

ಬೆಳಗಾವಿ:
ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ
ಬೆಳಗಾವಿ ಪಾಲಿಕೆಯಲ್ಲೂ ಅಂಗೀಕಾರ ಆಗುತ್ತಾ ಗೊತ್ತುವಳಿ ಎನ್ನುವ ಸಮಾಧಾನಕರ ಸಂಗತಿ ಹಾಗೂ ವಿಚಾರ ಈಗ ಶುರುವಾಗಿದೆ.ಸರ್ಕಾರದಿಂದ ಮೇಯರ್ ಅಂಗಳಕ್ಕೆ ಗೊತ್ತುವಳಿ ಚೆಂಡು ಬಂದಿದ್ದು 1988ರ ವಿಧಾನಸಭೆಯಲ್ಲಿ ಮಹಾಜನ್ ವರದಿ ಅಂತಿಮ ಅಂತಾ ನಿರ್ಧಾರ ಮಾಡಲಾಗಿದೆ.
ಅದೇ ರೀತಿ ಬೆಳಗಾವಿ ಪಾಲಿಕೆಯಲ್ಲೂ ಮಹಾಜನ್ ವರದಿ ಅಂತಿಮ ಎಂದು ಗೊತ್ತುವಳಿ ಮಂಡನೆ ಆಗುತ್ತಾ ಎನ್ನುವ ವಿಚಾರ ಈಗ ಚರ್ಚೆಗೆ ಬಂದಿದೆ.ಕಾಂಗ್ರೆಸ್, ಬಿಜೆಪಿಯಿಂದ ಸದಾ ಭಾಷಾ ರಾಜಕೀಯ ಮಾಡಾಗುತ್ತಿದ್ದು ನಾಯಕರಿಂದ ಮರಾಠಾ ಮತಗಳ ಓಲೈಕೆಗೆ ಆದ್ಯತೆ ನೀಡಲಾಗುತ್ತಿದೆ.ಕನ್ನಡ ಪರ ಗೊತ್ತುವಳಿಗೆ ಹೋರಾಟಗಾರು ಗೊತ್ತುವಳಿ ಮಂಡನೆ ಮಾಡುವಂತೆ ಪಟ್ಟು ಹಿಡಿದಿದ್ದು ಸರ್ಕಾರದಿಂದ ಪಾಲಿಕೆಗೆ 1988 ಸದನದ ನಿರ್ಧಾರದಂತೆ ಮುಂದೊರೆಯಲು ಸೂಚನೆ ಬಂದಿದೆ.ಸರ್ಕಾರದ ಸೂಚನೆಯನ್ನ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಆಯುಕ್ತರು ಮಂಡನೆ ಮಾಡಲಿದ್ದಾರೆ.ಸದ್ಯ ಗೊತ್ತುವಳಿ ಮಂಡನೆ ವಿಚಾರ ತೀವ್ರ ಕುತೂಹಲ ಕೆರಳಿಸಿದೆ. ಅದರಲ್ಲೂ ಆಡಳಿತಾರೂಢ ಬಿಜೆಪಿ ನಡೆ ಈ ವಿಚಾರದಲ್ಲಿ ಎಲ್ಲರ ಗಮನ ಸೆಳೆದಿದೆ.









