ಬೆಳಗಾವಿ: ಮಹಾನಗರ ಪೊಲೀಸ್ ಆಯುಕ್ತ ಇಡಾ ಮಾರ್ಟಿನ್ ಅವರ ಪತ್ನಿ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದ ವಂಚಕರು, ಅವರ ಸ್ನೇಹಿತರಿಂದ ಹಣಕ್ಕೆ ಬೇಡಿಕೆ ಇಟ್ಟು ವಂಚಿಸಿದ್ದಾರೆ.
ಇಡಾ ಮಾರ್ಟಿನ್ ಪತ್ನಿ ಕ್ರಿಸ್ಟಾಲಿನ್ ಸುಶ್ಮಿತಾ ಎಂ. ಅವರ ವಿವಿಧ ಭಾವಚಿತ್ರಗಳನ್ನು ಬಳಸಿಕೊಂಡು ನಕಲಿ ಖಾತೆ ತೆರೆದ ಆರೋಪಿಗಳು, ಸಾಕಷ್ಟು ಜನರಿಗೆ ಸ್ನೇಹದ ಮನವಿ ಮಾಡಿದ್ದಾರೆ. ಮನವಿ ಸ್ವೀಕರಿಸಿದವರಿಗೆ ಹಣಕ್ಕೆ ಬೇಡಿಕೆ ಇಟ್ಟು, ಹಣ ಪಡೆದು ವಂಚಿಸಿದ್ದಾರೆ.
ಈ ಬಗ್ಗೆ ಬೆಳಗಾವಿ ನಗರ ಸಿಇಎನ್ ಪೊಲೀಸ್ ಠಾಣೆಯಲ್ಲಿ
ಪ್ರಕರಣ ದಾಖಲಾಗಿದ್ದು, ಪೊಲೀಸರು ವಂಚಕರ ಬಂಧನಕ್ಕೆ
ಜಾಲ ಬೀಸಿದ್ದಾರೆ. ಇತ್ತೀಚೆಗಷ್ಟೇ ಕಾನೂನು ಮತ್ತು ಸುವ್ಯವಸ್ಥೆ
ವಿಭಾಗದ ಡಿಸಿಪಿ ರೋಹನ್ ಜಗದೀಶ್ ಹೆಸರಲ್ಲಿ
ವಂಚಿಸಲಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ
ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ತಮ್ಮ
ಖಾತೆಯ ವೈಯಕ್ತಿಕ ಮಾಹಿತಿ, ಫೋಟೋ ಹಾಗೂ
ವಿಡಿಯೋಗಳ ವಿಚಾರವಾಗಿ ಆದಷ್ಟೂ ಎಚ್ಚರಿಕೆವಹಿಸಬೇಕಿದೆ.