ಬೆಳಗಾವಿ

ಕರ್ತವ್ಯಕ್ಕೆ ಹಾಜರಾಗಿದ್ದ ಎಎಸ್ಐ ಹೃದಯ ಮರೆಯಿತು ಕರ್ತವ್ಯ ಪ್ರಜ್ಞೆ!

ಬೆಳಗಾವಿ: ಗೋಕಾಕ ಗ್ರಾಮದೇವಿ ಜಾತ್ರೆಗೆ ಕರ್ತವ್ಯಕ್ಕೆಂದು ನಿಯೋಜನೆಗೊಂಡಿದ್ದ ಎಎಸ್ಐ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿ ಕರ್ತವ್ಯ ಸಲ್ಲಿಸುತ್ತಿದ್ದ ಮೀರಾ ನಾಯಕ್(55) ಮೃತ ದುರ್ದೈವಿಯಾಗಿದ್ದು ಕಳೆದ ನಾಲ್ಕು ದಿನಗಳಿಂದ ಗೋಕಾಕ ಗ್ರಾಮದೇವಿ ಜಾತ್ರೆಗೆ ಅವರನ್ನು ಕರ್ತವ್ಯಕ್ಕೆಂದು ನಿಯೋಜನೆ ಮಾಡಲಾಗಿತ್ತು.ಗೋಕಾಕ ಪಟ್ಟಣದ ಎಸ್ಸಿ ಎಸ್ಟಿ ಬಾಲಕರ ಹಾಸ್ಟೇಲ್ ನಲ್ಲಿ ಅವರು ವಾಸ್ತವ್ಯ ಹೂಡಿದ್ದರು. ಇಂದು ಮುಂಜಾನೆ ಅವರಿಗೆ ಹೃದಯಾಘಾತ ಸಂಭವಿಸಿದೆ. ತಕ್ಷಣವೇ ಜೊತೆಗಿದ್ದ ಸಹೋದ್ಯೋಗಿಗಳು ವೈದ್ಯಕೀಯ ನೆರವಿಗೆ ಯತ್ನಿಸಿದರೂ ಸಹ ಫಲಕಾರಿಯಾಗಿಲ್ಲ. ಸಧ್ಯ ನಾಯಕ್ ಅವರ ಮೃತದೇಹವನ್ನು ಗೋಕಾಕ ಸಾರ್ವಜನಿಕ ಆಸ್ಪತ್ರೆಗೆ ರವಾಣೆ ಮಾಡಿದ್ದು ಕುಟುಂಬಸ್ಥರು ಆಗಮಿಸಿದ ನಂತರ ಅವರಿಗೆ ಹಸ್ತಾಂತರ ಮಾಡಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

TV24 News Desk
the authorTV24 News Desk

Leave a Reply