ಗೋಕಾಕ : ಡಾಕುಮೆಂಟ್ ತೊರಿಸುವಂತೆ ಅದಕ್ಕಿಂತ ಮೊದಲು ಹೆಲ್ಮೇಟ್ ದರಿಸು ಎಂದು ಗೋಕಾಕ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಹಲವಾರು ಬಾರಿ ಮನವಿ ಮಾಡಿದರು ಸಹ ನಿಯಮ ಉಲ್ಲಂಘಿಸಿ ಹೆಲ್ಮೆಟ್ ಧರಿಸದ ಬೈಕ್ ಸವಾರರಿಗೆ ಗ್ರಾಮೀಣ ಪಿ ,ಎಸ್, ಐ ನೇತೃತ್ವದಲ್ಲಿ ದಂಡ ವಸೂಲಿ ಮಾಡುವ ಬದಲಾಗಿ ಸ್ಥಳದಲ್ಲಿ ಹೆಲ್ಮೆಟ್ ಖರೀದಿ ಅತಲೆಗೆ ದರಿಸುವ ಬಿಸಿ ಮುಟ್ಟಿಸಿದರು.
ಗೋಕಾಕದಿಂದ ಪಾಲ್ಸಗೆ ಹೋಗುವ ಮದ್ಯ ಮಾರ್ಗದಲ್ಲಿ ಗ್ರಾಮೀಣ ಪೋಲಿಸರು ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುತ್ತಿದ್ದವರಿಗೆ ದಂಡ ಬರಿಸಿ ಇಲ್ಲವಾದ್ರೆ ಹೆಲ್ಮೇಟ್ ತೊರಿಸಿ ಎಂದು ವಾಗ್ವಾದಕ್ಕಿಳಿದ ಸವಾರರಿಗೆ ಪೊಲಿಸರು ಖಡಕ್ಕಾಗಿ ಉತ್ತರಿಸಿದರು.
ಪ್ರತಿಯೊಬ್ಬ ಬೈಕ್ ಸವಾರರು ನಿಮ್ಮ ಕುಟುಂಬದ ಸುರಕ್ಷತೆಗಾಗಿ ಮತ್ತು ಆರೋಗ್ಯದ ದೃಷ್ಟಿಯಿಂದ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು ಎಂದು ಬುದ್ದಿಮಾತು ಹೇಳಿದರು. ಜೊತೆಯಲ್ಲಿ ಸಾರ್ವಜನಿಕರು ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ವಾಹನ ಚಲಾಯಿಸಬೇಕು. ಸಂಚಾರ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ಸಲಹೆ ನೀಡಿದರು.ಇದೆ ಹೊತ್ತಿನಲ್ಲಿ ಬೈಕ್ ಸವಾರನೊರ್ವ ಪೋಲಿಸರ ಕಾರ್ಯಕ್ಕೆ ಶ್ಲ್ಯಾಘನೀಯ ವ್ಯಕ್ತ ಪಡಿಸಿದರು.









