Uncategorized

ರಾಜ್ಯದ ಜೈಲುಗಳಲ್ಲಿ ಎಲ್ಲಾ ಊಲಾಲಾ!ವೇಷ್ಯಾವಾಟಿಕೆನೂ ನಡೆಯುತ್ತಂತೆ ಗುರು! ಗೃಹಸಚಿವರೇ ಎನಿದು ಕರ್ಮಖಾಂಡ

ಬೆಳಗಾವಿ:

ಬಂಧಿಖಾನೆಗಳು ಎಂದರೆ ತಪ್ಪು ಮಾಡಿದ ವ್ಯಕ್ತಿಯನ್ನು ದಂಡಿಸಿ ಆತನ ಸುಧಾರಣೆ ಮಾಡುವ ಕೇಂದ್ರಗಳು ಅಂತಲೇ ಅದಕ್ಕೆ ನಮ್ಮ ಸಮಾಜದಲ್ಲಿ ಒಂದು ಇಮೇಜ್ ಇದೆ. ಆದರೆ ಸದ್ಯ ರಾಜ್ಯದಲ್ಲಿರುವ ಬಂಧಿಖಾನೆಗಳು ರೆಡ್ ಲೈಟ್ ಏರಿಯಾಗಳಾದವಾ ಎನ್ನುವ ಪ್ರಶ್ನೆ ಈಗ ಮೂಡುತ್ತಿದೆ. ಈ ಸುದ್ದಿಯನ್ನು ರಾಜ್ಯದ ಸ್ಟ್ರಿಕ್ಟ್ ಮಿನಿಸ್ಟರ್ ಮಾನ್ಯ ಪ್ರಿಯಾಂಕ್ ಖರ್ಗೆ ನೋಡಲೇಬೇಕಾಗಿದೆ.
ರಾಜ್ಯದ ಜೈಲು ಹಾಗೂ ಜೈಲಿನಲ್ಲಿ ನಡೆಯುವ ಅನಾಚಾರಗಳ ಕುರಿತು ವ್ಯಕ್ತಿಯೋರ್ವ ವಿಡಿಯೋ ಮಾಡಿ ಹರಿಬಿಟ್ಟಿದ್ದು ಸದ್ಯ ವಿಡಿಯೋ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.ವಿಡಿಯೋದಲ್ಲಿ ವ್ಯಕ್ತಿ ಮಾತನಾಡಿ ರಾಜ್ಯದ ಜೈಲುಗಳು ರೆಡ್ ಲೈಟ್ ಏರಿಯಾಗಳಾಗಿವೆ ಎಂದು ಆರೋಪಿಸಿದ್ದಾರೆ.ಮತ್ತು ಅದಕ್ಕೆ ಪೂರಕವಾದ ವಿಡಿಯೋಗಳೂ ಸಹ ನನ್ನ ಬಳಿ ಇವೆ ಎಂದು ಹೇಳಿಕೆ ನೀಡಿದ್ದಾನೆ.ಜೈಲಲ್ಲಿದ್ದ ಕೈದಿಯಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಿಡಿಯೋದಲ್ಲಿ ವ್ಯಕ್ತಿ ಹೇಳಿಕೊಂಡಿದ್ದಾನೆ. ವಿಡಿಯೋ ಮಾಡಿರುವ ವ್ಯಕ್ತಿ ತುಮಕೂರು ಮೂಲದ ಸಾಯಿಕಿಮಾರ್ ಎಂದು ತಿಳಿದು ಬಂದಿದ್ದು ವಿಡಿಯೋದಲ್ಲಿ ಅಧಿಕಾರಿಗಳ ಮೇಲೆ ಸಾಯಿಕುಮಾರ್ ಆರೋಪಗಳ ಸುರಿಮಳೆಯನ್ನೆ ಗೈದಿದ್ದಾನೆ.ಜೈಲಲ್ಲಿ ಅಧಿಕಾರಿಗಳೇ ವೇಷ್ಯಾವಾಟಿಕೆ ದಂಧೆ ನಡೆಸ್ತಾರೆ ಎಂದು ಅಧಿಕಾರಿಗಳ ಮೇಲೆ ಸಾಯಿಕುಮಾರ್ ಆರೋಪಿಸಿದ್ದು ಮಾತು ಮುಂದುವರೆಸಿ ಜೈಲಿನೊಳಗೆ ಮೊಬೈಲ್, ಎಣ್ಣೆ ಎಲ್ಲವೂ ಸಪ್ಲೈ ಮಾಡೋದೆ ಅಧಿಕಾರಿಗಳು ಎಂದು ಆರೋಪಿಸಿದ್ದಾನೆ.
ಅಲ್ಲದೇ ಅದಕ್ಕೆ ಸಂಬಂಧಿಸಿದ ವಿಡಿಯೋಗಳು ತನ್ನ ಬಳಿ ಇದೆ ಎಂದು ಸಾಯಿಕುಮಾರ್ ಹೇಳಿಕೆ ನೀಡಿದ್ದಾನೆ.ಬೆಳಗಾವಿ ಸೇರಿದಂತೆ ಆತ ಇದ್ದ ಜೈಲು ವ್ಯವಸ್ಥೆ ಕುರಿತು ಸ್ಪೋಟಕ ಮಾಹಿತಿ ಹಾಗೂ ಅಧಿಕಾರಿಗಳ ಕಳ್ಳಾಟದ ಬಗ್ಗೆ ಸಾಯಿಕುಮಾರ್ ಬಿಚ್ಚಿಟ್ಟಿದ್ದಾನೆ.
2024 ರಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಾಯಿಕುಮಾರ್ ಹಿಂಡಲಗಾ ಜೈಲಿನಲ್ಲಿದ್ದ ಸದ್ಯ ವಿಡಿಯೋ ಬಿಡುಗಡೆ ಮಾಡಿರುವ ಸಾಯಿಕುಮಾರ್ ಜೈಲು ಅಧಿಕಾರಿಗಳ ಮೇಲೆ ಗುರುತರದ ಆರೋಪ ಮಾಡಿದ್ದಾನೆ.ಜೈಲಿನೊಳಗೆ
ವೇಷ್ಯಾವಾಟಿಕೆಯಂತ ಗಂಭೀರ ಆರೋಪದ ವಿಡಿಯೋ ಇದೆ ಎಂದಿರುವ ಸಾಯಿಕುಮಾರ್ ಜೈಲು ಅಧಿಕಾರಿಗಳು ಹಾಗೂ ಬಂಧಿಖಾನೆ ವ್ಯವಸ್ತೆಯ ಬಗ್ಗೆ ಗುರುತರದ ಆರೋಪ ಮಾಡಿದ್ದಾನೆ.

TV24 News Desk
the authorTV24 News Desk

Leave a Reply

error: Content is protected !!