Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿಬೆಳಗಾವಿ ನಗರ

 ಸಿಸ್ಟರ್ ಅನ್ನಾ ಚಾಂಡಿ ನಿಧನ  ಕಂಬನಿ ಮಿಡಿದ ಸೇಂಟ್ ಜೋಸೆಫ್ ಕಾನ್ವೆಂಟ್‌

ಬೆಳಗಾವಿ: ಇಲ್ಲಿನ ಸೇಂಟ್ ಜೋಸೆಫ್ ಕಾನ್ವೆಂಟ್‌ನ ಸಿಸ್ಟರ್ ಅನ್ನಾ ಚಾಂಡಿ ಬುಧವಾರ ಸಂಜೆ ವಯೋಸಹಜವಾಗಿ ನಿಧನರಾದರು.
ಸಿಸ್ಟರ್ ಅನ್ನಾ ಚಾಂಡಿ ಅವರು ಕ್ರಿಶ್ಚಿಯನ್ ಸಹೋದರಿಯಾಗಿ 61 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಅವರು ವಿವಿಧ ಪ್ರೌಢಶಾಲೆಗಳಲ್ಲಿ, ಶಿಕ್ಷಕಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರ ನಿಧನಕ್ಕೆ ಸೇಂಟ್ ಜೋಸೆಫ್ ಕಾನ್ವೆಂಟ್‌ನ ಶಿಕ್ಷಕಿಯರು ಹಾಗೂ ಆಡಳಿತ ಮಂಡಳಿ ಸದಸ್ಯರು ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಕಂಬನಿ ಮಿಡಿದಿದ್ದಾರೆ.
ಭಾವುಕರಾಗಿ ಕಣ್ಣೀರಿಟ್ಟ ಶಿಕ್ಷಕಿಯರು: ಗುರುವಾರ ನೆಚ್ಚಿನ ಸಿಸ್ಟರ್ ಮೃತದೇಹವನ್ನು ಶಾಲೆಗೆ ತಂದಾಗ ಶಾಲಾ ಶಿಕ್ಷಕಿಯರು ಸೇರಿದಂತೆ ಆಡಳಿತ ಮಂಡಳಿ ಭಾವುಕರಾಗಿ ಕಣ್ಣೀರಿಟ್ಟರು. ಅಗಲಿದ ಸಿಸ್ಟರ್ ಗೆ ಅಂತಿಮ ಗೌರವ ಸಲ್ಲಿಸಲಾಯಿತು. ಇವರ ಅಂತ್ಯಕ್ರಿಯೇಯು ಕ್ಯಾಂಪ್ ಫಾತಿಮಾ ಕ್ಯಾಥೆಡ್ರಲ್ ದ ನಡೆಯಿತು. ಮೃತರ ಗೌರವಾರ್ಥ ಗುರುವಾರ ಶಾಲೆಗೆ ರಜೆ ನೀಡಲಾಗಿತ್ತು.
TV24 News Desk
the authorTV24 News Desk

Leave a Reply

error: Content is protected !!