Uncategorized

ಬೆಳಗಾವಿ ಉತ್ತರವಲಯದಲ್ಲಿ ಸಂಚಾರಿ ಕ್ರಾಂತಿ!1 ವಾರದ ಅವಧಿಯಲ್ಲಿ 78,58,500 ರೂ ದಂಡ ವಸೂಲಿ!/

ಬೆಳಗಾವಿ:

ಬೆಳಗಾವಿ ಉತ್ತರ ವಲಯದಲ್ಲಿ ಬಹುದೊಡ್ಡ ದಂಡದ ಹಣವನ್ನು ಪೊಲೀಸ್ ಇಲಾಖೆ ವಸೂಲಿ ಮಾಡಿದೆ. ಬೆಳಗಾವಿ ಉತ್ತರ ವಲಯದಲ್ಲಿ ಸಂಚಾರಿ ನಿಯಮಗಳನ್ನು ಆದಷ್ಟು ಬಿಗಿಗೊಳಿಸಿರು ಇಲಾಖೆ ಈಗಾಗಲೇ ಜಿಲ್ಲಾದ್ಯಂತ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಅದಕ್ಕಾಗಿ ಎಐ ಚಾಲಿತ ಕ್ಯಾಮರಾಗಳನ್ನು ಜಿಲ್ಲಾದ್ಯಂತ ಅಳವಡಿಸಿ ಸಂಚಾರಿ ನಿಯಮಗಳನ್ನು ಗಾಳಿಗೆ ತೂರುವ ವಾಹನ ಚಾಲಕರ ಮೇಲೆ ನಿಗಾವಹಿಸಲಾಗಿದೆ. ಸಧ್ಯ ಬೆಳಗಾವಿ ಉತ್ತರ ವಲಯದ ಐದು ಜಿಲ್ಲೆಗಳಲ್ಲಿ ಒಟ್ಟು 78 ಲಕ್ಷ 58 ಸಾವಿರದ 150 ರೂಪಾಯಿ ದಂಡವನ್ನು ಪೊಲೀಸ್ ಇಲಾಖೆ ವಸೂಲಿ ಮಾಡಿದ್ದಾರೆ. ಬೆಳಗಾವಿ ಜಿಲ್ಲೆ ಒಂದರಲ್ಲಿಯೇ ಸುಮಾರು 20,45,000 ರೂ ದಂಡ ಸಂಗ್ರಹವಾಗಿದ್ದರೆ ವಿಜಯಪುರ ಜಿಲ್ಲೆಯಲ್ಲಿ 30,52, 000 ಸಾವಿರ ದಂಡ ವಸೂಲಿಯಾಗಿದೆ. ಅಲ್ಲದೇ ಬಾಗಲಕೋಟೆ ಜಿಲ್ಲೆಯಲ್ಲಿ 10,15,500 ದಂಡ ವಸೂಲಿಯಾಗಿದೆ. ಧಾರವಾಡ ಜಿಲ್ಲೆಯಲ್ಲಿ ಒಟ್ಟು 8,60,800 ದಂಡ ವಸೂಲಿಯಾಗಿದೆ. ಇನ್ನು ಗದಗ ಜಿಲ್ಲೆಯಲ್ಲಿ 8,84,300 ರೂಪಾಯಿ ವಸೂಲಿಯಾಗಿದೆ. ಹೀಗೆ ಒಟ್ಟು ಬೆಳಗಾವಿ ಉತ್ತರ ವಲಯ ಭಾಗದಲ್ಲಿ ಒಟ್ಟು 78,58,150 ರೂಪಾಯಿ ದಂಡ ವಸೂಲಿ ಮಾಡಿ ಪೊಲೀಸರು ದಂಡ ವಸೂಲಿಯಲ್ಲೂ ದಾಖಲೆ ಬರೆದಿದ್ದಾರೆ.

TV24 News Desk
the authorTV24 News Desk

Leave a Reply

error: Content is protected !!