ಬೆಳಗಾವಿ: ಸಾರ್ವಜನಿಕ ಆಡಳಿತದಲ್ಲಿ ಉತ್ಕರ್ಷ ಸೇವೆ ಸಲ್ಲಿಸಿದ್ದಕ್ಕಾಗಿ ಹಿರಿಯ ಐಎಎಸ್ ಅಧಿಕಾರಿ ಎನ್ ಜಯರಾಮ ಅವರಿಗೆ BEST CEO ಅವಾರ್ಡ ದೊರೆತಿದೆ. ಇತ್ತೀಚಿಗೆ ಚೆನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಪ್ ಮೆಟೀರಿಯಲ್ ಮ್ಯಾನೇಜ್ಮೆಂಟ್ ನ ರಾಷ್ಟ್ರೀಯ ಅಧ್ಯಕ್ಷ ಎಚ್ ಕೆ ಶರ್ಮಾ ಈ ೨೦೨೨ನೇ ಸಾಲಿನ BEST CEO ಅವಾರ್ಡ ಹಿರಿಯ ಐಎಎಸ್ ಅಧಿಕಾರಿ ಎನ್ ಜಯರಾಮ ಅವರಿಗೆ ನೀಡಿ ಸನ್ಮಾನಿಸಿದ್ದಾರೆ.
ಸಾರ್ವಜನಿಕ ಆಡಳಿತ, ಕಾನೂನು ಸುವ್ಯವಸ್ಥೆ, ಪೌರಾಡಳಿತ, ಸ್ಕಿಲ್ ದೇವಲೋಪೇಮೆಂಟ, ಬೆಂಗಳೂರು ಜಲ ಮಂಡಳಿ ಮುಖ್ಯಸ್ಥರಾಗಿ ಕುಡಿಯುವ ನೀರಿನ ಸಮರ್ಪಕ ಪೂರೈಕೆ, ಆರ್ಥಿಕ ಸೊರೈಕೆ ತಡೆಗಟ್ಟಿ ಆದಾಯ ಸಂಗ್ರಹ , ಜಿಲ್ಲಾಧಿಕಾರಿಯಾಗಿ, ಪ್ರಾದೇಶಿಕ ಆಯುಕ್ತರಾಗಿ ಭೂಕಂದಾಯ ಸುಧಾರಣೆ, ಸಾರ್ವಜನಿಕ ಸಮಸ್ಯೆಗಳ ನಿರ್ವಹಣೆ ಮಾಡಿದ ಸಾಧನೆ ಗುರುತಿಸಿ ೨೦೨೨ನೇ ಸಾಲಿನ IAMM BEST CEO ಅವಾರ್ಡ ಹಿರಿಯ ಐಎಎಸ್ ಅಧಿಕಾರಿ ಎನ್ ಜಯರಾಮ ಅವರಿಗೆ ನೀಡಿ ಗೌರವಿಸಲಾಗಿದೆ.