ಬೆಳಗಾವಿ:
ಕಿತ್ತೂರು ರಾಣಿ ಚನ್ನಮ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಲಿ ಬೈಲಹೊಂಗಲ ಹಗರಣದ ತನಿಖೆ ನಡೆಸಬೇಕೆಂದು ಆಗ್ರಹಿಸಿ ಜೈಹೋ ಜನತಾ ವೇದಿಕೆ ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಬೈಲಹೊಂಗಲ ತಾಲೂಕಿನ ಕಿತ್ತೂರು ರಾಣಿ ಚನ್ನಮ್ಮ ಸೊಸೈಟಿ ಹಗರಣ ಕುರಿತು 11 ತಿಂಗಳು ಕಳೆದಿದ್ದು, ಗ್ರಾಹಕರು ತನ್ನ ಕಷ್ಟದ ಸಮಯಕ್ಕೆ ಸಹಾಯ ಆಗುವ ನಂಬಿಕೆಯಿಂದ ಈ ಸೊಸೈಟಿ ಯಲ್ಲಿ ದುಡ್ಡು ಡೆಪೊಸಿಟ್ ಮಾಡಿದ್ದರು. ಈಗ 1ಕ್ಕೆ 3 ರಷ್ಟು ಬೆಲೆಗೆ ಆಸ್ತಿ ತಗೊಳ್ಳಿ ಅನ್ನುವ ಸನ್ನಿವೇಶ ನಡೆದಿದ್ದು, ಠೇವಣಿದಾರರಿಗೆ ಯಾವುದೇ ಸೈಟ್ ಅಥವಾ ಜಮೀನು ಬೇಡ ಎಂದು ಒತ್ತಾಯಿಸಿದ್ದಾರೆ.
ನಮಗೆ ನಮ್ಮ ದುಡ್ಡು ಬಡ್ಡಿ ಸಮೇತ ಬೇಕೆನ್ನುವ ಬೇಡಿಕೆ ಇದೆ. ಈಗ ವಂಚಕರು ತಾವು ತಪ್ಪಿಸಿಕೊಳ್ಳಲು ಅಧಿಕಾರಿ ಬಳಗವನ್ನು ತಮ್ಮ ಹಿಡಿತಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕೆಲವು ಬುದ್ದಿ ಜೀವಿಗಳು ಆಶ್ವಾಸನೆ ನೀಡಿ ಸಮಾಧಾನ ಅನ್ನುವ ತುಪ್ಪ ಸವರಿ ಹಗಲು ದರೋಡೆಗೆ ಯಾವುದೇ ಅಡೆತಡ ಆಗದಂತೆ ಠೇವಣಿದಾರರನ್ನು ಹಿಪೋಟೈಸ್ ಮಾಡುವಲ್ಲಿ ಒಂದು ಹಂತಕ್ಕೆ ಗೆದ್ದಿದ್ದರೂ ಕೂಡ ಕೊನೆಗೆ ಸತ್ಯಕ್ಕೆ ಜಯ ಆಗಲಿದೆ ಎಂದರು.
ಈ ಸೊಸೈಟಿ ಮೇಲೆ ಆದಾಯ ತೆರಿಗೆ ಇಲಾಖೆ ಧಾಳಿ ಮಾಡಿದ ನಂತರವೂ ಜನತೆ ಠೇವಣಿ ದುಡ್ಡು, ವಂಚಕರ ಪಾಲಾಗದಂತೆ ತನ್ನ ಕರ್ತವ್ಯ ನಿರ್ವಹಿಸಿದ್ರೆ ಆಗಿದ್ದರೆ ಜನತೆಗೆ ಠೇವಣಿ ದುಡ್ಡು ದುರುಪಯೋಗ ಆಗದಂತೆ ತಡೆಯ ಬಹುದಿತ್ತು. “ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ” ಇವರಿಗೆ ಮಾಹಿತಿ ಕೇಳಿದಾಗ ನಮ್ಮ ಸಂಸ್ಥೆ ಸಾರ್ವಜನಿಕ ಪ್ರಾಧಿಕಾರಕ್ಕೆ ಒಳಪಡುವುದಿಲ್ಲ ಅನ್ನುವ ಜಾಣ ಹಿಂಬರಹ ನೀಡಿ ತನ್ನ ಮೂಲಕ ಮಾಡಲಾದ ಮಹಾನ್ ವಂಚನೆ ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿದರು. ಅಲ್ಲದೆ ಅಲ್ಲಿನ ಅಧಿಕಾರಿಗಳು ಕೈಗೆ ಬಳೆ ತೊಟ್ಟುಕೊಳ್ಳಿ ಎಂದು ಬಳೆಗಳನ್ನು ಪ್ರದರ್ಶನ ಮಾಡಿದರು. ಜನತೆ ಸಂಪೂರ್ಣ ಬೀದಿಗೆ ಬರಲು ಬೇಕಾದ ಎಲ್ಲ ವ್ಯವಸ್ಥೆ ವಂಚಕರೊಡನೆ ಹೆಗಲಿಗೆ ಹೆಗಲು ನೀಡಿ ಸಹಬಾಳ್ವೆ ಯಲ್ಲಿ ಜನತೆ ದುಡ್ಡು ತಿನ್ನುವ ಸೂಕ್ಷ್ಮವಾಗಿದೆ ಎಂದು ಆರೋಪಿಸಿದರು.
ಕಿತ್ತೂರು ರಾಣಿ ಚನ್ನಮ್ಮ ಸೊಸೈಟಿ ಆಡಳಿತ ಮಂಡಳಿ 119 ಶಾಖೆಯ ಮ್ಯಾನೇಜರ್ ಹಾಗೂ ಸ್ಥಾನಿಕ ಫೆಡರೇಷನ್ ಮಂಡಳಿ ಕೂಡ ಈ ಹಗರಣದಲ್ಲಿ ಪರೋಕ್ಷ ಅಪರೋಕ್ಷ ವಾಗಿ ಭಾಗಿಯಾಗಿರುವ ಶಂಕೆ ಇದ್ದು ಇವರ ಮೇಲೂ ಕೂಡ ಕಾನೂನು ಕ್ರಮ ಜರುಗಿಸಿ ಸಾರ್ವಜನಿಕರ ಠೇವಣೆ ಹಣದ ರಕ್ಷಣೆಗೆ ನಿರ್ಧಾರ ಮಾಡಬೇಕಿದೆ ಎಂದು ಆಗ್ರಹಿಸಿದರು.