ಸವದತ್ತಿ: ಬಸಿಡೋನಿ ಕ್ರಾಸ್ ನಲ್ಲಿ ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ವಾಹನದ ಮೇಲೆ ಖಚಿತ ಮಾಹಿತಿ ಮೇರೆಗೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಓರ್ವ ವ್ಯಕ್ತಿ 25.920 ಲೀ ಮದ್ಯವನ್ನು ವಶ ಮಾಡಿಸಿಕೊಂಡಿದ್ದಾರೆ.
ಅಬಕಾರಿ ಸಿಬ್ಬಂದಿ ಬಸಿಡೋನಿ ಕ್ರಾಸ್ ನಲ್ಲಿ ರಸ್ತೆಗಾವಲು ಮಾಡುತ್ತಿದ್ದಾಗ ಬೀರಪ್ಪ ಲಕ್ಷ್ಮಣ್ ಕಾರ್ಲ್ ಕೊಪ್ಪ ಈತನು ಅಪೆ ತ್ರಿಚಕ್ರ ವಾಹನ ಸಂಖ್ಯೆ KA 20 A 8351 ಮೇಲೆ ಅಕ್ರಮ ಮಧ್ಯವನ್ನು ಸಾಗಾಟ ಮಾಡುತ್ತಿದ್ದಾಗ 160118 ರೂಗಳು ಮೌಲ್ಯದ 25.920 ಲೀ ಮದ್ಯವನ್ನು ಹಾಗೂ ವಾಹನವನ್ನು ಜಪ್ತುಪಡಿಸಿಕೊಂಡು ಆರೋಪಿತನನ್ನು ಬಂಧಿಸಿ ನ್ಯಾಯಾಲಯಕ್ಕ್ಕೆ ಹಾಜರು ಪಡಿಸಿದ್ದಾರೆ.