Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ರಾಜ್ಯ

ಬಾಂಬ್ ಬ್ಲಾಸ್ಟ್ ನಟ ಸಂಜಯ ದತ್ತಗೆ ಗಾಯ 

     ಬಾಲಿವುಡ್ ನಟ ಸಂಜಯ್ ದತ್  ಸದ್ಯ ಕನ್ನಡದ ಕೆಡಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಸಾಹಸ ಸನ್ನಿವೇಶ ಚಿತ್ರೀಕರಣವಾಗುತ್ತಿದ್ದು, ಈ ವೇಳೆ ಸಂಜಯ್ ದತ್ ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಇದೆ. ಸಾಹಸ ಸನ್ನಿವೇಶದಲ್ಲಿ ಬಾಂಬ್ ಬ್ಲಾಸ್ಟಿಂಗ್ ಮಾಡುವಾಗ ಸಂಜಯ್ ಗಾಯ ಮಾಡಿಕೊಂಡಿದ್ದಾರೆ.
       ಧ್ರುವ ಸರ್ಜಾ ಮತ್ತು ಜೋಗಿ ಪ್ರೇಮ್  ಕಾಂಬಿನೇಷನ್ ಸಿನಿಮಾ ಇದಾಗಿದ್ದು, ಫೈಟಿಂಗ್ ಸನ್ನಿವೇಶದ ಚಿತ್ರೀಕರಣ ನಡೆಯುತ್ತಿದೆ. ಈ ವೇಳೆ ಬಾಂಬ್ ಬ್ಲಾಸ್ಟ್ ಮಾಡುವಾಗ ಸಂಜಯ್ ದತ್ ಅವರ ಮೊಣಕೈ ಹಾಗೂ ಮುಖಕ್ಕೆ ಗಾಯವಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಕೆಡಿ ಚಿತ್ರದ ಚಿತ್ರೀಕರಣವು ಮಾಗಡಿ ರೋಡ್ ನಲ್ಲಿ ಹಾಕಲಾದ ಸೆಟ್ ನಲ್ಲಿ ನಡೆಯುತ್ತಿತ್ತು. ಎಷ್ಟೇ ಮುತುವರ್ಜಿವಹಿಸಿದರೂ ಇಂತಹ ಅವಘಡಗಳು ನಡೆಯುತ್ತಲೇ ಇವೆ. ಕೆಡಿ ಸಿನಿಮಾ ಕೂಡ ಅದಕ್ಕೆ ಹೊರತಾಗಲಿಲ್ಲ.                   
ಸಂಜಯ್ ದತ್ ಗಾಯಗೊಳ್ಳುತ್ತಿದ್ದಂತೆಯೇ ಶೂಟಿಂಗ್ ನಿಲ್ಲಿಸಲಾಗಿದೆ ಎನ್ನುವ ಮಾಹಿತಿ ಇದೆ. ಸಂಜಯ್ ಮತ್ತು ಧ್ರುವ ನಡುವೆ ಸಾಹಸ ಸನ್ನಿವೇಶದ ಚಿತ್ರೀಕರಣವನ್ನು ನಿರ್ದೇಶಕರು ಸೆರೆ ಹಿಡಿಯುತ್ತಿದ್ದರು ಎಂದು ಗೊತ್ತಾಗಿದೆ.  ಈ ಘಟನೆ ಕಳೆದ ಶುಕ್ರವಾರದಂದು ನಡೆದದ್ದು, ಸಂಜಯ್ ದತ್ ಘಟನೆಯ ನಂತರ ಮುಂಬೈಗೆ ತೆರಳಿದ್ದಾರೆ ಎನ್ನುವ ಮಾಹಿತಿ ಇದೆ.ಸಂಜಯ್ ದತ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ ನ ಮೊದಲನೇ ಸಿನಿಮಾ ಇದಾಗಿದ್ದು, ಸಂಜಯ್ ಅವರ ಕನ್ನಡದ ಎರಡನೇ ಚಿತ್ರ ಎನ್ನುವುದು ವಿಶೇಷ.  ಈ ಸಿನಿಮಾದಲ್ಲಿ ಬಾಲಿವುಡ್ ಇನ್ನೋರ್ವ ಕಲಾವಿದರು ನಟಿಸುತ್ತಿದ್ದು, ಈ ಚಿತ್ರದ ಮೂಲಕ ಶಿಲ್ಪಾ ಶೆಟ್ಟಿ ಮತ್ತೆ ಕನ್ನಡಕ್ಕೆ ಬಂದಿದ್ದಾರೆ.
TV24 News Desk
the authorTV24 News Desk

Leave a Reply

error: Content is protected !!