



ಬೆಳಗಾವಿ:
ಮದುವೆಯಾಗಿ 11 ವರ್ಷದ ನಂತರ ವಿಕಲಾಂಗನ ಮೊಹಕ್ಕೆ ಬಿದ್ದು ಪತ್ನಿಯೊಬ್ಬಳು ತನ್ನ ಪತಿಗೆ ಚಟ್ಟ ಕಟ್ಟಿದ್ದಾಳೆ. ಪ್ರೀಯಕರನ ಜೊತೆ ಸೇರಿ ಪತಿಯ ಹತ್ಯೆ ಮಾಡಿ ನಂತರ ಭರ್ಜರಿ ಪಾರ್ಟಿ ಮಾಡಿ ಎಂಜಾಯ್ ಮಾಡುತ್ತಿದ್ದ ಮೂವರನ್ನು ಸಧ್ಯ ರಾಮದುರ್ಗ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಪ್ರೀಯಕರನಿಂದಲೇ ತನ್ನ ಪತಿಗೆ ಚಟ್ಟ ಕಟ್ಟಿದ ಪಾಪಿ ಪತ್ನಿಯ ಹೆಸರು ಕಮಲವ್ವ ಆಡಿನ್ ಅಂತ ಇವಳೇ ಈ ಸ್ಟೋರಿಯ ನಿಜವಾದ ವಿಲನ್. ಈಕೆ ಮಾಡಿದ ಖತರನಾಕ್ ಕೆಲಸಕ್ಕೆ ಇಡೀ ರಾಮದುರ್ಗವೇ ಬೆಚ್ಚಿ ಬಿದ್ದಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಖಾನಪೇಟ್ ಬಳಿಯಲ್ಲಿ ಜುಲೈ 7 ರಂದು ಭೀಕರವಾಗಿ ಹತ್ಯೆಯಾದ ಸ್ಥೀತಿಯಲ್ಲಿ ಒಂದು ಮೃತದೇಹ ಸಿಕ್ಕಿತ್ತು. ಕುತ್ತಿಗೆಗೆ ಟವಲ್ ನಿಂದ ಸುತ್ತಿ ಹತ್ಯೆ ಮಾಡಿ ಬಳಿಕ ಮರ್ಮಾಂಗಕ್ಕೆ ಒದ್ದು, ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು. ತನಿಕೆ ಕೈಗೊಂಡ ರಾಮದುರ್ಗ ಪೊಲೀಸರು ಕೊಲೆಯಾದ ವ್ಯಕ್ತಿಯ ಹೆಸರು ಈರಪ್ಪ ಆಡಿನ್ ಎಂಬುದು ಪತ್ತೆ ಮಾಡಿದ್ದರು. ಆತ ಧಾರವಾಡದ ಅಮ್ಮಿನಬಾವಿ ಗ್ರಾಮದ ನಿವಾಸಿ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಮಾಹಿತಿ ಸಿಕ್ಕಿತ್ತು. ಆದರೆ ಆತ ರಾಮುರ್ಗದ ಬಳಿ ಯಾಕೆ ಕೊಲೆಯಾದ ಎಂದು ಪೊಲೀಸರು ತೀವ್ರವಾಗಿ ವಿಚಾರಣೆ ನಡೆಸಿದಾಗ ಕೊಲೆ ಹಿಂದೆ ಆತನ ಪತ್ನಿಯ ನೇರವಾದ ಕೈವಾಡ ಇರೋದು ಗೊತ್ತಾಗಿತ್ತು. ಭೀಕರವಾಗಿ ಕೊಲೆಯದ ಈರಪ್ಪ ಆಡಿನ ಹಾಗೂ ಕಮಲವ್ವ ಇಬ್ಬರಿಗೆ 11 ವರ್ಷಗಳ ಹಿಂದೆ ಮದುವೆ ಆಗಿತ್ತು. ಕೆಲ ವರ್ಷ ಚನ್ನಾಗಿದ್ದ ಈರಪ್ಪ ಬಳಿಕ ಪತ್ನಿಗೆ ಇನ್ನಿಲ್ಲದ ಕಿರುಕುಳ ನೀಡಲು ಆರಂಭ ಮಾಡಿದ್ದ ಧಾರವಾಡ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಕಮಲವ್ವನ ಬಳಿ ಹಣ ಪಡೆದು ಮದ್ಯಪಾನ ಮಾಡಿ ಕಿರುಕುಳ ನೀಡುತ್ತಿದ್ದ . ಇದರಿಂದ ಬೇಸತ್ತಿದ್ದ ಕಮಲವ್ವಗೆ ಎರಡು ವರ್ಷಗಳ ಹಿಂದೆ ಜಾನುವಾರು ಮಾರಾಟದ ದಲ್ಲಾಳಿ ಸಾಬಪ್ಪನ ಪರಿಚಯ ಆಗುತ್ತು. ಕೆಲ ದಿನಗಳಲ್ಲಿಯೇ ಅವರ ಮಧ್ಯೆ ಪ್ರೇಮ ಬೆಳೆದು ಅದು ಅನೈತಿಕ ಸಂಬಂಧಕ್ಕೆ ತಿರುಗಿತ್ತು. ಪತಿಯನ್ನು ಒಂದು ಗತಿ ಕಾಣಿಸಿ ಎಂದು ಪ್ರೀಯಕರನಿಗೆ ಕಮಲವ್ವ ತೀವ್ರವಾಗಿ ಒತ್ತಾಯ ಮಾಡುದ್ದಳು. ಪತಿಗೆ ಒಂದು ಗತಿ ಕ ಕಾಣಿಸದೆ ಇದ್ದರೆ ತಾನೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪ್ರೀಯಕರ ಸಾಬಪ್ಪನಿಗೆ ಬೆದರಿಕೆ ಸಹ ಹಾಕಿದ್ದಳು.ಬಳಿಕ ಕಮಲವ್ವ ಹಾಗೂ ಆಕೆಯ ಪ್ರೀಯಕರ ಸಾಬಪ್ಪ ಹಾಗೂ ಆತನ ಸ್ನೇಹಿತ ಫಕೀರಪ್ಪ ಸೇರಿಕೊಂಡು ಈರಪ್ಪನಿಗೆ ಮದ್ಯಪಾನ ಮಾಡಿಸಿ ಬೈಕ್ ಮೇಲೆ ಖಾನಪೇಟ ಬಳಿ ಕರೆದುಕೊಂಡು ಹೋಗಿ ಬರ್ಬರವಾಗಿ ಕೊಲೆ ಮಾಡಿ ಬಳಿಕ ಮುನವಳ್ಳಿಯಲ್ಲಿ ಪಾರ್ಟಿ ಮಾಡಿದ್ದರು.ಮೃತ ಈರಪ್ಪನ ಮೈಮಿಲಿಲ್ಲ ಹನುಂತನ ಹಚ್ಚೆಯಿಂದ ಪ್ರಾರಂಭವಾದ ಪೊಲೀಸರ ತನಿಖೆ ಸಧ್ಯ ಆರೋಪಿಗಳನ್ನು ಜೈಲೂಟ ತಿನ್ನಿಸುವಲ್ಲಿ ಯಶಸ್ವಿಯಾಗಿದೆ.ಒಟ್ಟಿನಲ್ಲಿ ಪತಿಯನ್ನು ಹತ್ಯೆ ಮಾಡಿ ಬಿಂದಾಸ್ ಆಗಿ ಪ್ರೀಯಕರನ ಜೊತೆ ಪಾರ್ಟಿ ಮಾಡಿಕೊಂಡು ಓಡಾಡುತಿದ್ದ ಮಹಿಳೆ ಹಾಗೂ ಕೃತ್ಯದಲ್ಲಿ ಭಾಗಿ ಆದ ಒಟ್ಟು ಮೂವರನ್ನು ರಾಮದುರ್ಗ ಪೊಲೀಸರು ಮೂರು ಜನರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.