ಬೆಳಗಾವಿ

ಗೋವಾ ಅಕ್ರಮ ಮದ್ಯ ವಶ: ಓರ್ವನ ಬಂಧನ

ಬೆಳಗಾವಿ:ಗೋವಾ ಮದ್ಯವನ್ನು ಅಕ್ರಮವಾಗಿ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಆರೋಪಿಯೋರ್ವನನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದು, ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಬೆಳಗಾವಿ ಮಹಾದ್ವಾರ ರಸ್ತೆಯ ಮಂಜುನಾಥ ಮಲಗೌಡ ಗಿಡಗೇರಿ (25) ಬಂಧಿತ ಆರೋಪಿಯಾಗಿದ್ದು, ಸುಭಾಷ ಸುಧೀರ ಡೇ ( 43) ಮತ್ತು ಮನೆಯ ಮಾಲೀಕ ತಲೆಮರೆಸಿಕೊಂಡ ಇನ್ನಿಬ್ಬರು ಆರೋಪಿಗಳು. ಅಬಕಾರಿ ಅಧಿಕಾರಿಗಳ ತಂಡವು ಹಳೆ ಬಿಪಿ ರಸ್ತೆಯ ರೈಲ್ವೆ ಗೇಟ್ ಹತ್ತಿರವಿರುವ ತಾನಾಜಿ ಗಲ್ಲಿಯಲ್ಲಿನ ಮನೆ ಮೇಲೆ ದಾಳಿ ನಡೆಸಿತು.

TV24 News Desk
the authorTV24 News Desk

Leave a Reply