ಬೆಳಗಾವಿ:
ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣಾ ಸಿದ್ಧತೆ ಭರದಿಂದ ಸಾಗಿದೆ.ನಿನ್ನೆಯಷ್ಟೆ ಬೆಳಗಾವಿಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ನೇತೃತ್ವದಲ್ಲಿ ಡಿಸಿಸಿ ಬ್ಯಾಂಕ್ ನ ಸರ್ವಸಾಧಾರಣ ಸಭೆ ಜರುಗಿತ್ತು. ಅದರ ಬೆನ್ನಲ್ಲೆ ಈಗ ಸವದತ್ತಿ ಕ್ಷೇತ್ರದ ತಮ್ಮ ಬೆಂಬಲಿತ ಅಭ್ಯರ್ಥಿಯನ್ನು ಬಾಲಚಂದ್ರ ಜಾರಕಿಹೊಳಿಯವರು ಘೋಷಣೆ ಮಾಡಿದ್ದು ಈ ಬಾರಿ ತಮ್ಮ ಅಭ್ಯರ್ಥಿ ಎಂದು ವಿರೂಪಾಕ್ಷ ಮಾಮನಿ ಹೆಸರನ್ನು ಬಾಲಚಂದ್ರ ಜಾರಕಿಹೊಳಿಯವರು ಘೋಷಣೆ ಮಾಡಿದ್ದಾರೆ. ಸವದತ್ತಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ವಿರೂಪಾಕ್ಷ ಮಾಮನಿಯವರ ಹೆಸರನ್ನು ಘೋಷಣೆ ಮಾಡಿದ್ದಾರೆ.ಈ ಮೊದಲು ಸವದತ್ತಿ ಕ್ಷೇತ್ರದಿಂದ ನಿರ್ದೇಶಕದ ಸ್ಥಾನಕ್ಕೆ ದಿವಂಗತ ಶಾಸಕ ಆನಂದ ಮಾಮನಿ ಸ್ಪರ್ಧೆ ಮಾಡುತ್ತಿದ್ದರು. ಅವರ ಬಳಿಕ ಅವರ ಪತ್ನಿ ರತ್ನಾ ಆನಂದ ಮಾಮನಿ ಸ್ಪರ್ಧೆ ಮಾಡಿದ್ದರು. ಆದರೆ ಈ ಬಾರಿ ಆಯ್ಕೆ ಬದಲಾಗಿದ್ದು ವಿರೂಪಾಕ್ಷ ಮಾಮನಿವರ ಹೆಸರನ್ನು ನಿರ್ದೇಶಕ ಸ್ಥಾನಕ್ಕೆ ಅಂತಿಮಗೊಳಿಸಿ ಬಾಲಚಂದ್ರ ಜಾರಕಿಹೊಳಿಯವರು ಘೋಷಣೆ ಮಾಡಿದ್ದಾರೆ.


