ಜಿಲ್ಲೆಬೆಳಗಾವಿಬೆಳಗಾವಿ ನಗರ

ಬರ ಪಟ್ಟಿಯಿಂದ ಜಿಲ್ಲೆಯನ್ನು ಕೈ ಬಿಟ್ಟಿಲ್ಲ!ನಿಯಮದ ಪ್ರಕಾರ ಸೇರ್ಪಡೆ ಆಗಬೇಕು ಸತೀಶ್ ಜಾರಕಿಹೊಳಿ!

ಬೆಳಗಾವಿ:

ಬೆಳಗಾವಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮಾಧ್ಯಮಗಳೊಂದಿಗೆ ಮಾತನಾಡಿ ಬೆಳಗಾವಿ ಜಿಲ್ಲೆ ಬರ ಪಟ್ಟಿಯಲ್ಲಿ ಕೈಬಿಟ್ಟಿಲ್ಲ ಇನ್ನೂ ಬರ ಪಟ್ಟಿಯಲ್ಲಿ ಸೇರ್ಪಡೆ ಆಗಬೇಕಿದೆ.ನಿಯಮಾವಳಿ ಪ್ರಕಾರ ಬೆಳಗಾವಿ ಜಿಲ್ಲೆ ಸೇರ್ಪಡೆ ಆಗಬೇಕು ಎಂದರು.ಮಾತು ಮುಂದುವರೆಸಿದ ಸಚಿವರು
ಮೂರು ತಾಲೂಕು ಇನ್ನೂ ನಿಯಮಾವಳಿಯಲ್ಲಿ ಬರುವುದಿಲ್ಲ.ಕೇಂದ್ರ ಸರ್ಕಾರ ನಿಯಮಾವಳಿ ಪ್ರಕಾರ ಬರುವುದಿಲ್ಲ ಈಗಾಗಲೇ ನಾವು ಹೆಸರು, ಉದ್ದು ಬೆಳೆಯ ಮಧ್ಯಂತರ ಬೆಳೆ ವಿಮಾ ಕೊಡ್ತಿದ್ದೇವೆ.ಮುಂದಿನ‌‌ ದಿನಗಳಲ್ಲಿ ಇನ್ನಷ್ಟು ಬೆಳೆ ಘೋಷಣೆ ಮಾಡ್ತಾರೆ.ಬಹಳಷ್ಟು ಜನ ರೈತರು ಬೆಳೆ ವಿಮೆ ಮಾಡಿಲ್ಲ ಎಂದರು.ಇನ್ನು ಎಸ್.ಐ.ಆರ್ ನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ5 ಲಕ್ಷ ಜನರ ಡ್ರಾಪ್ ವಿಚಾರಕ್ಕೆ ಎಸ್.ಐ.ಆರ್ ಪ್ರಕ್ರಿಯೆ ಸರಿಯಾಗಿಯೇ ಇದೆ.ನಮ್ಮ ಅಧಿಕಾರಿಗಳು ಎಲ್ಲವೂ ಸರಿಯಾಗಿ ಮಾಡಿದ್ದಾರೆ.ಎಸ್.ಐ.ಆರ ವಿಚಾರದಲ್ಲಿ ಆತಂಕ ಪಡುವಂತಹದ್ದು ಏನು ಇಲ್ಲ ಸತೀಶ್ ಜಾರಕಿಹೊಳಿ ಬರದ ವರದಿ ಸಿಎಂ ಅವರ ಕೈಗೆ ಸೇರಿಲಿ ಆ ಬಳಿಕ ನಾವು ಸಿಎಂ ಜೊತೆಗೆ ಚರ್ಚೆ ಮಾಡ್ತಿವಿ
ಈ ಹಿಂದೆಯೂ ನಾನು ಸಿದ್ದರಾಮಯ್ಯ ಅವರ ಚರ್ಚೆ ಮಾಡಿದ್ದೇ ಕೇಂದ್ರದಂತೆ ರಾಜ್ಯದಿಂದಲೂ ಪರಿಹಾರ ನೀಡುವ ಬಗ್ಗೆ ಹೇಳಿದ್ದೆ ಆಗ ಕೇಂದ್ರಕ್ಕಾಗಿ ಕಾಯದೇ ರಾಜ್ಯ ಸರ್ಕಾರವೇ ಪರಿಹಾರ ಕೊಟ್ಟಿತ್ತು ಎಂದರು. ಇನ್ನು ಹಿಡಕಲ್ ಜಲಾಶಯದಿಂದ ಅಗತ್ಯವಿರುವ ನೀರು ಬಿಡುಗಡೆ ಮಾಡ್ತಿದ್ದೇವೆ
ಎರಡು ಕಾಲುವೆಗಳಿಗೂ ಅಗತ್ಯ ನೀರು ಹೋಗ್ತಿದೆ ಕಾಲುವೆಗಳ ನೀರು ಟೇಲ್ ಎಂಡ್ ಗೆ ಹೋಗಬೇಕು ಎಂದು ಜಾರಕಿಹೊಳಿ ಹೇಳಿದರು.

TV24 News Desk
the authorTV24 News Desk

Leave a Reply

error: Content is protected !!