸಿ ಆಸಿಫ್ ಜಮಾದಾರ ಮತ್ತು ಉಮರ್ ಶೇಖ್ ಅವರನ್ನು ಬಂಧಿಸಿದ್ದಾರೆ
ಖಾನಾಪೂರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿದೆ ಏನ್ನೇಂದರೆ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಹಣಕಾಸಿನ ವ್ಯವಹಾರ ಇತ್ತು ಈ ವಿಷಯ ಕುರಿತು ಲೋಂಡಾ ಗ್ರಾಮದ ಇರ್ಫಾನ್ ಬೆಳಗಾವಿಯ ಒಬ್ಬನಿಗೆ ಹಣ ಬಾಕಿ ಉಳಿಸಿಕೊಂಡಿದ್ದ ಆರೋಪಿಗಳು ಅದೇ ಹಣಕ್ಕೆ ಬೇಡಿಕೆ ಮಾಡಲು ಲೋಂಡಾ ಗ್ರಾಮಕ್ಕೆ ಬಂದಾಗ ಮಾತಿನ ಚಕಮಕಿ ನಡೆದು ದೊಡ್ಡ ಜಗಳ ನಡೆದಿದೆ ಎಂದು ತಿಳಿದು ಬಂದಿದೆ.ಬ್ಲೇಡ್ ನಿಂದ ಗಾಯಗೊಂಡವರಿಗೆ ಲೋಂಡಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ತದನಂತರ ಬೆಳಗಾವಿಗೆ ರವಾನಿಸಲಾಗಿದೆ ಈ ಬಗ್ಗೆ  ಖಾನಾಪೂರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
TV24 News Desk
the authorTV24 News Desk

Leave a Reply

error: Content is protected !!