ರಾಜ್ಯ

ಬೊಮ್ಮಾಯಿ ಬಜೆಟ್​ನಲ್ಲಿ ಯಾವ ಇಲಾಖೆಗೆ ಎಷ್ಟು ಅನುದಾನ..?
ಬೆಂಗಳೂರು: ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಇಂದು 2ನೇ ಬಾರಿಗೆ ರಾಜ್ಯ ಬಜೆಟ್​ ಮಂಡನೆ ಮಾಡಿದರು. ಎಲ್ಲರ ಮನ ಮುಟ್ಟಬೇಕು ಎನ್ನುವ ದಿಸೆಯಲ್ಲಿ ಲೆಕ್ಕಾಚಾರದ ಕೋಟೆಯನ್ನ ಕಟ್ಟಿದೆ. ಈ ಬಾರಿ ಬರೋಬ್ಬರಿ 3.9 ಲಕ್ಷ ಕೋಟಿ ಗಾತ್ರದ ಬಜೆಟ್​ ಮಂಡನೆ ಮಾಡಲಾಗಿದೆ.
ಯಾವ್ಯಾವ ಇಲಾಖೆಗೆ ಎಷ್ಟೆಷ್ಟು ದುಡ್ಡು ಹಂಚಿಕೆ ಮಾಡಿದ್ದಾರೆ ಎನ್ನುವುದು ಈ ಕೆಳಗಿನಂತಿದೆ.
*ಶಿಕ್ಷಣ ಕ್ಷೇತ್ರ : 37 ಸಾವಿರದ 960 ಕೋಟಿ ರೂ.
*ಜಲಸಂಪನ್ಮೂಲ : 22 ಸಾವಿರದ 854 ಕೋಟಿ ರೂ
*ಗ್ರಾಮೀಣಾಭಿವೃದ್ಧಿ : 20 ಸಾವಿರದ 494 ಕೋಟಿ ರೂ.
*ನಗರಾಭಿವೃದ್ಧಿ : 17 ಸಾವಿರದ 938 ಕೋಟಿ ರೂ.
*ಕಂದಾಯ : 15 ಸಾವಿರದ 943 ಕೋಟಿ ರೂ.
*ಆರೋಗ್ಯ & ಕುಟುಂಬ ಕಲ್ಯಾಣ : 15 ಸಾವಿರದ 151 ಕೋಟಿ ರೂ.
*ಒಳಾಡಳಿತ & ಸಾರಿಗೆ ಇಲಾಖೆ : 14 ಸಾವಿರದ 509 ಕೋಟಿ ರೂ.
*ಇಂಧನ ಇಲಾಖೆ : 13 ಸಾವಿರದ 803 ಕೋಟಿ ರೂ.
*ಸಮಾಜಕಲ್ಯಾಣ : 11 ಸಾವಿರದ 163 ಕೋಟಿ ರೂ.
*ಲೋಕೋಪಯೋಗಿ : 10 ಸಾವಿರದ 741 ಕೋಟಿ ರೂ.
*ಕೃಷಿ & ತೋಟಗಾರಿಕೆ : 9 ಸಾವಿರದ 456 ಕೋಟಿ ರೂ.
*ಮಹಿಳಾ & ಮಕ್ಕಳ ಕಲ್ಯಾಣ : 5 ಸಾವಿರದ 676 ಕೋಟಿ ರೂಪಾಯಿ
*ಆಹಾರ ಇಲಾಖೆ : 4 ಸಾವಿರದ 600 ಕೋಟಿ ರೂ.
*ವಸತಿ ಇಲಾಖೆ : 3 ಸಾವಿರದ 787 ಕೋಟಿ ರೂ. ಮೀಸಲಿಡಲಾಗಿದೆ.

 

TV24 News Desk
the authorTV24 News Desk

Leave a Reply