ಕ್ರೈಂಜಿಲ್ಲೆಬೆಳಗಾವಿ

ಕೂಗಳತೆ ಅಂತರದಲ್ಲಿ ಅಪಘಾತದಿಂದ ಪಾರಾದ ಆರ್ ಎಸ್ ಎಸ್ ಮುಖಂಡ ಅರವಿಂದರಾವ್ ದೇಶಪಾಂಡೆ!

ಬೆಳಗಾವಿ:

ಅಪಘಾತದಿಂದ ಕೂಗಳತೆ ಅಂತರದಲ್ಲಿ ಅಪಾಯದಿಂದ ಆರ್ ಎಸ್ ಎಸ್ ಮುಖಂಡ ಅರವಿಂದರಾವ್ ದೇಶಪಾಂಡೆ ಪಾರಾಗಿದ್ದಾರೆ.ನೋಡ ನೋಡುತ್ತಿದ್ದಂತೆ ದಾವಿಸಿದ ಬಂದ ಕಸ ವಿಲೇವಾರಿ ವಾಹನ
ಇದಕ್ಕಿದ್ದಂತೆ ಕಾರಿಗೆ ಡಿಕ್ಕಿಯಾಗಿ ಅವಘಡ ಸಂಭವಿಸಿದೆ.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದ ಘಟನೆ ಎಂಥವರನ್ನೂ ಸಹ ಬೆಚ್ಚಿ ಬೀಳಿಸುವಂತಿದೆ.ಸದ್ಯ ಅಪಘಾತದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಅಪಘಾತದಿಂದ ಆರ್ ಎಸ್ ಎಸ್ ಮುಖಂಡ ಅರವಿಂದ ರಾವ್ ದೇಶಪಾಂಡೆ ಪಾರಾಗಿದ್ದಾರೆ. ರಸ್ತೆ ಬದಿಯಲ್ಲಿ ಕಾರಿನಲ್ಲಿದ್ದವರ ಜೊತೆ ಮಾತನಾಡುತ್ತ ಅರವಿಂದರಾವ್ ದೇಶಪಾಂಡೆ ನಿಂತಿದ್ದರು.
ಈ ವೇಳೆ ದಿಢೀರನೆ ದಾವಿಸಿ ಕಸವಿಲೇವಾರಿ ವಾಹನ ಹಿಂಬದಿಯಿಂದ ಕಾರಿಗೆ ಡಿಕ್ಕಿಯಾಗಿದೆ.ಈ ವೇಳೆ ಸ್ಥಳೀಯರು ಕಸವಿಲೇವಾರಿ ವಾಹನದ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ..
ಈ ವೇಳೆ ಎಲ್ಲರ ಬಳಿ ‌ಕ್ಷಮೆ ಕೇಳಿ ವಾಹನ ಚಾಲಕ ಅಲ್ಲಿಂದ ತೆರಳಿದ್ದು ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

TV24 News Desk
the authorTV24 News Desk

Leave a Reply

error: Content is protected !!