
ಬೆಳಗಾವಿ:
80 ವರ್ಷದ ಮಹಿಳೆಯಿಂದಲೇ ಕೋಟ್ಯಂತರ ಜಮೀನು ಪರಬಾರೆ ಮಾಡಲಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೇರೊಬ್ಬರ ಜಮೀನು ತನ್ನದೆಂದು ಬಿಂಬಿಸಿ ಅಕ್ರಮ ಮಾರಾಟ ಮಾಡಲಾಗಿದೆ.ಬೆಳಗಾವಿ ತಾಲೂಕಿನ ವಡಗಾಂವ ಗಣೇಶ ಕಾಲೋನಿ ನಿವಾಸಿ ಮಂದಾಕಿನಿ ಪಾರಿಶ್ವಾಡಕರ್(80) ಬಂಧಿತ ಆರೋಪಿಯಾಗಿದ್ದು
ಮಾಲೀಕೆಯಂತೆ ನಟಿಸಿ ನಕಲಿ ದಾಖಲೆ ಸೃಷ್ಟಿಸಿ ಬೇರೊಬ್ಬರ ಆಸ್ತಿಯನ್ನೆ ಅಜ್ಜಿ ಮಾರಾಟ ಮಾಡಿದ್ದಾಳೆ.ಕಣಬರ್ಗಿ ರಸ್ತೆಯ ಬೆಳಗಾವಿ ಮಹಾಂತೇಶ ನಗರದಲ್ಲಿರುವ ಪ್ಲಾಟ್ ನಂ.2313 ಹಾಗೂ ಸಿಟಿಎಸ್ ನಂ.9449ರ ಜಾಗ ರತ್ನಾ ಯಶವಂತ ಮಲ್ಲೂಕರ್ ಹೆಸರಿನಲ್ಲಿತ್ತು. ಈ ಜಾಗೆಯನ್ನು ಅಕ್ರಮವಾಗಿ ಪರಭಾರೆ ಮಾಡುವ ಉದ್ದೇಶದಿಂದ ನಕಲಿ ದಾಖಲೆ ಸೃಷ್ಟಿಸಿದ ಆರೋಪ ಅಜ್ಜಿಯ ವಿರುದ್ದ ಕೇಳಿ ಬಂದಿದ್ದು 2023ರ ಸೆಪ್ಟೆಂಬರ್ 16ರಂದು ವೆಬ್ ಕ್ಯಾಮೆರಾದಲ್ಲಿ ಮಾಲೀಕೆಯಂತೆ ಫೋಟೊ ಹಾಗೂ ನಕಲಿ ಹೆಬ್ಬೆರಳು–ಸಹಿ ನೀಡಿ ಅಜ್ಜಿ ಆಸ್ತಿಯನ್ನು ಮಾರಾಟ ಮಾಡಿದ್ದಾಳೆ.
ನಕಲಿ ದಾಖಲೆಗಳಿಂದ ಕೋಟ್ಯಂತರ ಮೌಲ್ಯದ ಜಮೀನು ಪರಭಾರೆ ಮಾಡಿದ ಆರೋಪದ ಹಿನ್ನೆಲೆ ಅಜ್ಜಿಯನ್ನು ಬಂಧಿಸಲಾಗಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ರತ್ನಾ ಮಲ್ಲೂಕರ್ ಎಂಬುವವರಿಂದ ದೂರು ನೀಡಲಾಗಿದ್ದು ತನಿಖೆ ನಡೆಸಿ ಮಂದಾಕಿನಿಗೆ ಸಹಕರಿಸಿದ ಅನಿಲ ಮಗದುಮ್ ಎಂಬಾತನನನ್ನಹ
ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದು ಮಾರ್ಕೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












