ಬೆಳಗಾವಿ:
ಅಥಣಿ:ಮಳೆಯಿಂದಾಗಿ ಸುಮಾರು 1.5 ಕಿ ಮೀ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು ಶಾಲಾ ಮಕ್ಕಳು ಸಾರ್ವಜನಿಕರು ಪರದಾಡುವಂತಾಗಿದೆ.ನಮಗೆ ಶಾಲೆಗೆ ಹೋಗಲು ಸಮಸ್ಯೆ ಯಾಗುತ್ತಿದೆ ದಯವಿಟ್ಟು ರಸ್ತೆ ಮಾಡಿ ಕೊಡಿ ಎಂದು ಶಾಲಾ ಮಕ್ಕಳು ಪರಿ ಪರಿಯಾಗಿ ಬೇಡಿಕೊಂಡಿವೆ.
ಅಥಣಿ ತಾಲೂಕಿನ ಸತ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಡಸಿ ತೋಟದಿಂದ ಸತ್ತಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕೆಸರು ಗದ್ದೆಯಾಗಿದ್ದು ಮಳೆ ಬಂದ್ರೆ ಸಾಕು ಮೊಳಕಾಲೆತ್ತರದ ಕೇಸರಿನಲ್ಲೇ ಸಾಗುವ ಅನಿವಾರ್ಯತೆ ಎದುರಾಗಿದೆ.
ಸ್ಥಳೀಯ ಗ್ರಾಮ ಪಂಚಾಯತ್ ಗೆ ಸ್ಥಳೀಯರು ಹಲವು ಬಾರಿ ಮನವಿ ಸಲ್ಲಿಸಿದರು ಕ್ಯಾರೇ ಅನ್ನದ ಅಭಿವೃದ್ದಿ ಅಧಿಕಾರಿಯ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.


