ಬೆಳಗಾವಿ: ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ಪಾಟೀಲ್ ನಗರದ ನಿವಾಸಿ ಲಕ್ಷ್ಮಣ ಹೊಸಮನಿ ಎಂಬುವರಿಗೆ ಸೇರಿದ್ದ ಮನೆಯಲ್ಲಿದ್ದ 30 ಗ್ರಾಂ ಬಂಗಾರ 70 ಸಾವಿರ ರೂಪಾಯಿ ಹಣವನ್ನ ದೋಚಿ ಕಳ್ಳರು ಪರಾರಿಯಾಗಿದ್ದಾರೆ.
ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಕಳ್ಳರು ಕೈ ಚಳಕ ತೋರಿಸಿದ್ದು ಕುಟುಂಬಸ್ಥರು ಕಂಗಾಲಾಗಿದ್ದಾರೆ. ಮನೆಯ ಬೀಗ ಹಾಕಿಕೊಂಡು ಲಕ್ಷ್ಮಣ ಅವರು ಹೊಲಕ್ಕೆ ಹೋಗಿದ್ದರು ಈ ವೇಳೆ ಘಟನೆ ನಡೆದಿದ್ದು
ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು.
ಘಟನಾ ಸ್ಥಳಕ್ಕೆ ರಾಯಬಾಗ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.


