

ಬೆಳಗಾವಿ:
ಸೋಷಿಯಲ್ ಮೀಡಿಯಾನೆ ಹಾಗೆ ಅಲ್ಲಿ ಲೆಕ್ಕವಿಲ್ಲದಷ್ಟು ಪ್ರಯೋಗಗಳು ನಡೆಯುತ್ತಲೇ ಇರುತ್ತೆ. ವೇದಿಕೆ ಸಿಗದ ಎಷ್ಟೋ ಜನ ಹಾಡುಗಾರರು, ಕಲಾವಿದರು, ನೃತ್ಯಗಾರರು ಅಲ್ಲಿಯೇ ತಮ್ಮ ಕಲೆಯನ್ನು ತೋರಿಸಿ ಬೆಳಕಿಗೆ ಬಂದ ಉದಾಹಣೆಗಳು ನೂರಾರಿವೆ.ಹಾಡಲು ಚನ್ನಾಗಿ ಬಾರದ ನೃತ್ಯವನ್ನೂ ಚನ್ನಾಗಿ ಮಾಡಲು ಬಾರದ ಅದೆಷ್ಟೋ ಪ್ರತಿಭೆಗಳೂ ಸಹ ಸೋಷಿಯಲ್ ಮೀಡಿಯಾದಲ್ಲಿವೆ.ಚನ್ನಾಗಿ ಹಾಡಲು ಬಾರದ ನೃತ್ಯ ಮಾಡಲು ಬಾರದವರನ್ನು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲೆಂದೆ ಒಂದು ಟೀಂ ಹುಟ್ಟಿಕೊಂಡಿದ್ದು ಚೂರು ಆಯ ತಪ್ಪಿದರೂ ಸಾಕು ಅವರು ಟ್ರೋಲ್ ಎಂಬ ಕೂಪಕ್ಕೆ ಸಿಲುಕುತ್ತಾರೆ. ಹಾಗೆಯೇ ಟ್ರೋಲ್ ಆಗಿದ್ದರಿಂದಲೇ ಸಾಕಷ್ಟು ಜನ ಫೇಮಸ್ ಸಹ ಆಗಿ ಹೋದ್ರು ಈಗ್ಯಾಕೇ ಈ ಟ್ರೋಲ್ ವಿಚಾರ ಅಂದ್ರೆ ನೀವು ಟ್ರೋಲ್ ಮಾಡುವ ಈ ಯುವಕನ ಕಣ್ಣೀರ ಕಥೆ ನಿಮಗೆ ಗೊತ್ತೇ? ಅಂತ ಅಷ್ಟೇ! ಟ್ರೋಲ್ ಆಗಿ ನಿಮಗೆ ಖುಷಿ ಕೊಡುವ ಈ ವ್ಯಕ್ತಿ ಎಲ್ಲರಿಗೂ ಸ್ಪೂರ್ತಿ ಎಂದರೆ ತಪ್ಪಾಗಲಾರದು.
ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುವ ಈ ವ್ಯಕ್ತಿಯ ಹಿಂದೆ ದೊಡ್ಡ ಕಣ್ಣೀರ ಕಥೆಯೇ ಇದೆ.ಅಂದಹಾಗೆ ಈತ ಬೆಳಗಾವಿ ಜಿಲ್ಲೆಯ ಸವದತ್ತಿಯ ಯಲ್ಲಮ್ಮನ ಗುಡ್ಡದ ನಿವಾಸಿ
ಪರಶುರಾಮ್ ಹಣಗಿ ಅಂತ ಎಲ್ಲರಿಗೂ ಸ್ಪೂರ್ತಿಯಾಗೋ ವ್ಯಕ್ತಿ ಸದ್ಯ ಬೆಳಗಾವಿಯ ಬೀಮ್ಸ್ ಆಸ್ಪತ್ರೆಯಲ್ಲಿ ಅಟೆಂಡರ್ ಆಗಿ ಕೆಲಸ ಮಾಡ್ತಿದ್ದಾನೆ.ಇನ್ಸಟಾಗ್ರಾಮ್ ನಲ್ಲಿ ತನ್ನ ದನಿಯಿಂದಲೇ ಹಾಡಿ ಹಾಡುಗಳನ್ನು ಹಾಕುವ ಈತ ಟ್ರೋಲರ್ಸ್ ಪಾಲಿಗಂತು ಮೋಸ್ಟ್ ಫೇವರಿಟ್. ತಮ್ಮ ಹಾಡುಗಳ ಮೂಲಕವೇ ಟ್ರೋಲ್ ಆಗುವ ಪರಶುರಾಮ್
ಚಿಕ್ಕವಯಸ್ಸಿನಲ್ಲಿಯೇ ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡ ತಬ್ಬಲಿ 2007 ರಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡಿರುವ ಪರಶುರಾಮ್ ಅನಾಥಾಶ್ರಮದಲ್ಲಿಯೇ ಇದ್ದು ಐಟಿಐ ಓದಿಕೊಂಡಿದ್ದಾರೆ.
ಬೆಳಗಾವಿಯ ಶಿವಾಜಿ ನಗದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ವಸತಿ ನಿಲಯದಲ್ಲಿದ್ದ ತನ್ನಂತೆಯೇ ತನ್ನ ತಮ್ಮ ಹಾಗೂ ಸಹೋದರಿಯನ್ನು ಅನಾಥಾಲಯದಲ್ಲಿಯೇ ಓದಿಸಿದ್ದಾರೆ.ತಾನು ಅನಾಥಾಶ್ರಮದಿಂದ ಹೊರ ಬಂದ ಮೇಲೆ ತನ್ನ ಬದುಕು ಕಟ್ಟಿಕೊಳ್ಳುವುದರ ಜೊತೆಗೆ ತನ್ನ ತಂಗಿ ಹಾಗೂ ತಮ್ಮನನ್ನೂ ಓದಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ನಂತರ ತನ್ನ ತಂಗಿಗೆ ಪಿಯುಸಿ ಹಾಗೂ ಸಹೋದರಿನಗೆ ಐಟಿಐಯನ್ನು ಓದಿಸಿದ್ದಾರೆ.ಅಪ್ಪ ಅಮ್ಮನ ಜಾಗದಲ್ಲಿ ನಿಂತು ತನ್ನ ತಂಗಿ ಹಾಗೂ ತಮ್ಮನ ಜವಾಬ್ದಾರಿ ಹೊತ್ತಿರುವ ಈ ಯುವಕ ಎಲ್ಲರಿಗೂ ಸಹ ಮಾದರಿ ಎಂದರೆ ತಪ್ಪಾಗಲಾದರು.
ಅಲ್ಲದೇ ತನ್ನಂತೆಯೇ ಅನಾಥ ಹುಡುಗಿಯನ್ನೆ ಪ್ರೀತಿಸಿರುವ ಪರಶುರಾಮ್ ಸದ್ಯ ಅನಾಥ ಹುಡುಗಿಯ ಜೊತೆಗೆ ಸಪ್ತಪದಿ ತುಳಿಯಲು ನಿರ್ಧರಿಸಿದ್ದಾನೆ. ಬೆಳಗಾವಿಯ ಸವದತ್ತಿಯ ಹಾಸ್ಟೇಲ್ ನಲ್ಲಿದ್ದ ಯುವತಿಯ ಸ್ನೇಹವಾಗಿ ಸ್ನೇಹ ಪ್ರೀತಿಯಾಗಿ ಬದಲಾಗಿ ಈಗ ಆ ಪ್ರೀತಿ ಮದುವೆ ಬಾಂಧವ್ಯಕ್ಕೆ ಸಾಕ್ಷಿಯಾಗಲು ಸಜ್ಜಾಗಿದೆ.
ಸದಾ ಟ್ರೋಲ್ ಆಗುತ್ತ ಖುಷಿ ಹಂಚಿದವನ ಹಿಂದೆ ನೂರು ನೋವಿದ್ದರೂ ಸಹ ಅದು ಯಾರಿಗೂ ಕಾಣದು. ಟ್ರೋಲ್ ಮಾಡಿ ಕೆಟ್ಟ ಕೆಟ್ಟ ಕಮೆಂಟ್ ಗಳ ಮೂಲಕ ನಿಂದಿಸುವ ಮಹಾಷಯರಿಗೂ ಸಹ ಈ ಕುರಿತು ಅರಿವಿರುವುದಿಲ್ಲ.ಟ್ರೋಲ್ ಎನೇ ಮಾಡಿದರೂ ನಾನು ತೆಲೆ ಕೆಡಿಸಿಕೊಳ್ಳಲ್ಲ ಎನ್ನುವ ಪರಶುರಾಮ್ ಸಧ್ಯ ತನ್ನ ಇನ್ಸಟಾಗ್ರಾಮ್ ನಲ್ಲಿ 100k ಫಾಲೋವರ್ಸ್ ಮಾಡಿಕೊಳ್ಳುವ ಹುಮ್ಮಸ್ಸಿನಲ್ಲಿದ್ದಾನೆ. ತನ್ನ love_life9445 ಐಡಿಯ ಮೂಲಕ ತನ್ನ ಹಾಡುಗಳನ್ನು ಹಾಗು ಅಭಿನಯವನ್ನು ಹೊರ ಹಾಕುತ್ತಿದ್ದಾನೆ. ನೀವು ಸಹ ಅಲ್ಲಿಗೆ ಭೇಟಿ ನೀಡಿ ಆತನ ಹಾಡು ಕೇಳಬಹುದು.ತಂದೆ ಇಲ್ಲದೇ ತಾಯಿ ಇಲ್ಲದೇ ತಂಗಿ ಹಾಗೂ ತಮ್ಮನ ಓದಿಸಿ ತಾನೂ ಸಹ ಅನಾಥ ಹುಡುಗಿಯ ಕೈ ಹಿಡಿಯುವ ನಿರ್ಧಾರ ಮಾಡಿರುವ ಪರಶುರಾಮ್ ನಿಜಕ್ಕೂ ಎಲ್ಲರಿಗೂ ಮಾದರಿ ಆಗುವುದಿಲ್ಲವೇ?










