



ಬೆಳಗಾವಿ:
ಸಚಿವ ಸತೀಶ್ ಜಾರಕಿಹೊಳಿ ಮನೆ ಮೇಲೆ ಇಡಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ
ಸತೀಶ್ ಜಾರಕಿಹೊಳಿಯವರ ಗೋಕಾಕ ನಿವಾಸಕ್ಕೆ ಇಡಿ ಅಧಿಕಾರಿಗಳು ಬ್ಯಾಂಕ್ ಸಿಬ್ಬಂದಿ ಕರೆಸಿಕೊಂಡಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿರುವ ಸತೀಶ್ ನಿವಾಸಕ್ಕೆ ಜೀಪ್ ನಲ್ಲಿ ಇಂಡಿಯನ್ ಬ್ಯಾಂಕ್ ಸಿಬ್ಬಂದಿ ಆಗಮಿಸಿದ್ದಾರೆ.ಜೊತೆಗೆ ಎರಡು ಟ್ರಂಕ್ ಗಳನ್ನ ಇಡಿ ಅಧಿಕಾರಿಗಳು ತರಿಸಿಕೊಂಡಿದ್ದು
ಹಣ ಸಾಗಿಸಲು ಮತ್ತು ದಾಖಲೆ ಸಾಗಿಸಲು ಉಪಯೋಗಿಸುವ ಟ್ರಂಕ್ ಗಳನ್ನ ಸಿಬ್ಬಂದಿ ತಂದಿದ್ದಾರೆ.ಬ್ಯಾಂಕ್ ನಲ್ಲಿದ್ದ ಟ್ರಂಕ್ ಸಮೇತ ಆಗಮಿಸಿರುವ ಬ್ಯಾಂಕ್ ಸಿಬ್ಬಂದಿಗಳು ಇಡಿ ಅಧಿಕಾರಿಗಳ ಸೂಚನೆ ಮೇರೆಗೆ ಆಗಮಿಸಿದ್ದಾರೆ ಎನ್ನಲಾಗಿದೆ. ಸದ್ಯ ಯಾವ್ಯಾವ ದಾಖಲೆಗಳು ಸಿಕ್ಕಿವೆ. ನಗದು ಅಥವಾ ಇನ್ನೇನು ಸಿಕ್ಕಿದೆ ಎನ್ನುವುದನ್ನು ಇಡಿ ಅಧಿಕಾರಿಗಳೇ ಬಹಿರಂಗಗೊಳಿಸಬೇಕಿದೆ.









