ಕ್ರೈಂಜಿಲ್ಲೆಬೆಳಗಾವಿ

ಧಮ್ ಮಾರೋ ಧಮ್ ಎನ್ನುತ್ತಿದ್ದವರ ಗುಮ್ಮಿದ ಖಾಕಿ ಪಡೆ!

ಬೆಳಗಾವಿ: ಗಾಂಜಾ ನಶಯಲ್ಲಿ ತೇಲಾಡುತ್ತಿದ್ದವರನ್ನು ಬೆಳಗಾವಿ ನಗರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬೆಳಗಾವಿಯ ಮಾರ್ಕೇಡ್ ಠಾಣಾ ವ್ಯಾಪ್ತಿಯಲ್ಲಿ ಮೂವರು ಹಾಗೂ ಮಾಳಮಾರುತಿ ಠಾಣಾ ವ್ಯಾಪ್ತಿಯಲ್ಲಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ರಮವಾಗಿ ಸಿಗುವ ಗಾಂಜಾ ತೆಗೆದುಕೊಂಡು ಸೇವನೆಯಲ್ಲಿ ತೊಡಗಿದ್ದಾಗಲೇ ಪೊಲೀಸರು ನಾಲ್ವರನ್ನು‌ ಬಂಧಿಸಿದ್ದಾರೆ. ಮಾರ್ಕೆಟ್ ಠಾಣಾ ವ್ಯಾಪ್ತಿಯಲ್ಲಿ ರಮೇಶ್ ಅರಳಿಮಟ್ಟಿ, ವಕಾರಹ್ಮದ್ ನಾಯಕವಾಡಿ,ರೋಷನ್ ಮುಲ್ಲಾ‌ ಬಂಧಿತರಾಗಿದ್ದು ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾಹಿಲ್ ಧಾರವಾಡಕರ್ ಎಂಬಾತನದ ಬಂಧನವಾಗಿದೆ. ಸಹಜವಾಗಿ ಪೊಲೀಸರು ಪ್ಯಾಟ್ರೋಲಿಂಗ್ ಮಾಡುವ ಸಂದರ್ಭದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ವೇಳೆಯೇ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ನಗರಕ್ಕೆ ಹೊಸದಾಗಿ ಆಗಮಿಸಿರುವ ನಗರ ಪೊಲೀಸ್ ಆಯುಕ್ತ ಭೂಷನ್ ಭೋರಸೆಯವರು ಮಾಧಕ ವಸ್ತುಗಳ ಮಾರಾಟ ಮತ್ತು ಸೇವನೆಯ ವಿರುದ್ಧ ಸಮರ ಸೇರಿದ್ದು ಸಧ್ಯ ನಗರದಲ್ಲಿ ಮಾಧಕ ವಸ್ತು ಮಾರಾಟ ಮಾಡುವವರು ಹಾಗೂ ಸೇವಿಸುವವರಿಗೆ ನಡುಕ ಶುರುವಾಗಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿತರ ವಿರುದ್ಧ ಮಾಳಮಾರುತಿ‌ ಹಾಗೂ ಮಾರ್ಕೆಟ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

TV24 News Desk
the authorTV24 News Desk

Leave a Reply