ಬೆಳಗಾವಿ: ನಮ್ಮ ಬಾಕಿ ಸಂಭಾವನೆ ನೀಡುವಂತೆ ಆಗ್ರಹಿಸಿ ಗ್ರಾಮ ವಿದ್ಯುತ್ ಪ್ರತಿನಿಧಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಬೈಲಹೊಂಗಲ ಹೆಸ್ಕಾಂ ಕಚೇರಿ ಎದುರು ಗ್ರಾಮ ವಿದ್ಯುತ್ ಪ್ರತಿನಿಧಿಗಳು ಧರಣಿ ನಡೆಸುತ್ತಿದ್ದಾರೆ. ಉಚಿತ ವಿದ್ಯುತ್ ಭರವಸೆ ಹಿನ್ನೆಲೆ ರಾಜ್ಯದಲ್ಲಿ ಒಂದೆಡೆ ವಿದ್ಯುತ್ ಬಿಲ್ ಕಟ್ಟಲ್ಲ ಎಂದು ಜನರು ಹೇಳುತ್ತಿದ್ದರೆ, 6 ತಿಂಗಳಿಂದ ಸಂಭಾವನೆ ಬಾಕಿ ಇರಿಸಿದ್ದಕ್ಕೆ ಆಕ್ರೋಶ ಹೊರಹಾಕುತ್ತಿದ್ದಾರೆ.2022ರ ಡಿಸೆಂಬರ್‌ನಿಂದ ಈವರೆಗೆ ಹೆಸ್ಕಾಂ ಗ್ರಾಮ ವಿದ್ಯುತ್ ಪ್ರತಿನಿಧಿಗಳಿಗೆ ಸಂಭಾವನೆ ನೀಡಿಲ್ಲ. ಹೆಸ್ಕಾಂನಲ್ಲಿ 1200 ಗ್ರಾಮ ವಿದ್ಯುತ್ ಪ್ರತಿನಿಧಿಗಳಿದ್ದು, ಬೈಲಹೊಂಗಲ ವಿಭಾಗದಲ್ಲಿ ನೂರು ಗ್ರಾಮ ವಿದ್ಯುತ್ ಪ್ರತಿನಿಧಿಗಳಿದ್ದೇವೆ. ಡಿಸೆಂಬರ್‌ನಿಂದ ಈವರೆಗೂ ನಮಗೆ ಸಂಭಾವನೆ ನೀಡಿಲ್ಲ. ಪ್ರತಿನಿತ್ಯ 200 ರೂಪಾಯಿ ಪೆಟ್ರೋಲ್‌ಗೆ ಖರ್ಚಾಗುತ್ತದೆ. ನಮ್ಮ ಸಂಭಾವನೆ ನೀಡುವವರೆಗೂ ನಾವು ಪ್ರತಿಭಟನೆ ಕೈ ಬಿಡಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇದೇ ವೇಳೆ ನಮ್ಮ ಕೆಲಸ ಖಾಯಂ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.
tv24plus.in > Blog > ಜಿಲ್ಲೆ > ಬೆಳಗಾವಿ > ವಿದ್ಯುತ್ ಬಿಲ್ ಕಟ್ಟಲ್ಲ ಸಂಬಳ ಕೊಡಲು ದುಡ್ಡಿಲ್ಲ…!
the authorTV24 News Desk
All posts byTV24 News Desk
Leave a reply








