Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿಬೆಳಗಾವಿ ನಗರ

ಗ್ರಾಮೀಣ ಟಿಕೇಟ್ ಗಾಗಿ ದೆಹಲಿಗೆ ಹಾರಿದ ಸಾಹುಕಾರ್

ಬೆಳಗಾವಿ: ಗ್ರಾಮೀಣ ಟಿಕೇಟ್ ಗಾಗಿ ಲಾಬಿ ನಡೆಸಲು ರಮೇಶ್ ಜಾರಕಿಹೊಳಿ ಇಂದು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಗ್ರಾಮೀಣ ಟಿಕೇಟ್  ತಮ್ಮ ಆಪ್ತ ನಾಗೇಶ ಮನ್ನೋಳಕರ ಅವರಿಗೆ  ಕೊಡಬೇಕೆಂದು ಎಂದು ಪಟ್ಟು ಹಿಡಿದಿರುವ ರಮೇಶ್ ಜಾರಕಿಜೊಳಿ ಇತ್ತೀಚಿಗೆ ಎರಡನೇ ಬಾರಿ ದೆಹಲಿಗೆ ಹಾರಿದ್ದಾರೆ. 
ಇದೀಗ ರಮೇಶ್ ಜಾರಕಿಹೊಳಿ ಕಣ್ಣು ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದ ಮೇಲೆ ಬಿದ್ದಿದೆ. ಈ ಕ್ಷೇತ್ರದಲ್ಲಿ ತಮ್ಮ ಬೆಂಬಲಿಗ ಬಿಜೆಪಿ ಅಭ್ಯರ್ಥಿಯನ್ನು ಶತಾಯಗತಾಯ ಗೆಲ್ಲಿಸಲೇಬೇಕು, ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಸೋಲಿಸಲೇ ಬೇಕು ಅಂತಾ ಪಣ ತೊಟ್ಟಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರೋ ನಾಗೇಶ್ ಮನ್ನೋಳಕರ್ ಅವರನ್ನ ಮುಂದಿಟ್ಟುಕೊಂಡು ರಮೇಶ್ ಜಾರಕಿಹೊಳಿ ಪ್ರಚಾರವನ್ನೇನೋ ಶುರು ಮಾಡಿದ್ದಾರೆ.
ಸಂಜಯ ಪಾಟೀಲ  ಅವರಿಗೆ ಟಿಕೆಟ್ ತಪ್ಪಿಸಲು ಕಮಲ ಪಾಳಯದಲ್ಲಿಯೇ ಯತ್ನ ನಡೆದಿದೆಯಂತೆ. ಈ ಮಾತುಗಳಿಗೆ ಪೂರಕ ಎಂಬಂತೆ ಇತ್ತೀಚೆಗೆ ಸಂಜಯ ಪಾಟೀಲ ಅವರನ್ನು ಸೈಡ್​ ಲೈನ್​ ಮಾಡುತ್ತಿರೋದು ಬಹಿರಂಗವಾಗಿತ್ತು. ಗ್ರಾಮೀಣದಲ್ಲಿ ಕಾಂಗ್ರೆಸ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರಿಗೆ ಪ್ರಬಲ ಪೈಪೋಟಿಗೆ ಹೊಸಬರನ್ನು ಅಖಾಡಕ್ಕಿಳಿಸಲು  ರಮೇಶ ಜಾರಕಿಹೊಳಿ ತೀವ್ರ ಪ್ರಯತ್ನ ಮಾಡುತ್ತಿದ್ದು, ಇಂದು ಬೆಳಗ್ಗೆ ಹುಬ್ಬಳ್ಳಿಯಿಂದ ಮತ್ತೆ ದೆಹಲಿಗೆ ತಮ್ಮ ಆಪ್ತರೊಂದಿಗೆ ರಮೇಶ ಜಾರಕಿಹೊಳಿ ಪ್ರಯಾಣ ಬೆಳೆಸಿದ್ದಾರೆ. ಸಿ ಟಿ ರವಿ ಅನೇಕ ಮುಖಂಡರ ಜೊತೆಗೆ ಇಂದು ಹಾಗೂ ನಾಳೆ ವರಿಷ್ಠರು ಚರ್ಚೆ ಸಾಧ್ಯತೆ ಇದೆ ಎನ್ನಲಾಗತ್ತಿದೆ.‌ ಆ ನಿಟ್ಟಿನಲ್ಲಿ ಇಂದು ಕೂಡಾ ಬೆಂಗಳೂರಿನಿಂದ ಕೆಲ ಬಿಜೆಪಿ ನಾಯಕರು ದೆಹಲಿಗೆ ಇಂದು ಪ್ರಯಾಣ ಬೆಳೆಸಲಿದ್ದಾರೆ ಎಂದು ಹೇಳಲಾಗುತ್ತಿದೆ. ‌
TV24 News Desk
the authorTV24 News Desk

Leave a Reply

error: Content is protected !!