ಬೆಳಗಾವಿ ಮಹಾನಗರಕ್ಕೆ ಡಿಸಿಪಿಯಾಗಿ ನಾರಾಯಣ ಭರಮನಿಯವರನ್ನು ರಾಜ್ಯ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ಮುಖ್ಯಮಂತ್ರಿಗಳಿಂದಾದ ಅವಮಾನದಿಂದ ಬೇಸತ್ತು ನಾರಾಯಣ ಭರಮನಿಯವರು ರಾಜೀನಾಮೆ ನಿರ್ಧಾರಕ್ಕೆ ಬಂದ ಬೆನ್ನಲ್ಲೆ ಸ್ವತಹ ಸಿಎಂ ಸಿದ್ದರಾಮಯ್ಯ ಆದಿಯಾಗಿ ಗೃಹ ಸಚಿವ ಪರಮೇಶ್ವರ ಸಹ ಅವರನ್ನು ಮನವೊಲಿಸಿ ಇಲಾಖೆಯಲ್ಲಿ ಮುಂದುವರೆಯುವಂತೆ ಮನವಿ ಮಾಡಿದ್ದರು. ಸಧ್ಯ ಅವರನ್ನು ಬೆಳಗಾವಿ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿಯಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು ಶೀಘ್ರದಲ್ಲಿಯೇ ಮತ್ತೆ ಖಡಕ್ ಆಗಿ ಬೆಳಗಾವಿ ನಗರಕ್ಕೆ ಡಿಸಿಪಿ ನಾರಾಯಣ ಭರಮನಿಯವರು ಪ್ರವೇಶ ಮಾಡಿ ಅಧಿಕಾರ ಸ್ವೀಕರಿಸಲಿದ್ದಾರೆ.
