Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿಬೆಳಗಾವಿ ನಗರ

ಬೆಳಗಾವಿ ಪೋರ್ಟ್ ರೋಡನಲ್ಲಿ ಮಹಾ ಬೆಂಕಿ ದುರಂತ

ಬೆಳಗಾವಿ: ಅಂಗಡಿಯಲ್ಲಿದ ಬ್ಯಾಟರಿಗಳು ಬ್ಲಾಸ್ಟ್ ಆದ ಪರಿಣಾಮ ಆರುಕ್ಕೂ ಅಧಿಕ ಕಮರ್ಷಿಯಲ್ ಅಂಗಡಿಗಳು ವಿದ್ಯುತ್ ಶಾರ್ಟ್ ದಿಂದ ಹೊತ್ತಿ ಉರಿಯುತ್ತಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.‌ಬೆಳಗಾವಿಯ ಪೋರ್ಟ್ ರಸ್ತೆಯಲ್ಲಿರುವ ಎರಡು ಟೈರ್ ಶಾಪ್, ಬ್ಯಾಟರಿ ಅಂಗಡಿ, ಟ್ರಾನ್ಸ್‌ಪೋರ್ಟ್‌ ಶಾಪ್, ಟೂಲ್ಸ್ ಅಂಗಡಿ ಸೇರಿ ಆರಕ್ಕೂ ಅಧಿಕ ಅಂಗಡಿಗಳು ಬೆಂಕಿಯಲ್ಲಿ ಸುಟ್ಟ ಕರಕಲಾಗಿದೆ.‌ಅಂಗಡಿಗಳಿಗೆ ಬೆಂಕಿ ಹತ್ತಿಕೊಂಡಿದ್ದ ಪರಿಣಾಮ ಹನ್ನೆರಡು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ನೆಡೆದಿದೆ.‌ ಅಂಗಡಿಗಳ ಪಕ್ಕದಲ್ಲೇ ಮೂವತ್ತಕ್ಕೂ ಅಧಿಕ ಮನೆಗಳು ಇದ್ದು, ಕಥಾಲ್ ಗಲ್ಲಿಯ ಮನೆಗಳಿಗೂ ಬೆಂಕಿ ವ್ಯಾಪಿಸುವ ಆತಂಕ ಮನೆ ಮಾಡಿದೆ.‌ಮೂವತ್ತಕ್ಕೂ ಅಧಿಕ ಸಿಬ್ಬಂದಿಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ. ‌ಇನ್ನೂ ಸ್ಥಳಕ್ಕೆ ಇಬ್ಬರು ಡಿಸಿಪಿ ನೂರಕ್ಕೂ ಅಧಿಕ ಪೊಲೀಸರು ಭೇಟಿ ನೀಡಿದ್ದಾರೆ ಈ ಘಟನೆ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೆಡೆದಿದೆ.
TV24 News Desk
the authorTV24 News Desk

Leave a Reply

error: Content is protected !!