

ಹುಬ್ಬಳ್ಳಿ ಸೆ 19:
ಹುಬ್ಬಳ್ಳಿಯಲ್ಲಿ ಕೆಎಲ್ ಇ ಸಂಸ್ಥೆಯ ಕಾಹೆರವು ನೂತನವಾಗಿ ನಿರ್ಮಿಸಲಾದ ಜಗದ್ಗುರು ಗಂಗಾಧರಸ್ವಾಮಿ ಮೂರುಸಾವಿರಮಠ ವೈದ್ಯಕೀಯ ಮಹಾವಿದ್ಯಾಲಯವನ್ನು ಕೇಂದ್ರದ ಗೃಹ ಮತ್ತು ಸಹಾಕಾರ ಸಚಿವರಾದ ಶ್ರೀ ಅಮಿತ ಶಾ ಅವರಿಂದಿಲ್ಲಿ ಜನಸೇವೆಗೆ ಅರ್ಪಿಸಿದರು.ನಂತರ ಮಾತನಾಡಿದ ಅವರು, ಆರೋಗ್ಯ ಸಮಸ್ಯೆಯ ಕಾರಣ ಮುಖ್ಯ ಕಾರ್ಯಕ್ರಮದಲದಲಿ ಪಾಲ್ಗೊಳ್ಳಲು ಆಗಲಿಲ್ಲ. ಕೆಎಲ್ ಇ ಸಂಸ್ಥೆಯು ಈ ಭಾಗದಲ್ಲಿ ಒಳ್ಳೆಯ ಕಾರ್ಯಗಳಬ್ಬು ಮಾಡುತ್ತಿದೆ. ಅದರಲ್ಲಿಯೂ ಮುಖ್ಯವಾಗಿ ಶಿಕ್ಷಣ ಆರೋಗ್ಯ ಕ್ಷೇತ್ರದ ಅಭಿವೃದ್ದಿಗೆ ತನ್ನನ್ನು ತಾನು ತೊಡಗಿಸಿಕೊಂಡಿದೆ. ಸಮಾಜದ ಆರೋಗ್ಯವನ್ನು ಕಾಪಾಡುವಲ್ಲಿ ಸದಾ ಒಂದು ಹೆಜ್ಜೆ ಮುಂದಿದೆ. ಸಂಸ್ಥೆಯ ಕಾರ್ಯ ಸದಾಕಾಲಕ್ಕೂ ಶ್ಲಾಘನೀಯ ಎಂದರು.ಕೇಂದ್ರ ಶಿಕ್ಷಣ, ಗ್ರಾಹಕ, ಆಹಾರ ಮತ್ತು ವಿತರಣೆ ಸಚಿವರಾದ ಪ್ರಹ್ಲಾದ ಜೋಶಿ ಅವರು ಮಾತನಾಡಿ,
ಏಳು ಜನ ಸಪ್ತರ್ಷಿಗಳಿಂದ ಪ್ರಾರಂಭಗೊಂಡ ಸಂಸ್ಥೆ ಇದು ಜಾಗತಿಕವಾಗಿ ಬೆಳೆದುನಿಂತಿದೆ. ಏಳು ಜನ ಶಿಕ್ಷಕರ ತ್ಯಾಗ ದೊಡ್ಡದು. ಡಾ.ಕೋರೆಯವರು ತಮ್ಮ ಅವಧಿಯಲ್ಲಿ ಅದಕ್ಕೊಂದು ಅದ್ಭುತವಾದ ಸ್ಪರ್ಶ ನೀಡಿದರು. ಪೂಜ್ಯ ಲಿಂಗೈಕ್ಯ ಮೂಜುಗಂ ಹಾಗೂ ಡಾ.ರಾಜಯೋಗೀಂದ್ರ ಮಹಾಸ್ವಾಮಿಗಳು ಕೊಡುಗೆ ಅನನ್ಯ. ಅವರ ಭೂದಾನದಿಂದ ಕೆಎಲ್‍ಇ ಸಂಸ್ಥೆಯು ಅದ್ಭುತವಾದ ಆಸ್ಪತ್ರೆಯನ್ನು ಹುಟ್ಟುಹಾಕಿದೆ. ಇದು ದೇಶಕ್ಕೆ ಹೆಮ್ಮೆ ವಿಷಯ. ಇದೊಂದು ಕೆಎಲ್‍ಇ ಸಂಸ್ಥೆಯ ಅದ್ಭುತವಾದ ಮೈಲುಗಲ್ಲು ಎಂದು ಹೇಳಿದರು.
ಅವರು ಹುಬ್ಬಳ್ಳಿಯ ಗಬ್ಬೂರಿನಲ್ಲಿ ನಿರ್ಮಾಣಗೊಂಡಿರುವ ಕೆಎಲ್‍ಇ ಸಂಸ್ಥೆಯ ಜಗದ್ಗುರು ಗಂಗಾಧರ ಮಹಾಸ್ವಾಮಿಗಳು ಮೂರುಸಾವಿರಮಠ ವೈದ್ಯಕೀಯ ಕಾಲೇಜ್(ಜೆಜಿಎಂಎಂಎಂಸಿ), ಕೆಎಲ್‍ಇ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ಕೆಎಲ್‍ಇ ಸಪ್ತರ್ಷಿಗಳ ಕೊಡುಗೆ ಅನನ್ಯ, ಅದಕ್ಕೆ ನೀರುಗೊಬ್ಬರವಾಗಿ ವಿಸ್ತಾರೋನ್ನತವಾಗಿ ಬೆಳೆಸಿದ ಡಾ.ಪ್ರಭಾಕರ ಕೋರೆಯವರು ಸಾಹಸ ಇನ್ನೂ ದೊಡ್ಡದಾಗಿದೆ. ಹುಬ್ಬಳ್ಳಿಯ ಮಹತ್ವದ ಭಾಗದಲ್ಲಿ 2020 ರಿಂದಲೇ ಜೆಜಿಎಂಎಂಎಂ ಕಾಲೇಜು ಪ್ರಾರಂಭಗೊಂಡು ಕಾರ್ಯನಿರ್ವಹಿಸುತ್ತಿದೆ. ಹುಬ್ಬಳ್ಳಿ ಧಾರವಾಡದಲ್ಲಿ ಒಟ್ಟು ಮೂರು ಮೆಡಿಕಲ್ ಕಾಲೇಜು ನಿರ್ಮಾಣಗೊಂಡಿವೆ. ಇಲ್ಲಿಯ ವಿದ್ಯಾರ್ಥಿಗಳಿಗೆ ಈ ಕಾಲೇಜು ಸಾಕಷ್ಟು ಅನುಕೂಲವಾಗಿದೆ. ಈ ಭಾಗದ ಜನತೆಗೆ ಉತ್ತಮವಾದ ಆರೋಗ್ಯಯೂ ಆಸ್ಪತ್ರೆಯ ಮೂಲಕ ದೊರೆಯಲಿದೆ ಎಂದರು.
ಮುಂದುವರೆದು ಮಾತನಾಡಿದ ಪ್ರಹ್ಲಾದ ಜೋಶಿಯವರು, ಜಗತ್ತಿನಲ್ಲಿಯೇ ಯುವದೇಶ ಭಾರತ. ಜಾಗತಿಕಮಟ್ಟದಲ್ಲಿ ನಮಗೆ ನುರಿತ ವೈದ್ಯರು, ತಂತ್ರಜ್ಞರ ಅಗತ್ಯವಿದೆ. ಭಾರತದ ಮೂಲ ಪರಂಪರೆಯಲ್ಲಿ ಎಲ್ಲರೂ ರೋಗಮುಕ್ತರಾಗಿರಲಿ ಎಂಬ ಮಾನವೀಯ ಮೌಲ್ಯವಿದ್ದರೆ ಅದು ಭಾರತದಲ್ಲಿ. ವಿಶ್ವದ ಬಹು ಅದ್ಭುತ ವೈದ್ಯರು ಭಾರತದವರು. ಜಾಗತಿಕ ಮಟ್ಟದಲ್ಲಿ ಭಾರತೀಯ ವೈದ್ಯರಿಗೆ ಬಹುಬೇಡಿಕೆ ಇದೆ. ಒಂದು ಸಮಯದಲ್ಲಿ ತಾಂತ್ರಿಕವಾಗಿ ಅಗತ್ಯವಾಗಿದ್ದ ಜಿಪ್ಸ್‍ಗಳನ್ನು ಹೊರದೇಶದಿಂದ ಪಡೆಯಬೇಕಾಗಿತ್ತು. ಈಗ ಭಾರತದಲ್ಲಿ ನಿರ್ಮಾಣಗೊಳ್ಳುತ್ತಿವೆ. ಜಗತ್ತಿಗೆ ನಾವು ಹೆಚ್ಚು ರಪ್ತು ಮಾಡುತ್ತಿವೆ. ಆರ್ಥಿಕವಾಗಿ ಜಗತ್ತು ತತ್ತರಿಸುತ್ತಿದೆ, ಯುದ್ಧಗಳು ಹೆಚ್ಚಾಗಿವೆ.ಆದರೆ ಭಾರತವು ನೆಮ್ಮದಿಯಾಗಿ ಮುನ್ನಡೆದಿದೆ. ಪ್ರಧಾನಿ ಮೋದಿಜಿಯವರ ಯೋಜನೆಗಳು ಅದ್ಭುತವಾಗಿವೆ. ಅವು ದೇಶದ ಅಭಿವೃದ್ಧಿಗೆ ಪೂರಕವಾಗಿವೆ ನಿಂತಿವೆ. ಕಳೆದ ಕೆಲವು ವರ್ಷಗಳಲ್ಲಿ ಮೆಡಿಕಲ್ ಕಾಲೇಜಗಳ ವಿಸ್ತಾರಗೊಂಡಿವೆ, ದೇಶದಲ್ಲಿ 751 ಮೆಡಿಕಲ್ ಕಾಲೇಜಗಳು ಇಂದಿವೆ. 1000 ಜನಕ್ಕೆ ಒಬ್ಬ ವೈದ್ಯ ವಿಶ್ವಸಂಸ್ಥೆಯ ಸಂಕಲ್ಪ. ನಾವು ಅದನ್ನು ಮೀರಿ ಮುನ್ನಡೆಯಲಿದ್ದೇವೆ. ಭಾರತದಲ್ಲಿ ವೈದ್ಯಕೀಯ ಕ್ರಾಂತಿಯಾಗಲಿದೆ. ಇಲೆಕ್ಟ್ರಿಕ್ ರಪ್ತು 5 ಪಟ್ಟು ಹೆಚ್ಚಾಗಿದೆ. ನಮ್ಮ ದೇಶದ ಮಾನವಶಕ್ತಿಯನ್ನು ಸದೃಢವಾಗಿ ಇಡುವುದು ನಮ್ಮ ಗುರಿಯಾಗಿದೆ. ಯುವ ಜನತೆಗೆ ಎಲ್ಲ ಕೌಶಲಗಳನ್ನು ನಾವು ನೀಡಲಿದ್ದೇವೆ. ರಾಷ್ಟ್ರನಿರ್ಮಾಣದಲ್ಲಿ ಅವರದು ನಿರ್ಣಾಯಕ ಪಾತ್ರವಾಗಿದೆ.
ವೈದ್ಯಕೀಯ ಶಿಕ್ಷಣ ಸಚಿವರಾದ ಶರಣ ಪ್ರಕಾಶ ಪಾಟೀಲ: ಕೆಎಲ್‍ಇ ಸಂಸ್ಥೆಯ ಬೆಳವಣಿಗೆಯಲ್ಲಿ ಪದ್ಮಶ್ರೀ ಡಾ.ಪ್ರಭಾಕರ ಕೋರೆಯವರ ಕೊಡುಗೆ ಅನನ್ಯ, ಅನುಪಮವೆನಿಸಿದೆ. ವೈದ್ಯಕೀಯ ಶಿಕ್ಷಣ ಸೇವೆಯಲ್ಲಿ 72 ಮೆಡಿಕಲ್ ಕಾಲೇಜು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ದೇಶದಲ್ಲಿಯೇ ಹೆಚ್ಚು ಸ್ನಾತಕೋತ್ತರ ವೈದ್ಯಕೀಯ ಸೀಟ್‍ಗಳು ಕರ್ನಾಟಕದಲ್ಲಿವೆ. ನರ್ಸಿಂಗ್, ಪಿಜಿಯೋಥರಪಿ, ಡೆಂಟಲ್, ತಾಂತ್ರಿಕ ಮೊದಲ್ಗೊಂಡು ಹಲವಾರು ವೈವಿದ್ಯಮಯವಾದ ಕೋರ್ಸುಗಳು ನಮ್ಮಲ್ಲಿವೆ. ಶಿಕ್ಷಣಕ್ಷೇತ್ರದಲ್ಲಿ ಕರ್ನಾಟಕವೇ ನಂಬರ ಒನ್. ಗುಣಾತ್ಮಕವಾದ ಶಿಕ್ಷಣಕ್ಕೆ ಕರ್ನಾಟಕ ದೊಡ್ಡ ಕೊಡುಗೆ ನೀಡಿದೆ. ಸರ್ಕಾರದ ಜೊತೆಗೆ ನಮ್ಮ ಹಿಂದಿನ ಹಿರಿಯರು ತಾಂತ್ರಿಕ, ವೈದ್ಯಕೀಯ ಕಾಲೇಜುಗಳನ್ನು ಹುಟ್ಟುಹಾಕಿ ಅನುಕೂಲ ಕಲ್ಪಿಸಿದರು. 60ರ ದಶಕದಿಂದಲೂ ಕರ್ನಾಟಕದಲ್ಲಿ ವೈದ್ಯಕೀಯ ಕಾಲೇಜುಗಳು, ತಾಂತ್ರಿಕ ಕಾಲೇಜುಗಳು ಅತೀ ಹೆಚ್ಚಿನ ಪ್ರಮಾಣದಲ್ಲಿ ಬೆಳೆದುಬಂದಿವೆ. ಮಠಮಾನ್ಯಗಳ ಸೇವೆಯೂ ಬಹುದೊಡ್ಡದಾಗಿದೆ. ವಿದ್ಯಾದಾಸೋಹ ಮಾಡಿದ್ದಾರೆ. ಪ್ರತಿಭೆಗಳಿಗೆ ಈ ರಾಜ್ಯದಲ್ಲಿ ಬೆಲೆಯಿದೆ. ಜಗತ್ತು ಕರ್ನಾಟಕದತ್ತ ನೊಡುತ್ತಿದೆ. ಕಾರಣ ಗುಣಾತ್ಮಕ ಶಿಕ್ಷಣವೇ ಇದಕ್ಕೆ ಕಾರಣ. ಈ ನಿಟ್ಟಿನಲ್ಲಿ ಕೆಎಲ್‍ಇ ಕೊಡುಗೆ ಅನನ್ಯವೆನಿಸಿದೆ. ಶಿಕ್ಷಣ-ಆರೋಗ್ಯ ಸೇವೆಯ ಮೂಲಕ ಜಾಗತಿಕವಾಗಿ ಗುರುತಿಸಿಕೊಂಡಿದೆ. ಇಷ್ಟೊಂದು ದೊಡ್ಡ ಸಂಸ್ಥೆಯನ್ನು ಕಟ್ಟಿದ ಕೆಎಲ್‍ಇ ಸಂಸ್ಥೆಗೆ ಸರ್ಕಾರ ಯಾವತ್ತೂ ಬೆಂಬಲ ನೀಡುತ್ತಾ ಬಂದಿದೆ ಎಂದು ಹೇಳಿದರು.
ದಿವ್ಯ ಸಾನ್ನಿಧ್ಯವನ್ನು ವಹಿಸಿದ್ದ ಮೂರುಸಾವಿರಮಠದ ಜಗದ್ಗುರು ಪೂಜ್ಯ ಶ್ರೀ ರಾಜಯೋಗೀಂದ್ರ ಮಹಾಸ್ವಾಮಿಗಳು: ಕೆಎಲ್‍ಇ ಕರ್ನಾಟಕದಲ್ಲಿ ಮಾತ್ರವಲ್ಲ ಏಷ್ಯಾದಲ್ಲಿ ಶ್ರೇಷ್ಠ ಸಂಸ್ಥೆಯಾಗಿದೆ. ಲಕ್ಷಾಂತರ ಕೋಟ್ಯಾಂತರ ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ಭವಿಷ್ಯರೂಪಿಸಿಕೊಂಡಿದ್ದಾರೆ. ಈ ಸಂಸ್ಥೆಯು ಹುಬ್ಬಳ್ಳಿಯಲ್ಲಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯನ್ನು ಹುಟ್ಟುಹಾಕಿದ್ದಾರೆ. ನಮ್ಮ ಗುರುಗಳ ಸಂಕಲ್ಪ ಈಡೇರಿದೆ. ಅವರ ಇಚ್ಛೆಯಂತೆ ನಮ್ಮ ಗುರುಗಳು ಕೆಎಲ್‍ಇ ಸಂಸ್ಥೆಯಗೆ ಭೂಮಿಯನ್ನು ನೀಡಿದರು. ಪದ್ಮಶ್ರೀ ಡಾ.ಪ್ರಭಾಕರ ಕೋರೆಯವರು ದೊಡ್ಡ ಮನಸು ಮಾಡಿ ಗುರುಗಳ ಆದೇಶವನ್ನು ನೆರವೇರಿಸಿದ್ದಾರೆ. ಹನ್ನೊಂದು ಹಾಸಿಗೆಗಳಲ್ಲಿ 300 ಹಾಸಿಗೆಗಳನ್ನು ಬಡವರಿಗೇ ಮೀಸಲಿಟ್ಟಿದ್ದಾರೆ. ಕೆಎಲ್‍ಇ ಸಂಸ್ಥೆಗೆ ಜಮೀನನ್ನು ನೀಡಿದ್ದು ಸಾರ್ಥಕವಾಗಿದೆ. ಹುಬ್ಬಳ್ಳಿ ಪ್ರದೇಶಕ್ಕೆ ಮುಕುಟಮಣಿಯಾಗಿದೆ. ಈ ಸಂಸ್ಥೆಯನ್ನು ಅಗಾಧವಾಗಿ ಬೆಳೆಸಿದ ಶ್ರೇಯಸ್ಸು ಡಾ.ಕೋರೆಯವರಿಗೆ ಸಲ್ಲುತ್ತದೆ. ಈ ಸಂಸ್ಥೆ ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು.
ಕಾಹೆರ್ ಕುಲಾಧಿಪತಿ ಪದ್ಮಶ್ರೀ ಡಾ.ಪ್ರಭಾಕರ ಕೋರೆ ಪ್ರಾಸ್ತಾವಿಕ ನುಡಿ: 110 ವರ್ಷಗಳ ಸುದೀರ್ಘ ಪಯಣದಲ್ಲಿ ಕೆಎಲ್‍ಇ ಸಂಸ್ಥೆಯು ಜಾಗತಿಕವಾಗಿ ಬೆಳೆದಿದೆ. ಶಿಕ್ಷಣ-ಆರೋಗ್ಯ-ಸಂಶೋಧನೆ-ಕೃಷಿ ಕ್ಷೇತ್ರಗಳಲ್ಲಿ ಅದ್ವಿತೀಯವಾದ ಕೊಡುಗೆಯನ್ನು ನೀಡಿದೆ. 320 ಅಂಗ ಸಂಸ್ಥೆಗಳು, 1 ಲಕ್ಷ 48 ಸಾವಿರ ವಿದ್ಯಾರ್ಥಿಗಳು, 18 ಸಾವಿರ ಸಿಬ್ಬಂದಿವರ್ಗದವರು ಕಾರ್ಯಅವಿಸ್ಮರಣೀಯ. ಹುಬ್ಬಳ್ಳಿಯಲ್ಲಿ ಸಂಸ್ಥೆಯ ಬಹುದಿನಗಳ ಕನಸಾಗಿದ್ದ ಜಗದ್ಗುರು ಗಂಗಾಧರ ಮಹಾಸ್ವಾಮಿಗಳು ಮೂರುಸಾವಿರಮಠ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ ಉದ್ಘಾಟನೆಗೊಂಡಿರುವುದು ನನಗೆ ಅತೀವ ಸಂತೋಷ ಹಾಗೂ ಹೆಮ್ಮೆಯನ್ನುಂಟು ಮಾಡಿದೆ.
ಕೆಎಲ್‍ಇ ಸಂಸ್ಥೆಯ ದಾನಪರಂಪರೆ ಬಹುದೊಡ್ಡದು: ಮುಂದುವರೆದು ಡಾ.ಕೋರೆಯವರು, ಅಸಂಖ್ಯ ದಾನಿಗಳಿಂದ ಸಂಸ್ಥೆಯು ಇಂದು ಬೃಹದಾಕಾರವಾಗಿ ಬೆಳೆದುನಿಂತಿದೆ. ಲಿಂಗರಾಜ ಟ್ರಸ್ಟ್, ರಾಜಾ ಲಖಮಗೌಡರು, ಬಿ.ವಿ.ಭೂಮರಡ್ಡಿಯವರು ಈ ಎಲ್ಲ ಮಹಾದಾನಿಗಳನ್ನು ಸ್ಮರಿಸಲೇಬೇಕು. ಕಾಳುಕಡಿ ಮಾರಿ ದಾನ ನೀಡಿದ ಅಥಣಿಯ ನೀಲವ್ವ ದುಂಡಪ್ಪ ಗಂಗಾವತಿ, ಸೊ¯್ಲÁಪೂರದ ಕಾಡಾದಿ ಸಹೋದರರು, ಅಥಣಿಯ ರಣಮೋಡೆ ದಂಪತಿಗಳು, ಡಾ.ಮುರಗೇಶ ನಿರಾಣಿ, ಡಾ.ಸುಧಾ ಮೂರ್ತಿ, ಡಾ.ಸಂಪತಕುಮಾರ ಶಿವಣಗಿ – ಹೀಗೆ ಅಸಂಖ್ಯ ದಾನಿಗಳಿಂದ ಕೆಎಲ್‍ಇ ಸಂಸ್ಥೆ ಬೆಳೆದಿದೆ.
ಕೆಎಲ್‍ಇ ಮಹಾದಾನಿಗಳಲ್ಲಿ ಮೂರುಸಾವಿರ ಮಠದ ಕೊಡುಗೆ ಅನನ್ಯವೆನಿಸಿದೆ. 1947ರಲ್ಲಿಯೇ ಹುಬ್ಬಳ್ಳಿಯಲ್ಲಿ ಕಾಮರ್ಸ ಕಾಲೇಜು ಪ್ರಾರಂಭಿಸಲು ನಿರ್ಧರಿಸಿದಾಗ ಹುಬ್ಬಳ್ಳಿಯ ಸಾರ್ವಜನಿಕರು 1 ಲಕ್ಷ ರೂ., ಮೂರು ಸಾವಿರಮಠದ ಜಗದ್ಗುರುಗಳು ಒಂದು ಲಕ್ಷ ರೂ. ಹಾಗೂ 9 ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದರಿಂದ ಆ ಕಾಲೇಜಿಗೆ ಜಗದ್ಗುರು ಗಂಗಾಧರ ಕಾಮರ್ಸ ಕಾಲೇಜು ಎಂದು ನಾಮಕರಣ ಮಾಡಿದರು. ಇಂದು ಮೂರುಸಾವಿರ ಮಠದ ಜಗದ್ಗುರು ಶ್ರೀ ರಾಜಯೋಗೀಂದ್ರ ಮಹಾಸ್ವಾಮಿಗಳು ತಮ್ಮ ಗುರುಗಳಾದ ಲಿಂಗೈಕ್ಯ ಜಗದ್ಗುರು ಗಂಗಾಧರ ಮಹಾಸ್ವಾಮಿಗಳ ಇಚ್ಛೆಯಂತೆ 23 ಎಕರೆ 32 ಗುಂಟೆ ಭೂಮಿಯನ್ನು ದಾನಮಾಡಿ ವಾಣಿಜ್ಯ ನಗರಿಯಲ್ಲಿ ಕೆಎಲ್‍ಇ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇಂದು 50 ಎಕರೆ ಪ್ರದೇಶದಲ್ಲಿ 700 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಪೂಜ್ಯರಿಗೆ ಸಂಸ್ಥೆಯು ಅನಂತ ಕೃತಜ್ಞತೆಗಳನ್ನು ಸಲ್ಲಿಸುತ್ತಿದೆ. ಸಂಸ್ಥೆಯು ಬೆಳಗಾವಿ ಮಾತ್ರ ಸೀಮಿತಗೊಳ್ಳದೆ ಹುಬ್ಬಳ್ಳಿ ಜನತೆಯ ಬಹುದಿನಗಳ ಬೇಡಿಕೆಗೆ ಸ್ಪಂದಿಸಿದೆ ಎಂದು ಹೇಳಿದರು.
ಕೆಎಲ್‍ಇ ಆರೋಗ್ಯ ಸೇವೆ : ಕೆಎಲ್‍ಇ ಸಂಸ್ಥೆಯು ಆರೋಗ್ಯ ಕ್ಷೇತ್ರದಲ್ಲಿ ಅದ್ವಿತೀಯ ಕ್ರಾಂತಿ ಮಾಡಿದೆ. ಒಟ್ಟು 4500 ಹಾಸಿಗೆಗಳ ಬೃಹತ್ ಆರೋಗ್ಯ ಆರೈಕೆಯ ಸೇವೆಯನ್ನು ಒದಗಿಸುತ್ತಿದೆ. ಇದರಲ್ಲಿ 1200 ಉಚಿತ ಹಾಸಿಗೆಗಳ ಆರೋಗ್ಯ ಸೇವೆಯನ್ನು ಕಲ್ಪಿಸಲಾಗಿದೆ. ಬೆಳಗಾವಿ, ಪುಣೆ, ಹುಬ್ಬಳ್ಳಿ, ಅಂಕೋಲಾ, ಚಿಕ್ಕೋಡಿ, ಗೋಕಾಕ, ಬೆಂಗಳೂರು ಹೀಗೆ ಅತ್ಯಾಧುನಿಕ ಸೌಲಭ್ಯವುಳ್ಳ 16 ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿದೆ. ಈ ಎಲ್ಲ ಆಸ್ಪತ್ರೆಗಳಲ್ಲಿ ಸೆಟಲೈಟ್ ಚಿಕಿತ್ಸೆ ಇದೆ. ಡೆಂಟಲ್ ಸೆಟ್‍ಲೈಟ್ ಕ್ಲಿನಿಕ್‍ಗಳನ್ನು ಗ್ರಾಮೀಣ ಪಟ್ಟಣಗಳಾದ ಬೈಲಹೊಂಗಲ, ಗೋಕಾಕ, ನಿಪ್ಪಾಣಿ, ಚಿಕ್ಕೋಡಿ, ಯಳ್ಳೂರು, ಪಾಟ್ನೆ-ಫಾಟಾ ಹಾಗೂ ಹಿಂಡಲಗಾ ಮುಂತಾದ ಸ್ಥಳಗಳಲ್ಲಿ ಸ್ಥಾಪಿಸಲಾಗಿದೆ. ಬೆಳಗಾವಿಯ ಕೆಎಲ್‍ಇ ಆಸ್ಪತ್ರೆಯಲ್ಲಿ 14 ಹೃದಯ ಕಸಿ ಶಸ್ತ್ರಚಿಕಿತ್ಸೆಗಳು, 30 ಯಕೃತ್ ಕಸಿ ಶಸ್ತ್ರಚಿಕಿತ್ಸೆಗಳು131 ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗಳು ಯಶಸ್ವಿಯಾಗಿ ನೆರವೇರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ನಿರ್ದೇಶಕರಾದ ಶಂಕರಣ್ಣ ಮುನವಳ್ಳಿಯವರಿಗೆ ಮಹಾಂತೇಶ ಕೌಜಲಗಿ ಹಾಗು ಅಮಿತ್ ಕೋರೆಯವರು ಸತ್ಕರಿಸಿದರು. ಅಧ್ಯಕ್ಷರಾದ ಮಹಾಂತೇಶ ಕೌಜಲಗಿಯವರು ಅಧ್ಯಕ್ಷೀಯ ನುಡಿಗಳನ್ನಾಡಿದರು. ಕಾರ್ಯಾಧ್ಯಕ್ಷರಾದ ಅಮಿತ ಕೋರೆ ವಂದಿಸಿದರು. ಡಾ.ಅವಿನಾಶ ಕವಿ ನಿರೂಪಿಸಿದರು.
ಗಣ್ಯರ ಉಪಸ್ಥಿತಿ: ಮಾಜಿ ಮುಖ್ಯಮಂತ್ರಿ ಸಂಸದರಾದ ಜಗದೀಶ ಶೆಟ್ಟರ, ಬಸವರಾಜ ಬೊಮ್ಮಾಯಿ, ಮಾಜಿ ಸಭಾಪತಿಗಳಾದ ಬಸವರಾಜ ಹೊರಟ್ಟಿ, ರಾಜ್ಯಸಭಾ ಸದಸ್ಯರಾದ ಪೆÇ್ರ. ಎಂ. ನಾಗರಾಜ, ಶಾಸಕರುಗಳಾದ ಪ್ರಸಾದ ಅಬ್ಬಯ್ಯಾ , ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಶ್ರೀ ಎಂ. ಆರ್. ಪಾಟೀಲ, ಮಾಜಿ ಸಂಸದ ರಮೇಶ ಕತ್ತಿ, ಆಶಾ ಪ್ರಭಾಕರ ಕೋರೆ, ಕೆಎಲ್‍ಇ ಕಾಹೇರ ಕುಲಪತಿ ಸಂದೀಪ ಶ್ರೀವಾತ್ಸವ, ಕೆಎಲ್‍ಇ ಸಂಸ್ಥೆಯ ಮಾಜಿ ನಿರ್ದೇಶಕರಾದ ಬಾಬಣ್ಣ ಮೆಟಗುಡ್ಡ, ಡಾ.ವಿ.ಎಸ್.ಸಾಧುನವರ, ಉಪಾಧ್ಯಕ್ಷರಾದ ಬಸವರಾಜ ತಟವಟಿ, ಹಾಲಿ ನಿರ್ದೇಶಕರುಗಳಾದ ಮಹಾಂತೇಶ ಕವಟಗಿಮಠ, ಎಂ.ಸಿ.ಕೊಳ್ಳಿ, ವಾಯ್.ಎಸ್.ಪಾಟೀಲ, ಅನೀಲ ಪಟ್ಟೇದ, ಬಸವರಾಜ ಪಾಟೀಲ, ಜಯಾನಂದ ಮುನವಳ್ಳಿ, ಡಾ.ವಿಶ್ವನಾಥ ಪಾಟೀಲ, ಪ್ರವೀಣ ಬಾಗೇವಾಡಿ, ಡಾ.ಪ್ರೀತಿ ದೊಡವಾಡ, ವಿಜಯ ಮೆಟಗುಡ್, ಮಂಜುನಾಥ ಮುನವಳ್ಳಿ, ಕಾರ್ಯದರ್ಶಿಗಳಾದ ಡಾ.ಸುನೀಲ ಜಲಾಲಪುರೆ, ಡಾ.ಅಶೋಕ ಶೆಟ್ಟರ ಕೆಎಲ್‍ಇ ಸಂಸ್ಥೆಯ ವಿವಿಧ ಶಾಲಾ ಕಾಲೇಜುಗಳ ಪ್ರಾಂಶುಪಾಲರು, ಸಿಬ್ಬಂದಿ, ವಿದ್ಯಾರ್ಥಿಗಳು, ಹುಬ್ಬಳ್ಳಿ ಧಾರವಾಡ ನಾಗರಿಕರು ಪಾಲ್ಗೊಂಡಿದ್ದರು.










