ಜಿಲ್ಲೆಬೆಳಗಾವಿಬೆಳಗಾವಿ ನಗರ

5 ಹಾಗೂ 6 ರಂದು ಬೆಳಗಾವಿ ನಗರದಲ್ಲಿ  ನೀರು ಸರಬರಾಜಿನಲ್ಲಿ ವ್ಯತ್ಯಯ!

ಬೆಳಗಾವಿ:

ಹಿಡಕಲ್ ಜಲಾಶಯದ 110 kV MUSS ಪ್ರಸರಣ ಮಾರ್ಗ ಹಾಗೂ ಅದಕ್ಕೆ ಸಂಬಂಧಿಸಿದ ವಿದ್ಯುತ್ ವಿತರಣಾ ಕೇಂದ್ರದಲ್ಲಿರುವ 10 MVA 110/33 kV ವಿದ್ಯುತ್ ಪರಿವರ್ತಕದ (transformer) ಮೇಲೆ HESCOM ವತಿಯಿಂದ ಕೈಗೊಳ್ಳಲಾಗುವ ಕಡ್ಡಾಯ ತ್ರೈಮಾಸಿಕ ನಿರ್ವಹಣಾ ಕಾರ್ಯದ ನಿಮಿತ್ತ ವಿದ್ಯುತ್ ಸ್ಥಗಿತಗೊಳಿಸಲಾಗುತ್ತಿದೆ. ಹೀಗಾಗಿ 05/09/2026 ರಿಂದ 06/09/2026 ರವರೆಗೆ ಬೆಳಗಾವಿಯ ವಿವಿಧ ಭಾಗಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಎಲ್ ಆಂಡ್ ಟಿ ಕಂಪನಿ ತಿಳಿಸಿದೆ.ಈ ಕುರಿತು ಪತ್ರಿಕಾಪ್ರಕಟನೆ ಹೊರಡಿಸಿರುವ ಕಂಪನಿಯ ಜನರಲ್ ಮ್ಯಾನೇಜರ್ ದಿನಾಂಕ 5 ಮತ್ತು 6 ರಂದು ಬೆಳಗಾವಿಯ ವಿವಿಧ ಕಡೆಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತಯ ಉಂಟಾಗಲಿದೆ ಎಂದು ತಿಳಿಸಿದ್ದಾರೆ.ಈ ಅವಧಿಯಲ್ಲಿ ಈ ಕೆಳಗಿನ ಪ್ರದೇಶಗಳಲ್ಲಿ ನೀರು ಸರಬರಾಜಿಗೆ ಅಡಚಣೆಯಾಗಲಿದ್ದು, ಪರಿಣಾಮವಾಗಿ ನಿಗದಿತ ಸರಬರಾಜು ವೇಳಾಪಟ್ಟಿಯಲ್ಲಿ 2 ದಿನಗಳ ವಿಳಂಬವಾಗಲಿದೆ.
ಇನ್ನು ನೀರು ಸರಬರಾಜು ವ್ಯತ್ಯಯವಾಗುವ ಪ್ರದೇಶಗಳು ಇಂತಿವೆ.

ಬೆಳಗಾವಿ ಉತ್ತರ ಮತ್ತು ಬೆಳಗಾವಿ ದಕ್ಷಿಣ ಸಂಪೂರ್ಣ ಪ್ರದೇಶಗಳು ಸೇರಿದಂತೆ (ಉತ್ತರ ಮತ್ತು ದಕ್ಷಿಣ ಡೆಮೊ ವಲಯಗಳು ಹಾಗೂ ಬಲ್ಕ್ ಸಪ್ಲೈ ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ
ಉಂಟಾಗಲಿದೆ

TV24 News Desk
the authorTV24 News Desk

Leave a Reply

error: Content is protected !!