Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿಬೆಳಗಾವಿ ನಗರ

ಶಾಲಾ ಅಭಿವೃದ್ಧಿ ಕಾಮಗಾರಿಗಳಿಗೆ ಒತ್ತು ನೀಡಿದ : ಚನ್ನರಾಜ ಹಟ್ಟಿಹೊಳಿ

ಬೆಳಗಾವಿ :ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಾವಿನಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಒಂದು ಸ್ಮಾರ್ಟ್ ಕ್ಲಾಸ್ ಸೇವೆ ಹಾಗೂ ನಾಲ್ಕೂ ಹೆಚ್ಚುವರಿ ಕೊಠಡಿಗಳನ್ನು ಉದ್ಘಾಟಿಸಿದರು. ಇದೆ ಸಂದರ್ಭದಲ್ಲಿ  ಮಾತನಾಡಿದ  ವಿಧಾನ ಪರಿಷತ ಸದಸ್ಯ  ಚನ್ನರಾಜ ಹಟ್ಟಿಹೊಳಿ  ಅವರು  ಸ್ಮಾರ್ಟ್ ಕ್ಲಾಸ್ ಸೇವೆಯಲ್ಲಿ ಪ್ರೊಜೆಕ್ಟರ್, ಎಸಿ, ಬೆಂಚ್, ಯುಪಿಎಸ್‌ ಮತ್ತು ಇನವರ್ಟರ್, ಕಂಪ್ಯೂಟರ್, ಪ್ರಿಂಟರ್, ಟ್ಯಾಬ್, ಸ್ಮಾರ್ಟ್ ಕ್ಯಾಬಿನೆಟ್, ಪೋಡಿಯಮ್, ವಿಂಡೋ ಕರ್ಟನ್ಸ್, ಡೋರ್, ಮ್ಯಾಟ್ಸ್, ಡಿಜಿಟಲ್ ಕಂಟೆಂಟ್, ಇಲೆಕ್ಟ್ರಿಸಿಯನ್, ವಾಲ್ ಕ್ಲಾಕ್, ನೇಮ್ ಪ್ಲೇಟ್, ಪೇಂಟಿಂಗ್, ಟೈಲ್ಸ್ ಹಾಗೂ ಮುಂತಾದ ಸಾಮಗ್ರಿಗಳನ್ನು ಅಳವಡಿಸಲಾಗಿದೆ ಎಂದರು.
ಇವತ್ತಿನ ಇದೇ ಸಂದರ್ಭದಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರೌಢಶಾಲೆಗೆ ಹೆಚ್ಚುವರಿಯಾಗಿ ಎರಡು ಕೊಠಡಿಗಳ ನಿರ್ಮಾಣಕ್ಕೂ ಸಹ ಭೂಮಿ ಪೂಜೆಯನ್ನು ಕೈಗೊಂಡು ಚಾಲನೆಯನ್ನು ನೀಡಿದರು. ಈ ಸಮಯದಲ್ಲಿ ಗ್ರಾಮದ ಹಿರಿಯರು, ಶಂಕರಗೌಡ ಪಾಟೀಲ, ಉಳವಪ್ಪ ಮಲ್ಲಣ್ಣವರ, ಧರೇಗೌಡ ಪಾಟೀಲ, ಬಸವರಾಜ ಮಲ್ಲಣ್ಣವರ, ಎಸ್ ಡಿ ಎಂ ಸಿ ಅಧ್ಯಕ್ಷರು, ರಾಜು ನೇಸರಗಿ, ನಾಗರಾಜ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಾಲಾ ಸಿಬ್ಬಂದಿಯವರು ಉಪಸ್ಥಿತರಿದ್ದರು.
TV24 News Desk
the authorTV24 News Desk

Leave a Reply

error: Content is protected !!