

ಬೆಳಗಾವಿ:
ನಿನ್ನೆ ಸುರಿದ ಮಳೆಗೆ ಮನೆಗೆ ಚರಂಡಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದಲ್ಲಿ ಘಟನೆ ನಡೆದಿದ್ದು ಚರಂಡಿ ನೀರು ಮನೆಗೆ ನುಗ್ಗಿದ ಹಿನ್ನಲೆ ಪುರಸಭೆ ಅಧಿಕಾರಿಗಳ ವಿರುದ್ದ ಮಹಿಳೆಯರ ಹಿಡಿಶಾಪ ಹಾಕಿದ್ದಾರೆ.ಮುನವಳ್ಳಿ ಪಟ್ಟಣದ ಶಿವಲಿಂಗೇಶ್ವರ ನಗರದ ಮನೆಗಳಿಗೆ ಚರಂಡಿ ನೀರು ನುಗ್ಗಿದೆ.ನಿನ್ನೆ ಸುರಿದ ಮಳೆಗೆ ಸ್ಥಳೀಯರ ಕಂಗಾಲಾಗಿದ್ದಾರೆ.ಚರಂಡಿ ಬ್ಲಾಕ್ ಆಗಿದ್ದರಿಂದ ಚರಂಡಿ ನೀಡು ರಸ್ತೆ ಮೇಲೆ ಹರಿದು ಅವಾಂತರವಾಗಿದೆ.ಚರಂಡಿ ಸ್ವಚ್ಛತೆ ಮಾಡಿಸದ ಪುರಸಭೆ ಅಧಿಕಾರಿಗಳ ವಿರುದ್ದ ಜನ ಆಕ್ರೋಶ ಹೊರಹಾಕಿದ್ದಾರೆ.ಚರಂಡಿ ಸ್ವಚ್ಛ ಮಾಡಿಸುವಂತೆ ಹಲವಾರು ಭಾರಿ ಮನವಿ ಮಾಡಿದರೂ ಡೋಂಟ್ ಕೇರ್ ಎನ್ನುವ ಅಧಿಕಾರಿಗಳಿಂದ ಜನ ಹೈರಾಣಾಗಿದ್ದಾರೆ.ಚರಂಡಿಯಲ್ಲಿನ ಗಲೀಜು ಮನೆಗಳಿಗೆ ನುಗ್ಗಿ ಮಹಿಳೆಯರು ಮಕ್ಕಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ಇಷ್ಟೆಲ್ಲಾ ನಡೆದರೂ ಸ್ಥಳಕ್ಕೆ ಬಾರದ ಅಧಿಕಾರಿಗಳು ಹಾಗೂ
ಪುರಸಭೆ ಮುಖ್ಯಾಧಿಕಾರಿ ಹಾಗೂ ಪುರಸಭೆ ಅಧ್ಯಕ್ಷರ ವಿರುದ್ದ ಮಹಿಳೆಯರು ಆಕ್ರೋಶ ಹೊರಹಾಕಿದ್ದಾರೆ.
ತಕ್ಷಣ ಚರಂಡಿ ಸ್ವಚ್ಛತೆ ಮಾಡಿಸುವಂತೆ ಮಹಿಳೆಯರು ಒತ್ತಾಯಿಸಿದ್ದಾರೆ.











